ದೇಶ

ಮಧ್ಯಪ್ರದೇಶ: ಬಿಯರ್ ಎಂದು ಭಾವಿಸಿ ಆಸಿಡ್ ಸೇವಿಸಿದ ವ್ಯಕ್ತಿ ಸಾವು!

Raghavendra Adiga

ಭೋಪಾಲ್: ಮದ್ಯ ಸಿಕ್ಕದೆ ಹತಾಶನಾಗಿದ್ದ ವ್ಯಕ್ತಿಯೊಬ್ಬ ಬಿಯರ್ ಬಾಟಲ್ ನಲ್ಲಿ ಸಂಗ್ರಹಿಸಲಾಗಿದ್ದ ಆಸಿಡ್ ಅನ್ನು ಸೇವಿಸಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನಗರದಲ್ಲಿ ನಡೆದಿದೆ.

ಸೋಮವಾರ ಚಕ್ಕಿ ಕ್ರಾಸಿಂಗ್ ನಿವಾಸಿ ಸುರೇಶ್ ಸಜಲ್ಕರ್ (50) ಎಂಬಾತ  ಆಸಿಡ್ ಅನ್ನು ಬಿಯರ್ ಎಂದು ತಪ್ಪಾಗಿ ಭಾವಿಸಿ ಕುಡಿದು ಸಾವಿಗೀಡಾಗಿದ್ದಾನೆ. 

ಆಸಿಡ್ ಕುಡಿದ ತಕ್ಷಣವೇ ಆತನ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತುಆದರೆ ಚಿಕಿತ್ಸೆ ಫಲಿಸದೆ ನಿಧನನಾಗಿದ್ದಾನೆ ಎಂದು  ಟಿ ಟಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂಜೀವ್ ಚೌಕ್ಸೆ ಹೇಳಿದ್ದಾರೆ.

ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೋಲೀಸರು ತಿಳಿಸಿದ್ದಾರೆ.

ಏತನ್ಮಧ್ಯೆ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಮಂಗಳವಾರ ಪ್ರಕಟಣೆ ಹೊರಡಿಸಿದ್ದು, ಕೊರೋನಾ ಲಾಕ್‌ಡೌನ್ ವಿಸ್ತರಣೆಯಾದ ಪರಿಣಾಮ  ರಾಜ್ಯದಲ್ಲಿ ಮೇ 3 ರವರೆಗೆ ಸಿನೆಮಾ ಹಾಲ್‌ಗಳು ಮತ್ತು ಮಾಲ್‌ಗಳು ಮುಚ್ಚಲ್ಪಡುತ್ತವೆ, ಏಪ್ರಿಲ್ 20 ರವರೆಗೆ ಮದ್ಯದಂಗಡಿಗಳು ಮುಚ್ಚಲ್ಪಡುತ್ತವೆ.

ಮಾರ್ಚ್ 25 ರಂದು ಲಾಕ್‌ಡೌನ್ ಜಾರಿಗೊಳಿಸಿದಾಗಿನಿಂದಲೂ ರಾಜ್ಯದಲ್ಲಿ ಮದ್ಯ್ ದೊರಕದೆ ಹಲವಾರು ಜನರು ನಿರಾಶರಾಗಿದ್ದಾರೆ.  "ಏಪ್ರಿಲ್ 20 ರಂದು ಮದ್ಯದಂಗಡಿಗಳು ಮತ್ತು ಬಿಯರ್ ಬಾರ್‌ಗಳು ಮತ್ತೆ ತೆರೆಯಲ್ಪಡುತ್ತವೆ ಎಂದು ನಾನು ಆಶಾವಾದಿಯಾಗಿದ್ದೇನೆ" ಎಂದು ಸ್ಥಳೀಯರೊಬ್ಬರು ಹೇಳಿದರು.

SCROLL FOR NEXT