ದೇಶ

ಕೋವಿಡ್ ಎಫೆಕ್ಟ್: ರಾಫೆಲ್ ಫೈಟರ್ ಜೆಟ್ ವಿತರಣೆ 'ಕೆಲ ವಾರಗಳಷ್ಟು' ಮುಂದಕ್ಕೆ

Raghavendra Adiga

ನವದೆಹಲಿ: ಫ್ರಾನ್ಸ್ ಮತ್ತು ಭಾರತ ಎರಡೂ ರಾಷ್ಟ್ರಗಳಲ್ಲಿ ಕೊರೋನಾವೈರಸ್  ಲಾಕ್‌ಡೌನ್ ಇರುವ ಕಾರಣ ಮೊದಲ ಹಂತದ ರಾಫೆಲ್ ಯುದ್ಧ ವಿಮಾನಗಳ ವಿತರಣೆಯು ಈಗ ಕೆಲವು ವಾರಗಳ ವಿಳಂಬವಾಗಲಿದೆ.

"ಪ್ರಸ್ತುತ, ಲಾಕ್ ಡೌನ್ ಕಾರಣ ವಿತರಣಾ ವೇಳಾಪಟ್ಟಿಯನ್ನು ಕೆಲವು ವಾರಗಳ ಕಾಲ ಮುಂದಕ್ಕೆ ಹಾಕಲಾಗಿದೆ.ದರೆ ಈ ನಿಟ್ಟಿನಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ" ಎಂದು ಐಎಎಫ್ ಮೂಲಗಳು ಇಲ್ಲಿ ತಿಳಿಸಿವೆ. ಫ್ರಾನ್ಸ್‌ನಿಂದ ವಿತರಣೆಯಲ್ಲಿನ ವಿಳಂಬದ ಹೊರತಾಗಿ, ಅಂಬಾಲಾ ವಾಯುನೆಲೆಯಲ್ಲಿ ಇನ್ನೂ ಕೆಲವು ಸಿದ್ಧತೆಗಳು ಪೂರ್ಣಗೊಂಡಿಲ್ಲ, ಇದು ಫ್ರೆಂಚ್ ಮೂಲದ ಫೈಟರ್ ಗಳಿಗಾಗಿ ಮೊದಲ ಸ್ಕ್ವಾಡ್ರನ್ ಅನ್ನು ನಿರ್ಮಿಸಲಿದೆ.

ಈ ಮುನ್ನಿನ ಒಪ್ಪಂದದಂತೆ ವಿಮಾನವು ಮೇ ಅಂತ್ಯದ ವೇಳೆಗೆ ಭಾರತವನ್ನು ತಲುಪಬೇಕಿತ್ತು ಆದರೆ ಈಗ ಕೆಲವು ವಾರಗಳ ವಿಳಂಬವಾಗಲಿದೆ. ಲಾಕ್‌ಡೌನ್‌ಗಳು ಮುಗಿದ ನಂತರವೇ ಅಂತಿಮ ವಿತರಣಾ ವೇಳಾಪಟ್ಟಿ ನಿರ್ಧಾರವಾಗಲಿದೆ.

SCROLL FOR NEXT