ದೇಶ

ಕ್ವಾರಂಟೈನ್ ಭೀತಿ ಬೇಡ, ಸರ್ಕಾರದಿಂದ ಬಚ್ಚಿಟ್ಟುಕೊಳ್ಳದಿರಿ: ನಿಜಾಮುದ್ದೀನ್ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನರಿಗೆ ಮುಸ್ಲಿಂ ಮೌಲ್ವಿ ಮನವಿ

Manjula VN

ನವದೆಹಲಿ: ಸರ್ಕಾರ ಹಾಗೂ ಕ್ವಾರಂಟೈನ್'ಗೆ ಭೀತಿಗೊಳಗಾಗದಿರಿ, ಸರ್ಕಾರದಿಂದ ಬಚ್ಚಿಟ್ಟುಕೊಳ್ಳುವ ಪ್ರಯತ್ನ ಬೇಡ ಎಂದು ಮುಸ್ಲಿಂ ಮೌಲ್ವಿಯೊಬ್ಬರು ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನರಿಗೆ ತಿಳಿಸಿದ್ದಾರೆ. 

ಮುಸ್ಲಿಂ ಮೌಲ್ವಿ ಇಮಾಮ್ ಉಮರ್ ಇಲ್ಯಾಸಿ ಮಾತನಾಡಿ,  ನಿಜಾಮುದ್ದೀನ್ ಮರ್ಕಾಜ್ ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರು ಬಚ್ಚಿಟ್ಟುಕೊಳ್ಳಬಾರದು. ಸರ್ಕಾರದ ಬಗ್ಗ ಭಯ ಪಡುವುದು ಬೇಡ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲಾ ಮುಸ್ಲಿಂ ಸಹೋದರರು ಹಾಗೂ ಮಸೀದಿ ನಿರ್ವಹಣಾ ಸಮಿತಿ ಸದಸ್ಯರೆಲ್ಲರೂ ಹೊರಗೆ ಬಂದು, ಸರ್ಕಾರಕ್ಕೆ ಮಾಹಿತಿ ನೀಡಬೇಕಿದೆ. ಸರ್ಕಾರದ ಬಗ್ಗೆ ಭೀತಿಗೊಳಗಾಗಬೇಡಿ ಎಂದು ಹೇಳಿದ್ದಾರೆ. 

ಕ್ವಾರಂಟೈನ್'ಗೆ ಒಳಗಾದರೆ, ನಿಮಗೆ ಶಿಕ್ಷೆ ನೀಡಿದಂತಲ್ಲ. ಇದು ನಿಮ್ಮ ಹಾಗೂ ಇತರರ ಸುರಕ್ಷತೆಯ ಪ್ರಶ್ನೆಯಾಗಿದೆ. ಕ್ವಾರಂಟೈನ್ ನಲ್ಲಿದ್ದವರು ಜೈಲಿನಲ್ಲಿ ಶಿಕ್ಷೆ ಅನುಭವಿಸಿದಂತೆ ಎಂದು ತಿಳಿಯಬಾರದು. ಇದು ಕೇವಲ ಸುರಕ್ಷತೆಯ ವಿಚಾರವಾಗಿದೆ. ರೋಗದಿಂದ ನಿಮ್ಮನ್ನು ಗುಣಪಡಿಸಲು ಇರುವ ದಾರಿ ಕ್ವಾರಂಟೈನ್ ಆಗಿದೆ. ವ್ಯಕ್ತಿಯ ಜೀವ ಹಾಗೂ ಜೀವನವನ್ನು ಕಾಪಾಡುವುದು ಅತ್ಯಂತ ಪವಿತ್ರವಾದ ಕೆಲಸವೆಂದು ಇಸ್ಲಾಂ ಹೇಳುತ್ತದೆ. ರೋಗವನ್ನು ಧರ್ಮ ಅಥವಾ ಜಾತಿಗೆ ತಾಳೆ ಹಾಕದಿರಿ. 

ಲಾಕ್'ಡೌನ್'ನ್ನು ಪ್ರತೀಯೊಬ್ಬರೂ ಗೌರವಿಸಬೇಕು. ಲಾಕ್'ಡೌನ್ ನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಈ ರೋಗಕ್ಕೆ ಇದನ್ನು ಬಿಟ್ಟರೆ, ಬೇರಾವುದೇ ಚಿಕಿತ್ಸೆಗಳಿಲ್ಲ ಎಂದು ತಿಳಿಸಿದ್ದರೆ.

SCROLL FOR NEXT