ದೇಶ

ಉತ್ತರ ಪ್ರದೇಶ: ಮೊರಾದಾಬಾದ್ ಹಿಂಸಾಚಾರದಲ್ಲಿ ಭಾಗಿಯಾಗಿದ್ದ 5 ಮಂದಿಯಲ್ಲಿ ಕೊರೋನಾ ವೈರಸ್ ಪತ್ತೆ, 73 ಪೊಲೀಸರು ಕ್ವಾರಂಟೈನ್'ಗೆ

Manjula VN

ನವದೆಹಲಿ: ಉತ್ತರಪ್ರದೇಶದಲ್ಲಿ ಕೊರೋನಾ ವೈರಸ್ ರೌದ್ರನರ್ತನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಈ ನಡುವೆ ವೈದ್ಯಕೀಯ ಸಿಬ್ಬಂದಿಗಳ ಮೇಲೆ ಮೊರಾಬಾದ್ ನಲ್ಲಿ ನಡೆದ ಹಲ್ಲೆ ಘಟನೆ ಬಳಿಕ ಆಘಾತಕಾರಿ ವಿಷಯವೊಂದು ಇದೀಗ ಬಹಿರಂಗಗೊಂಡಿದೆ. 

ಮೊರಾದಾಬಾದ್ ನಲ್ಲಿ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆಯಲ್ಲಿ ಭಾಗಿಯಾಗಿದ್ದ ಹಲವು ಮಂದಿಯ ಪೈಕಿ ಐವರಲ್ಲಿ ಕೊರೋನಾ ವೈರಸ್ ದೃಢಪಟ್ಟಿದೆ ಎಂದು ತಿಳಿದುಬಂದಿದೆ. 

ಐವರಲ್ಲಿ ಕೊರೋನಾ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಹಿಂಸಾಚಾರದ ವೇಳೆ ಕಾರ್ಯನಿರ್ವಹಿಸಿದ್ದ 73 ಮಂದಿ ಉತ್ತರಪ್ರದೇಶದ ಪೊಲೀಸರನ್ನು ಕ್ವಾರಂಟೈನ್ ನಲ್ಲಿರಿಸಲಾಗಿದೆ ಎಂದು ವರದಿಗಳು ತಿಳಿಸಿವೆ. 

ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ  ನಡೆಸಿದ ಘಟನೆ ಸಂಬಂಧ ಪೊಲೀಸರು ಈ ವರೆಗೂ 17 ಮಂದಿಯನ್ನು ಬಂಧನಕ್ಕೊಳಪಡಿಸಿದ್ದರು. ಈ 17 ಮಂದಿಯ ಪೈಕಿ ಐವರಲ್ಲಿ ವೈರಸ್ ದೃಢಪಟ್ಟಿದೆ. 

ಇದೀಗ ಹಿಂಸಾಚಾರದ ವೇಳೆ ಕಾರ್ಯನಿರ್ವಹಿಸಿದ್ದ 73 ಮಂದಿ ಪೊಲೀಸರನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಎಲ್ಲರನ್ನೂ ಕ್ವಾರಂಟೈನ್ ನಲ್ಲಿರಿಸಲಾಗಿದೆ. ವೈದ್ಯಕೀಯ ವರದಿಗಾಗಿ ಕಾಯಲಾಗುತ್ತಿದೆ.  ಪರಿಸ್ಥಿತಿ  ನಿಭಾಯಿಸಲು ನಮ್ಮಲ್ಲಿ ಸಾಕಷ್ಟು ಪೊಲೀಸ್ ಸಿಬ್ಬಂದಿಗಳಿದ್ದಾರೆಂದು ಎಂದು ಪೊಲೀಸ್ ಅಧಿಕಾರಿ ಅಮಿತ್ ಪಥಕ್  ಅವರು ತಿಳಿಸಿದ್ದಾರೆ. 

SCROLL FOR NEXT