ದೇಶ

ಲಾಕ್‌ಡೌನ್: ಶುಲ್ಕ ಹೆಚ್ಚಳವನ್ನು ಮರುಪರಿಶೀಲಿಸುವಂತೆ ಖಾಸಗಿ ಶಾಲೆಗಳಿಗೆ ಕೇಂದ್ರ ಒತ್ತಾಯ

Raghavendra Adiga

ನವದೆಹಲಿ: ಲಾಕ್‌ಡೌನ್ ಸಮಯದಲ್ಲಿ ಖಾಸಗಿ ಶಾಲೆಗಳು ವಾರ್ಷಿಕ ಶುಲ್ಕ ಹೆಚ್ಚಳ ಮತ್ತು ತ್ರೈಮಾಸಿಕ ಶುಲ್ಕವನ್ನು ಸಂಗ್ರಹಿಸುವ ನಿರ್ಧಾರಗಳನ್ನು ಮರುಪರಿಶೀಲಿಸುವಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಲ್ 'ನಿಶಾಂಕ್' ಕೇಳಿದ್ದಾರೆ.

"ವಾರ್ಷಿಕ ಶುಲ್ಕ ಹೆಚ್ಚಳದ ನಿರ್ಧಾರಗಳನ್ನು ಮರುಪರಿಶೀಲಿಸುವಂತೆ ನಾನು ಖಾಸಗಿ ಶಾಲೆಗಳನ್ನು ಒತ್ತಾಯಿಸುತ್ತೇನೆ, ಲಾಕ್ ಡೌನ್ ಸಮಯದಲ್ಲಿ ತ್ರೈಮಾಸಿಕ ಶುಲ್ಕವನ್ನು ಸಂಗ್ರಹಿಸದಂತೆ ನಾನು ಅವರಲ್ಲಿ ಕೇಳುತ್ತೇನೆ.

"ಪೋಷಕರು ಮತ್ತು ಶಾಲೆಗಳ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಶಿಕ್ಷಣ ಇಲಾಖೆಗಳು ಶುಲ್ಕ ಸಮಸ್ಯೆಯನ್ನು ಬಗೆಹರಿಸುತ್ತವೆ ಎಂದು ನಾನು ಭಾವಿಸುತ್ತೇನೆ.

"ಕೆಲವು ರಾಜ್ಯಗಳು ಲಾಕ್ ಡೌನ್ ಸಮಯದಲ್ಲಿ ಶಾಲಾ ಶುಲ್ಕ-ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಂಡಿವೆ, ಇತರೆ ರಾಜ್ಯಗಳು ಸಹ ಇದನ್ನು ಪರಿಗಣಿಸುತ್ತವೆೆ ಎಂದು  ಭಾವಿಸುತ್ತೇವೆ" ಎಂದು ನಿಶಾಂಕ್ ಹಿಂದಿಯಲ್ಲಿ ಮಾಡಿರುವ ಸರಣಿ ಟ್ವೀಟ್ ನಲ್ಲಿ ಹೇಳಿದ್ದಾ

SCROLL FOR NEXT