ಬ್ರೆಜಿಲ್ ನ ಅಧ್ಯಕ್ಷ-ಪ್ರಧಾನಿ ಮೋದಿ 
ದೇಶ

ಹೈಡ್ರೋಕ್ಸಿಕ್ಲೋರೊಕ್ವಿನ್ ಗಾಗಿ ಭಾರತಕ್ಕೆ ಮನವಿ ಮಾಡಲು ರಾಮಾಯಣವನ್ನು ಉಲ್ಲೇಖಿಸಿದ ಬ್ರೆಜಿಲ್ ನ ಅಧ್ಯಕ್ಷ! 

ಕೊರೋನಾ ವೈರಸ್ ಸೋಂಕಿತರನ್ನು ಗುಣಪಡಿಸುವುದಕ್ಕೆ ತಾತ್ಕಾಲಿಕವಾಗಿ ಹೈಡ್ರೋಕ್ಸಿಕ್ಲೋರೊಕ್ವಿನ್ ಔಷಧ ಬಳಕೆಯಾಗುತ್ತಿದೆ. ಈ ಔಷಧಕ್ಕಾಗಿ ಹೆಚ್ಚಿನ ರಾಷ್ಟ್ರಗಳು ಭಾರತವನ್ನೇ ಅವಲಂಬಿಸಿದ್ದು, ರಫ್ತು ಮಾಡಬೇಕಾಗಿ ಮನವಿ ಮಾಡಿಕೊಳ್ಳುತ್ತಿವೆ. 

ನವದೆಹಲಿ: ಕೊರೋನಾ ವೈರಸ್ ಸೋಂಕಿತರನ್ನು ಗುಣಪಡಿಸುವುದಕ್ಕೆ ತಾತ್ಕಾಲಿಕವಾಗಿ ಹೈಡ್ರೋಕ್ಸಿಕ್ಲೋರೊಕ್ವಿನ್ ಔಷಧ ಬಳಕೆಯಾಗುತ್ತಿದೆ. ಈ ಔಷಧಕ್ಕಾಗಿ ಹೆಚ್ಚಿನ ರಾಷ್ಟ್ರಗಳು ಭಾರತವನ್ನೇ ಅವಲಂಬಿಸಿದ್ದು, ರಫ್ತು ಮಾಡಬೇಕಾಗಿ ಮನವಿ ಮಾಡಿಕೊಳ್ಳುತ್ತಿವೆ. 

ಈ ಪರಿಸ್ಥಿತಿಯಲ್ಲಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಭಾರತಕ್ಕೆ ಹೈಡ್ರೋಕ್ಸಿಕ್ಲೋರೊಕ್ವಿನ್ ಗಾಗಿ ಮನವಿ ಮಾಡಿ ಬರೆದಿರುವ ಪತ್ರವೊಂದು ಗಮನ ಸೆಳೆದಿದೆ. 

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ಬೋಲ್ಸನಾರೊ ರಾಮಾಯಣ ಘಟನೆ ಉಲ್ಲೇಖಿಸಿದ್ದು, ರಾಮನ ಸಹೋದರ ಲಕ್ಷ್ಮಣನನ್ನು ಬದುಕಿಸಲು ಹನುಮಂತ ಹಿಮಾಲಯದಿಂದ ಸಂಜೀವಿನಿ ಔಷಧ ತಂದ, ಜೀಸಸ್ ಅನಾರೋಗ್ಯ ಎದುರಿಸುತ್ತಿದ್ದವರನ್ನು ಗುಣಪಡಿಸಿ ಬಾರ್ಟಿಮಿಯುಗೆ ಕಣ್ಣು ಕಾಣುವಂತೆ ಮಾಡಿದ. ಹಾಗೆಯೇ ಭಾರತ ಮತ್ತು ಬ್ರೆಜಿಲ್ ಜೊತೆಗೂಡಿ ಎಲ್ಲಾ ಜನರಿಗೋಸ್ಕರ ಜಾಗತಿಕವಾಗಿ ಬಿಕ್ಕಟ್ಟನ್ನು ನಿವಾರಿಸಲು ಶ್ರಮಿಸುತ್ತಿವೆ ಎಂದು ಹೇಳಿದ್ದಾರೆ. 

ಬ್ರೆಜಿಲ್ ನಲ್ಲಿ ಈವರೆಗೂ 14,000 ಕೊರೋನಾ ಪ್ರಕರಣಗಳು ವರದಿಯಾಗಿದ್ದು 688 ಸಾವುಗಳು ಸಂಭವಿಸಿವೆ. ಭಾರತ ಮಾ.26 ರಿಂದ ಹೈಡ್ರೋಕ್ಸಿಕ್ಲೋರೊಕ್ವಿನ್ ಔಷಧ ರಫ್ತಿಗೆ ನಿರ್ಬಂಧ ವಿಧಿಸಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್, ಇಂದು ರಾಜೀನಾಮೆ ಅನುಮಾನ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿಎಂ ಕುರ್ಚಿ ಕದನ: ಸಿದ್ದರಾಮಯ್ಯ ಮನೆ ಮುಂದೆ ಬೆಂಬಲಿಗರ ಶಕ್ತಿ ಪ್ರದರ್ಶನ, ರಾಜೀನಾಮೆ ನೀಡದಂತೆ ಆಗ್ರಹ..!

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

SCROLL FOR NEXT