ದೇಶ

ಪಿಎಂ ಕೇರ್ಸ್ ನಿಧಿ ಸ್ಥಾಪನೆ ಸಿಂಧುತ್ವ ಪ್ರಶ್ನಿಸಿದ್ದ ಮನವಿ ವಜಾ

Raghavendra Adiga

ನವದೆಹಲಿ: ಕರೋನ ಪಿಡುಗಿನಿಂದ ಉದ್ಭವಿಸಿರುವ ಪರಿಸ್ಥಿತಿ ನಿಭಾಯಿಸಲು ಸಾರ್ವಜನಿಕ ದೇಣಿಗೆ ಸ್ವೀಕರಿಸಲು ಪಿಎಂ ಕೇರ್ಸ್ ನಿಧಿ ಸ್ಥಾಪಿಸಿರುವ ಕೇಂದ್ರದ ತೀರ್ಮಾನವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ನಿಧಿಯ ಸಿಂದುತ್ವ ಪ್ರಶ್ನಿಸಿ ನ್ಯಾಯವಾದಿ ಎಂಎಲ್ ಶರ್ಮ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ಎಸ್ಎ ಬೋಬ್ಡೆ ಮತ್ತು ನ್ಯಾಯಾಧೀಶರಾದ ಎಲ್ ನಾಗೇಶ್ವರ ರಾವ್ ಮತ್ತು ಎಂಎಂ ಶಾಂತನಗೌಡರ್ ಅವರನ್ನು ಒಳಗೊಂಡ ನ್ಯಾಯಪೀಠವು, ಮನವಿಯನ್ನು ವಜಾ ಮಾಡಿದೆ ಅಲ್ಲದೆ ವಿಷಯವನ್ನು ಸ<ಪೂರ್ಣ ತಪ್ಪಾಗಿ ಗ್ರಹಿಸಿ ಸಲ್ಲಿಸಿರುವ ಅರ್ಜಿ ಇದಾಗಿದ್ದು ಇದಕ್ಕಾಗಿ ನಿಮ್ಮ ಮೇಲೆ ದಂಡ ವಿಧಿಸಬಹುದು ಎಂದು ಎಚ್ಚರಿಕೆಯನ್ನೂ ನೀಡಿದೆ.

ಕೊರೋನಾವೈರಸ್ ನಂತಹಾ ತುರ್ತು ಸಂದರ್ಭವನ್ನು ಎದುರಿಸಲು ಹಾಗೂ ಸಂತ್ರಸ್ಥರಿಗೆ ಪರಿಹಾರ ಒದಗಿಸುವ ಉದ್ದೇಶದೊಡನೆ ಕೇಂದ್ರ ಸರ್ಕಾರ ಮಾರ್ಚ್ ೨೮ರಂದು ಪಿಎಂ ಕೇರ್ಸ್ ನಿಧಿಯನ್ನು ಸ್ಥಾಪಿಸಿತ್ತು.

SCROLL FOR NEXT