ದೇಶ

ಚೀನಾ ಕಳಿಸಿದ್ದ 1.70 ಲಕ್ಷ ಪಿಪಿಇ ಕಿಟ್ ಗಳ ಪೈಕಿ ಬರೊಬ್ಬರಿ 63 ಸಾವಿರ ಕಿಟ್ ಗಳು ಕೆಲಸಕ್ಕೆ ಬಾರದವು! 

Srinivas Rao BV

ನವದೆಹಲಿ: ಚೀನಾ ಭಾರತಕ್ಕೆ ಕಳಿಸಿದ್ದ 1.70 ಲಕ್ಷ ಪಿಪಿಇ ಕಿಟ್ ಗಳ ಪೈಕಿ ಬರೊಬ್ಬರಿ 63 ಸಾವಿರ ಕಿಟ್ ಗಳು ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲಗೊಂಡಿವೆ. 

ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದೆ. ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಸಿಬ್ಬಂದಿ, ವೃತ್ತಿಪರರ ಬಳಕೆಗೆ ಚೀನಾ 1,70,000 ಪಿಪಿಇ ಕಿಟ್ ಗಳನ್ನು ಹಾಗೂ ದೇಣಿಗೆಗಳನ್ನು ಕಳಿಸಿಕೊಟ್ಟಿತ್ತು. 

ಚೀನಾ ಕಳಿಸಿಕೊಟ್ಟಿರುವ 1,70,000 ಪಿಪಿಇಗಳ ಪೈಕಿ, 63,000 ಪಿಪಿಇಗಳು ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲಗೊಂಡಿದೆ. ಗುಣಮಟ್ಟವಿರುವ ಉಳಿದ ಕಿಟ್ ಗಳನ್ನು ರಾಜ್ಯಗಳಿಗೆ ಕಳಿಸಲಾಗಿದೆ. ಪಿಪಿಇಗಳನ್ನು ಪ್ರಮಾಣಿಕೃತಗೊಳಿಸುವುದಕ್ಕೆ ಕೇಂದ್ರ ಸರ್ಕಾರ ನಾಲ್ಕು ಪ್ರಯೋಗಾಲಯಗಳನ್ನು ಹೊಂದಿದೆ. 

ಈಗ ಸಿಂಗಪೂರ್ ನಿಂದ ಒಂದು ಲಕ್ಷದ ಪಿಪಿಇಗಳಿಗೆ ಮನವಿ ಮಾಡಲಾಗಿದ್ದು, ಶೀಘ್ರವೇ ಭಾರತ ತಲುಪಲಿದೆ, ಕೇಂದ್ರ ಸರ್ಕಾರ ಈಗಾಗಲೇ 4,12,400 ಪಿಪಿಇ ಕಿಟ್ ಗಳನ್ನು ವಿತರಿಸಿದೆ.

SCROLL FOR NEXT