ದೇಶ

ಕೊರೋನಾ ಎಫೆಕ್ಟ್: ನವಜಾತ ಶಿಶುಗಳಿಗೆ ಕೊರೋನಾ- ಲಾಕ್ ಡೌನ್ ಎಂದು ನಾಮಕರಣ 

Shilpa D

ಲಕ್ನೋ: ಉತ್ತರ ಪ್ರದೇಶದಲ್ಲಿ ನವಜಾತ ಶಿಶುಗಳಿಗೆ 'ಕೊರೊನಾ' ಮತ್ತು 'ಲಾಕ್‌ಡೌನ್‌' ಎಂದು ನಾಮಕರಣ ಮಾಡಲಾಗಿದೆ.  ಈ ಹೆಸರುಗಳನ್ನು ನಾಮಕರಣ ಮಾಡುವ ಮೂಲಕ ಇಬ್ಬರು ಮಕ್ಕಳಿಗೆ ಸಂಬಂಧಿಸಿದ ಎರಡೂ ಕುಟುಂಬಗಳು ಕೊರೊನಾ ಬಗ್ಗೆ ಜನರು ಜಾಗೃತರಾಗಲಿ ಎನ್ನುವ ಆಶಯ ಹೊಂದಿವೆ. 

ದೇಶದಲ್ಲಿ ಜನತಾ ಕರ್ಫ್ಯೂ ಇದ್ದ ದಿನ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಜನಿಸಿದ ಹೆಣ್ಣು ಮಗುವಿಗೆ ಕೊರೊನಾ ಎಂದು ಹೆಸರಿಡಲಾಗಿದೆ. ಇದಾದ ಒಂದು ವಾರ ನಂತರ ದಿಯೋರಿಯಾ ಜಿಲ್ಲೆಯಲ್ಲಿ ಹುಟ್ಟಿದ ಗಂಡು ಮಗುವಿಗೆ ಲಾಕ್‌ಡೌನ್‌ ಎಂದು ನಾಮಕರಣ ಮಾಡಲಾಗಿದೆ. 

ಈ ಬಗ್ಗೆ ಮಾತನಾಡಿರುವ ದಿಯೋರಿಯಾ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಆರ್‌.ಪಿ. ತ್ರಿಪಾಠಿ, 'ಭಾನುವಾರ ಸಂಜೆ ಜನಿಸಿದ ಮಗುವಿಗೆ ಲಾಕ್‌ಡೌನ್‌ ಎಂದು ಹೆಸರಿಡಲಾಯಿತು. ನಾವೆಲ್ಲರೂ ಲಾಕ್‌ಡೌನ್‌ ಪಾಲಿಸುವುದು ಅನಿವಾರ್ಯ' ಎಂದು ತಿಳಿಸಿದ್ದಾರೆ.  ಮಗುವನ್ನು ಬುಧವಾರ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ.

ಉತ್ತರ ಪ್ರದೇಶದ ದಿಯೋರಾ ಜಿಲ್ಲೆಯ ಗ್ರಾಮವೊಂದರ ನಿವಾಸಿಗಳಾದ ನೀರಜಾ ದೇವಿ ಮತ್ತು ಪವನ್‌ ಪ್ರಸಾದ್‌ ಅವರಿಗೆ ಈ ಗಂಡು ಮಗು ಜನಿಸಿದೆ.

SCROLL FOR NEXT