ದೇಶ

ಕೊರೋನಾ ತಡೆಗೆ ಧಾರ್ಮಿಕ ನಾಯಕರ ಕೊಡುಗೆಗೆ ಮೋದಿ ಧನ್ಯವಾದ

Srinivas Rao BV

ನವದೆಹಲಿ: ಕೊರೋನಾ ತಡೆಗೆ ಧಾರ್ಮಿಕ ನಾಯಕರ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದ್ದು ಧನ್ಯವಾದ ತಿಳಿಸಿದ್ದಾರೆ.  

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಸಮಾಜಕ್ಕೆ ಸೇವೆ ಸಲ್ಲಿಸುವ ವಿಷಯದಲ್ಲಿ ಸಂತರು, ಸಾಧುಗಳು, ಸಮುದಾಯದ ಸಂಘಟನೆಗಳ ಪಾತ್ರ ಅತ್ಯಂತ ಮೌಲ್ಯಯುತವಾದದ್ದು, ಅವರ ಸಹಾನುಭೂತಿಯ ಮನೋಭಾವ ಅಸಮಾನ್ಯವಾದದ್ದು ಎಂದು ಹೇಳಿದ್ದಾರೆ.

ಕೊರೋನಾ ತಡೆಗೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ನಡೆಸಿದ ಮುಖ್ಯಮಂತ್ರಿಗಳ ಸಭೆಯಲ್ಲಿಯೂ ಮೋದಿ ಧಾರ್ಮಿಕ ನಾಯಕರ ಸಹಾಯ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದರು. ಪರಿಣಾಮ ವಿಶ್ವಹಿಂದೂ ಪರಿಷತ್ ಹನುಮಾನ್ ಜಯಂತಿ ದಿನದಂದು ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸದಿರಲು ತೀರ್ಮಾನಿಸಿತು. ಮುಸ್ಲಿಮ್ ನಾಯಕರೂ ಸಹ ಶಬ್-ಎ-ಬರತ್ ಕಾರ್ಯಕ್ರಮವನ್ನು ಸಾರ್ವಜನಿಕವಾಗಿ ನಡೆಸದೇ ಮನೆಯಲ್ಲಿ ಉಳಿಯಲು ನಿರ್ಧರಿಸಿದರು. 

ಇದೇ ವೇಳೆ ಪಿಎಂ-ಕೇರ್ಸ್ ಗೆ ನೆರವು ನೀಡಿ, ಕೋವಿಡಿ-19 ವಿರುದ್ಧದ ಸಮರವನ್ನು ಪರಿಣಾಮಕಾರಿಯಾಗಿಸಿದ್ದಕ್ಕಾಗಿ ಸಂತ್ ನಿರಂಕರಿ ಮಂಡಲ್ ಗೂ ಮೋದಿ ಧನ್ಯವಾದ ತಿಳಿಸಿದ್ದಾರೆ. 

SCROLL FOR NEXT