ಪ್ರಧಾನಿ ನರೇಂದ್ರ ಮೋದಿ 
ದೇಶ

ಆಯುರ್ವೇದದ ಬಗ್ಗೆ ನಿರ್ಲಕ್ಷ್ಯ ಬೇಡ, ನಮ್ಮ ಸಂಸ್ಕೃತಿಯ ಶಕ್ತಿಯನ್ನು ಮರೆತಿದ್ದೇವೆ, ಆದರೆ ವಿದೇಶ ಗೌರವಿಸಿದೆ: ಮೋದಿ 

ಯೋಗದ ಮಾದರಿಯಲ್ಲೇ ಮುಂದಿನ ದಿನಗಳಲ್ಲಿ ಜಗತ್ತು ಆಯುರ್ವೇದದ ಉಪಯೋಗಗಳನ್ನೂ ಸ್ವೀಕರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ನವದೆಹಲಿ: ಯೋಗದ ಮಾದರಿಯಲ್ಲೇ ಮುಂದಿನ ದಿನಗಳಲ್ಲಿ ಜಗತ್ತು ಆಯುರ್ವೇದದ ಉಪಯೋಗಗಳನ್ನೂ ಸ್ವೀಕರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ಏ.26 ರಂದು ಮನ್ ಕಿ ಬಾತ್ ನಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕೊರೋನಾ ಸೋಂಕು ತಡೆ ಬಗ್ಗೆ ದೇಶದ ಜನತೆಯೊಂದಿಗೆ ಹಲವು ಅಂಶಗಳನ್ನು ಹಂಚಿಕೊಂಡರು. ಇದೇ ವೇಳೆ ಭಾರತದ ಸಂಸ್ಕೃತಿಯ ಶಕ್ತಿಯ ಬಗ್ಗೆಯೂ ಮಾತನಾಡಿರುವ ಪ್ರಧಾನಿ, ಯೋಗದ ನಂತರ ಜಗತ್ತು ಭಾರತದ ಪುರಾತನ ಪದ್ಧತಿಯ ವೈದ್ಯ ಆಯುರ್ವೇದದ ಅಂಶಗಳನ್ನು ಒಪ್ಪಿಕೊಳ್ಳಲಿದೆ. ಯುವಕರು ಅವುಗಳನ್ನು ವಿದೇಶಗಳಿಗೆ ವೈಜ್ಞಾನಿಕವಾಗಿ ಅರ್ಥಮಾಡಿಸುವ ಕೆಲಸವನ್ನು ಯುವಕರು ಕೈಗೆತ್ತಿಕೊಳ್ಳಬೇಕಿದೆ ಎಂದು ಮೋದಿ ಕರೆ ನೀಡಿದ್ದಾರೆ.  

ಭಾರತದ ವೈಭವದ ಸಂಪ್ರದಾಯ, ಪದ್ಧತಿಗಳ ಶಕ್ತಿಯನ್ನು ಗುರುತಿಸಲು ಭಾರತೀಯರೇ ನಿರಾಕರಿಸುವುದು ದುರದೃಷ್ಟಕರ, ಅದರೆ ಅದೇ ಅಂಶಗಳನ್ನು ವಿದೇಶಿಗಳು ಪುರಾವೆ ಆಧಾರಿತ ಸಂಶೋಧನೆಯ ಮೂಲಕ ಹೇಳಿ, ನಮ್ಮ ಸೂತ್ರವನ್ನೇ ನಮಗೆ ಕಲಿಸಿದರೆ ಅದನ್ನು ತಕ್ಷಣವೇ ಒಪ್ಪಿಕೊಳ್ಳುತ್ತೇವೆ ಎಂದು ಮೋದಿ ಹೇಳಿದ್ದಾರೆ. 

ಬಹುಶಃ ವಿದೇಶದ ಆಡಳಿತದೊಂದಿಗೆ ನೂರಾರು ವರ್ಷದ ಬಾಂಧವ್ಯದಿಂದಾಗಿ ನಮ್ಮ ಶಕ್ತಿಯನ್ನು ಅರಿತುಕೊಳ್ಳಲು ನಾವು ವಿಫಲರಾಗುತ್ತಿದ್ದೇವೆ. ಕೋವಿಡ್-19 ರ ನಡುವೆಯೂ ಜಗತ್ತಿನಾದ್ಯಂತ ಜನರು ಆಯುರ್ವೇದದ ಮಹತ್ವವನ್ನು ಅರಿಯುವುದಕ್ಕೆ ವಿಶೇಷ ಗಮನ ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರಿಂದ ಉಂಟಾಗುವ ಲಾಭಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರಹಗಳು ಕಾಣಸಿಗುತ್ತವೆ. 

ಆಯುಷ್ ಸಚಿವಾಲಯ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದಕ್ಕೆ ನೀಡಿರುವ ಸಲಹೆಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಮೋದಿ ದೇಶದ ಜನತೆಗೆ ಕರೆ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್