ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ವೇತನ ವಿಳಂಬದಿಂದ ಆಕ್ರೋಶ, ಕಂಪನಿ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ ಕಾರ್ಮಿಕರು

ಲಾಕ್ ಡೌನ್ ಮಧ್ಯೆ ವೇತನ ವಿಳಂಬದ ಕಾರಣ ಆಕ್ರೋಶಗೊಂಡ ನಿರ್ಮಾಣ ಸಂಸ್ಥೆಯೊಂದರ ಕಾರ್ಮಿಕರು ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಸೊಲ್ಲಾಪುರ ಜಿಲ್ಲೆಯಲ್ಲಿ ನಡೆದಿದೆ

ಕಚೇರಿ ಮುಂಭಾಗದಲ್ಲಿನ ಕಲ್ಲುಗಳ ಚಿತ್ರ
Nagaraja AB
Updated On : 17 Apr 2020, 8:22 pm

ಮಹಾರಾಷ್ಟ್ರ: ಲಾಕ್ ಡೌನ್ ಮಧ್ಯೆ ವೇತನ ವಿಳಂಬದ ಕಾರಣ ಆಕ್ರೋಶಗೊಂಡ ನಿರ್ಮಾಣ ಸಂಸ್ಥೆಯೊಂದರ ಕಾರ್ಮಿಕರು ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಸೊಲ್ಲಾಪುರ ಜಿಲ್ಲೆಯಲ್ಲಿ ನಡೆದಿದೆ. ಕಲ್ಲು ತೂರಾಟದಿಂದ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಂಗೋಲಾ ಬಳಿಯ ಜುನೊನಿಯಲ್ಲಿರುವ ದಿಲೀಪ್ ಬಿಲ್ಡ್ಕಾನ್ ಕಚೇರಿಯ ಹೊರಗೆ ಈ ಘಟನೆ ನಡೆದಿದ್ದು, ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿ 166ರಲ್ಲಿ ಕಂಪನಿ ವಹಿಸಿಕೊಂಡಿದ್ದ ರಸ್ತೆ ನಿರ್ಮಾಣ ಯೋಜನೆಯಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ  ಕಂಪನಿಯಿಂದ ಕಾರ್ಮಿಕರಿಗೆ ಆಹಾರ ನೀಡಲು ಸಾಧ್ಯವಿಲ್ಲ, ಅರ್ಧ ಸಂಬಳ ನೀಡುವುಗಾಗಿ ನಿರ್ಮಾಣ ಸಂಸ್ಥೆಯ ಮ್ಯಾನೇಜರ್ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಕಾರ್ಮಿಕರ ಗುಂಪೊಂದು ಪೂರ್ಣ ವೇತನ ನೀಡುವಂತೆ ಒತ್ತಾಯಿಸಿದೆ.
 
ಕಂಪನಿ ಸಿಬ್ಬಂದಿ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಆಗಮಿಸಿದ್ದೇವು. ಆದರೆ, ಪೊಲೀಸರು ಬಂದ ಕೂಡಲೇ ಕಾರ್ಮಿಕರು ಕಚೇರಿ ಹಾಗೂ ಪಾರ್ಕಿಂಗ್ ಮಾಡಲಾದ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದರು ಎಂದು  ಪೊಲೀಸರು  ತಿಳಿಸಿದರು.

Advertisement

Advertisement

ಕಲ್ಲು ತೂರಾಟದಿಂದ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ಎರಡು ಪೊಲೀಸ್ ಕಾರುಗಳು ಸೇರಿದಂತೆ ಅನೇಕ ವಾಹನಗಳನ್ನು ಉದ್ರಿಕ್ತ ಗುಂಪು ಧ್ವಂಸಗೊಳಿಸಿವೆ. ಹೆಚ್ಚುವರಿ ಪೊಲೀಸ್ ತುಕಡಿಯನ್ನು ಕರೆಸಲಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ವಿವಿಧ ಸೆಕ್ಷನ್ ಗಳಡಿಯಲ್ಲಿ ಬಂಧಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement