ದೇಶ

ಟ್ವೀಟ್ ಮೂಲಕ ಸಮುದಾಯದಲ್ಲಿ ಅಶಾಂತಿ ಹುಟ್ಟಿಸಲು ಯತ್ನ: ಪೋಗಟ್, ರಂಗೋಲಿ ವಿರುದ್ಧ ದೂರು ದಾಖಲು

Raghavendra Adiga

ಮುಂಬೈ: ಮಹಾರಾಷ್ಟ್ರದ ಔರಂಗಾಬಾದ್ ವ್ಯಕ್ತಿಯೊಬ್ಬರು ಕುಸ್ತಿಪಟು-ರಾಜಕಾರಣಿ ಬಬಿತಾ ಫೋಗಟ್ ಹಾಗೂ ನಟ ಕಂಗನಾ ರನೌತ್ ಅವರ ಸಹೋದರಿ ರಂಗೋಲಿ ಚಾಂಡೆಲ್ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಇಬ್ಬರೂ ಸಮುದಾಯಗಳಲ್ಲಿ ಅಶಾಂತಿಯನ್ನು ಹುಟ್ಟಿಸುವ ಉದ್ದೇಶದಿಂದ ನೋವೆಲ್ ಕೊರೋನಾವೈರಸ್ ಕುರಿತು ಟ್ವೀಟ್ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ತಬ್ಲಿಘಿ ಜಮಾತ್ ‌ಗೆ ಸಂಬಂಧಿಸಿರುವ ಈ ವ್ಯಕ್ತಿ ಗುರುವಾರ ಸಿಟಿ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅಧಿಕಾರಿಯೊಬ್ಬರು ಔರಂಗಾಬಾದ್ ಆಯುಕ್ತರ ಮೂಲಕ ದೂರನ್ನು ಇಬ್ಬರೂ (ಪೋಗಟ್ ಹಾಗೂ ರಂಗೋಲಿ) ವಾಸಿಸುವ ಪ್ರದೇಶಗಳಿಗೆ ರವಾನಿಸುತ್ತೇವೆ ಎಂದು ಹೇಳಿದರು.

"ಏಪ್ರಿಲ್ 2 ಮತ್ತು ಏಪ್ರಿಲ್ 15 ರಂದು ಫೋಗಟ್ ಮಾಡಿರುವ ಟ್ವೀಟ್ ಗಳನ್ನು ದೂರುದಾರರು ಉಲ್ಲೇಖಿಸಿದ್ದಾರೆ. ಏಪ್ರಿಲ್ 15 ರಂದು ಚಾಂಡೆಲ್ ಅವರ ಟ್ವೀಟ್ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಲು ಮತ್ತು ದ್ವೇಷವನ್ನು ಹರಡಲು ಉದ್ದೇಶಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಐಪಿಸಿ ಸೆಕ್ಷನ್ 153A ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪೋಗಟ್ ಹಾಗೂ  ಚಾಂಡೆಲ್ ವಿರುದ್ಧ ಪ್ರಕರಣವನ್ನು ನೋಂದಾಯಿಸಲು ಅವರು ಒತ್ತಾಯಿಸಿದ್ದಾರೆ" ಎಂದು ಅಧಿಕಾರಿ ಮಾಹಿತಿ ನೀಡಿದರು. 
 

SCROLL FOR NEXT