ದೇಶ

ಸಿಆರ್ ಪಿಎಫ್ ಸಿಬ್ಬಂದಿ ಪತ್ನಿಯರ ಈ ಕಾರ್ಯಕ್ಕೆ ಚಪ್ಪಾಳೆ ತಟ್ಟಲೇ ಬೇಕು!

Sumana Upadhyaya

ನವದೆಹಲಿ: ಕೊರೋನಾ ವಿರುದ್ಧ ತಮ್ಮ ಪತಿಯಂದಿರೊಂದಿಗೆ ಹೋರಾಟಕ್ಕೆ ಇಳಿದಿರುವ ಸಿಆರ್ ಪಿಎಫ್ ಸಿಬ್ಬಂದಿ ಪತ್ನಿಯರು ಆರೋಗ್ಯ ಸೇವೆ ಸಿಬ್ಬಂದಿಗೆ ವೈಯಕ್ತಿಕ ರಕ್ಷಣಾ ಉಪಕರಣ(ಪಿಪಿಇ) ಕಿಟ್ ಗಳು ಮತ್ತು ಮಾಸ್ಕ್ ಗಳನ್ನು ವಿತರಿಸುತ್ತಿದ್ದಾರೆ.

ಸಿಆರ್ ಪಿಎಫ್ ನ ಎಲ್ಲಾ 46 ಬೆಟಾಲಿಯನ್ ಗ್ರೂಪ್ ಕೇಂದ್ರಗಳಲ್ಲಿ  ಅರೆ ಸೇನಾಪಡೆ ಸಿಬ್ಬಂದಿಯ ಪತ್ನಿಯರು ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದು ಪಿಪಿಇ ಕಿಟ್ ಗಳು, ಸ್ಯಾನಿಟೈಸರ್ ಗಳು, ಮಾಸ್ಕ್ ಗಳನ್ನು ವೈದ್ಯಕೀಯ ಸೇವಾ ಸಿಬ್ಬಂದಿಗೆ ಪೂರೈಸುತ್ತಿದ್ದಾರೆ ಎಂದು ಸಿಆರ್ ಪಿಎಫ್ ಡಿಐಜಿ ಮೊಸ್ಸೆಸ್ ದಿನಕರನ್ ತಿಳಿಸಿದ್ದಾರೆ.

ಸಿಆರ್ ಪಿಎಫ್ ಸಿಬ್ಬಂದಿ ಪತ್ನಿಯರು ಸುಮಾರು ಹದಿನೈದು ದಿನಗಳಿಂದ ದಣಿವರಿಯದೆ ಕೆಲಸ ಮಾಡುತ್ತಿದ್ದು, ನೂರಾರು ಪಿಪಿಇ ಕಿಟ್‌ಗಳು, ಮಾಸ್ಕ್ ಗಳು, ಏಪ್ರನ್‌ಗಳು, ಕೈಗವಸುಗಳನ್ನು ಈಗಾಗಲೇ ಉತ್ಪಾದಿಸಿ ಆಸ್ಪತ್ರೆಗಳಿಗೆ ಸರಬರಾಜು ಮಾಡುತ್ತಿದ್ದಾರೆ. ದೇಶದ ಹಲವು ಭಾಗಗಳಲ್ಲಿ ಈ ಕೆಲಸ ನಡೆಯುತ್ತಿದ್ದು ಇನ್ನೂ ಹಲವರು ಈ ಕೆಲಸಕ್ಕೆ ಕೈಜೋಡಿಸಲಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ಸಿಕ್ಕಿದೆ.

ಸಿಆರ್ ಪಿಎಫ್ ನ ಕೌಟುಂಬಿಕ ಕಲ್ಯಾಣ ಒಕ್ಕೂಟದಡಿ ಈ ಕೆಲಸ ನಡೆಯುತ್ತಿದೆ. ತಮ್ಮ ಪ್ರದೇಶಗಳಲ್ಲಿ ಇದಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸುವಂತೆ, ಕೋವಿಡ್-19 ವಿರುದ್ಧ ಹೋರಾಡಲು ಸಹಾಯ ಮಾಡುವಂತೆ ಸಿಆರ್ ಪಿಎಫ್ ನ ಮಹಾ ನಿರ್ದೇಶಕಿ ಎ ಪಿ ಮಾಹೇಶ್ವರಿ ತಮ್ಮ ಸಿಬ್ಬಂದಿಗೆ ಕರೆ ನೀಡಿದ್ದರು. ಈ ಕಾರ್ಯಕರ್ತರು ಸ್ಥಳೀಯ ರೈತರಿಂದ ತರಕಾರಿ, ಹಣ್ಣು, ಹೂ ಮತ್ತು ಹಾಲುಗಳನ್ನು ನೇರವಾಗಿ ಖರೀದಿಸುವಂತೆ ಸಹ ಸೂಚಿಸಲಾಗಿದೆ.

SCROLL FOR NEXT