ದೇಶ

ಕರ್ನಾಟಕದ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಲ್ಲದ ಕೇರಳ ಜನರ ಚಿಕಿತ್ಸೆಗೆ ಸಂಚಾರಕ್ಕೆ ಅನುಮತಿ

Shilpa D

ತಿರುವನಂತಪುರ: ಕರ್ನಾಟಕ ಮತ್ತು ತಮಿಳುನಾಡಿನ ಗಡಿಯಲ್ಲಿರುವ ಜನರಿಗೆ ವಯನಾಡಿನಲ್ಲಿ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುವುದು ಮತ್ತು ಕರ್ನಾಟಕದ ಆಸ್ಪತ್ರೆಗಳಿಗೆ ಕೊರೊನಾ ಸೋಂಕು ಇಲ್ಲದ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಗೆ ಅವಕಾಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.  

ಥಲಪಾಡಿ ಚೆಕ್ ಪೋಸ್ಟ್ ನಲ್ಲಿರುವ ಕರ್ನಾಟಕದ ವೈದ್ಯಕೀಯ ತಂಡ, ವೈದ್ಯಕೀಯ ಪ್ರಮಾಣಪತ್ರಗಳೊಂದಿಗೆ ಯಾವ ಆಸ್ಪತ್ರೆಗೆ ಹೋಗುವುದೆಂದು ನಿಶ್ಚಯಿಸಿ ಬರುವವರನ್ನು ಪರಿಶೀಲಿಸಿ ಅನುಮತಿ ನೀಡುತ್ತದೆ ಎಂದು ಕರ್ನಾಟಕ ಪ್ರಕಟಿಸಿದೆ.

ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಜನರಿಗೆ ವಯನಾಡ್ ಜಿಲ್ಲೆಯ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ತಲುಪಲು ಬೇಕಾದ ಸೌಕರ್ಯವನ್ನು ಕೇರಳ ಸರ್ಕಾರ ವ್ಯವಸ್ಥೆ ಮಾಡಿದೆ. ಕರ್ನಾಟಕದ ಬೈರಕುಪ್ಪ ಮತ್ತು ಮಚ್ಚೂರ್ ಮುಂತಾದ ಸ್ಥಳಗಳಿಂದ ತಮಿಳುನಾಡಿನ ಪಾಂಡಲ್ಲೂರ್ ಮತ್ತು ಗುಡಲ್ಲೂರು ತಾಲ್ಲೂಕಿನಲ್ಲಿರುವ ಜನರು ವಯನಾಡ್ ಜಿಲ್ಲೆಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಕಳೆದ ಕೆಲವು ದಿನಗಳಲ್ಲಿ ಬೈರಕುಪ್ಪಿಯಿಂದ ಒಟ್ಟು 29 ಜನರು ಬಂದಿದ್ದಾರೆ. ತಮಿಳುನಾಡಿನಿಂದ 44 ಜನರು ಚಿಕಿತ್ಸೆಗಾಗಿ ಬಂದಿದ್ದರು. ಬೇರೆ ಯಾವುದನ್ನೂ ನಾವು ಅನುಮತಿಸುವುದಿಲ್ಲ ಎಂದು ಹೇಳಲಾಗಿದೆ.

ಕೋವಿಡ್‌ 19 ರ ಸಂದರ್ಭದಲ್ಲಿ ಉಚಿತ ಪಡಿತರದಲ್ಲಿ ಅನಾಥಾಶ್ರಮಗಳು, ಅನುಮತಿ ಅನ್ವಯ ಪಡಿತರ ಸಿಗುವ ಕಾನ್ವೆಂಟ್‌ಗಳು,ಆಶ್ರಮಗಳು, ಮಠಗಳು, ವೃದ್ಧಾಶ್ರಮಗಳು ಮತ್ತು ಪಡಿತರಕ್ಕಾಗಿ ಅನುಮತಿ ನೀಡುವ ಇತರ ಸಂಸ್ಥೆಗಳನ್ನು ಒಳಗೊಂಡಿರುತ್ತದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

SCROLL FOR NEXT