ದೇಶ

ಮನೆ ತಲುಪಲು 460 ಕಿ.ಮೀ ಕಾಲ್ನಡಿಗೆಯಲ್ಲಿ ಸಂಚರಿಸಿದ 12 ವರ್ಷದ ಬಾಲಕಿ ಸಾವು!

Srinivas Rao BV

ಬೆಂಗಳೂರು: ಕೊರೋನಾ ಲಾಕ್ ಡೌನ್ ಘೋಷಣೆಯಾದ ಬಳಿಕ ಕಾಲ್ನಡಿಗೆಯಲ್ಲಿ ಸಂಚರಿಸಿ ಮನೆ ತಲುಪಿರುವವರ ಬಗ್ಗೆ ಅನೇಕ ವರದಿಗಳು ಪ್ರಕಟವಾಗಿತ್ತಿವೆ. 

ನೂರಾರು ಕಿ.ಮೀ ನಡೆದು ಮನೆ ತಲುಪಿರುವವರು, ಮಾರ್ಗಮಧ್ಯದಲ್ಲಿ ಸಾವನ್ನಪ್ಪಿರುವವರ ಸಾಲಿಗೆ ತೆಲಂಗಾಣದಿಂದ ಕಾಲ್ನಡಿಗೆ ಪ್ರಾರಂಭಿಸಿದ್ದ 12 ವರ್ಷದ ಬಾಲಕಿ ಸೇರ್ಪಡೆಯಾಗಿದೆ. 

ತೆಲಂಗಾಣದಿಂದ ಬಿಜಾಪುರದಕ್ಕೆ ತಲುಪಲು ಕಾಲ್ನಡಿಗೆ ಪ್ರಾರಂಭಿಸಿದ್ದ 11 ಮಂದಿಯ ಪೈಕಿ 12 ವರ್ಷದ ಬಾಲಕಿ ಸಹ ಇದ್ದಳು. 

ಈ ವರದಿಯ ಬಗ್ಗೆ ಬಿಜಾಪುರದ ಮುಖ್ಯ ಆರೋಗ್ಯಾಧಿಕಾರಿ ಮಾತನಾಡಿದ್ದು, ಬಾಲಕಿಯ ಮರಣೋತ್ತರ ಪರೀಕ್ಷೆ ವರದಿಯನ್ನು ಇನ್ನಷ್ಟೇ ನೋಡಬೇಕಿದೆ. ಆದರೆ ಮೇಲ್ನೋಟಕ್ಕೆ ಬಳಲಿಕೆ, ಎಲೆಕ್ಟ್ರೋಲೈಟ್ ಅಸಮತೋಲನ ಅಥವಾ ನಿರ್ಜಲೀಕರಣದಿಂದ ಸಾವನ್ನಪ್ಪಿರುವಂತೆ ತೋರುತ್ತದೆ ಎಂದು ಹೇಳಿದ್ದಾರೆ. 

ತೆಲಂಗಾಣದ ಮೆಣಸಿನಕಾಯಿ ಬೆಳೆಯುವ ಕೃಷಿ ಭೂಮಿಯಲ್ಲಿ ಈ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರು. ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ 11 ಜನ ಕಾರ್ಮಿಕರು 460 ಕಿ.ಮೀ ಕಾಲ್ನಡಿಗೆಯಲ್ಲಿ ಸಂಚರಿಸಿದ್ದಾರೆ. ಮೃತ ಬಾಲಕಿಯ ಮಾದರಿಗಳನ್ನು ಪಡೆಯಲಾಗಿದ್ದು ಪರೀಕ್ಷೆಯಲ್ಲಿ ಕೊರೋನಾ ನೆಗೆಟೀವ್ ಬಂದಿದೆ. ಕಳೆದ ತಿಂಗಳು ಮಧ್ಯಪ್ರದೇಶದ ಕಾರ್ಮಿಕನೋರ್ವ ದೆಹಲಿಯಿಂದ ಕಾಲ್ನಡಿಗೆಯಲ್ಲಿ ಮನೆ ತಲುಪಲು ಯತ್ನಿಸಿ ಸಾವನ್ನಪ್ಪಿದ್ದ. 

SCROLL FOR NEXT