ದೇಶ

ಗುಜರಾತ್ ನಲ್ಲಿ ಕೊರೋನಾ ಸೋಂಕಿಗೆ ಇಂದು ಐವರು ಸಾವು, ದೆಹಲಿಯಲ್ಲಿ ಇಲ್ಲ ಲಾಕ್ ಡೌನ್ ವಿನಾಯ್ತಿ

Sumana Upadhyaya

ನವದೆಹಲಿ: ಕೊರೋನಾ ಸೋಂಕಿಗೆ ಚಿಕಿತ್ಸೆ ಫಲಕಾರಿಯಾಗದೆ ಗುಜರಾತ್ ರಾಜ್ಯದಲ್ಲಿ ಮತ್ತೆ ಐವರು ಮೃತಪಟ್ಟಿದ್ದು ರಾಜ್ಯದಲ್ಲಿ ಕೊರೋನಾ ಸೋಂಕಿಗೆ ಇದುವರೆಗೆ ಮೃತಪಟ್ಟವರ ಸಂಖ್ಯೆ 58ಕ್ಕೇರಿದೆ. ಇಂದು ಮೃತಪಟ್ಟವರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ.

ಗುಜರಾತ್ ನಲ್ಲಿ ಇಂದು ಮೃತಪಟ್ಟ ಐವರಲ್ಲಿ ನಾಲ್ವರು ಅಹಮದಾಬಾದ್ ನವರಾಗಿದ್ದು ಒಬ್ಬರು ಸೂರತ್ ನವರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಯಂತಿ ರವಿ ತಿಳಿಸಿದ್ದಾರೆ. ಮೃತಪಟ್ಟವರಲ್ಲಿ ನಾಲ್ವರು ಸಕ್ಕರೆ ಕಾಯಿಲೆ, ಮೂತ್ರಪಿಂಡ ವೈಫಲ್ಯ, ಅಧಿಕ ಒತ್ತಡಗಳಿಂದ ಬಳಲುತ್ತಿದ್ದರು.

ಗುಜರಾತ್ ನಲ್ಲಿ 228 ಹೊಸ ಪ್ರಕರಣಗಳು ವರದಿಯಾಗಿದ್ದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಸಾವಿರದ 604ಕ್ಕೇರಿದೆ.

ಮಹಾರಾಷ್ಟ್ರದಲ್ಲಿ ಇಂದು ಕೊರೋನಾ ಸೋಂಕಿನಿಂದ ಮೃತಪಡುವವರ ಸಂಖ್ಯೆ ಇಳಿಮುಖವಾಗಿರುವುದು ಸಂತೋಷದ ಸಂಗತಿಯಾಗಿದೆ. ವಿಶ್ವದಲ್ಲಿ ಮೃತರ ಸಂಖ್ಯೆ ಶೇಕಡಾ 6.76ರಷ್ಟಿದ್ದರೆ ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಶೇಕಡಾವಾರು ಪ್ರಮಾಣ ಶೇಕಡಾ 5.78ರಷ್ಟಿದೆ. ಭಾರತದ ಸರಾಸರಿ ಮೃತ ಪ್ರಮಾಣ ಶೇಕಡಾ 3.23ರಷ್ಟಿದೆ. 

ಜಾರ್ಖಂಡ್ ನಲ್ಲಿ ಖಾಸಗಿ ಆಸ್ಪತ್ರೆಯನ್ನು ಸೀಲ್ ಮಾಡಿ 50ಕ್ಕೂ ಹೆಚ್ಚು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ನಿವೃತ್ತ ಡಿಡಿಸಿಗೆ ಕೊರೋನಾ ಸೋಂಕು ಗುರುಗ್ರಾಮ್ ನ ಖಾಸಗಿ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿತ್ತು. ಅವರು ವಾಸಿಸುತ್ತಿರುವ ಅಪಾರ್ಟ್ ಮೆಂಟ್ ನ್ನು ಸಹ ಸೀಲ್ ಮಾಡಲಾಗಿದೆ ಎಂದು ರಾಂಚಿ ಜಿಲ್ಲಾಡಳಿತ ಹೇಳಿದೆ.

SCROLL FOR NEXT