ದೇಶ

ಪ್ಲಾಸ್ಮಾ ಥೆರೆಪಿ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ: ಕೇಂದ್ರ ಆರೋಗ್ಯ ಸಚಿವಾಲಯ  

Srinivas Rao BV

ನವದೆಹಲಿ: 24 ಗಂಟೆಗಳ ಅವಧಿಯಲ್ಲಿ 1,594 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಕೊರೋನ ಸಂಬಂಧಿತ 51 ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 29,974ಕ್ಕೆ ಏರಿಕೆಯಾಗಿದೆ. 

ಏ.28 ರಂದು ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ ಒಟ್ಟಾರೆ ಸೋಂಕಿತರ ಸಂಖ್ಯೆಯಲ್ಲಿ ಈ ವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದ 7,000 ಮಂದಿ, ಓರ್ವ ಸ್ಥಳಾಂತರಗೊಂಡ ವ್ಯಕ್ತಿ, 937 ಸಾವುಗಳೂ ಸೇರಿವೆ. 22,010 ಸಕ್ರಿಯ ಪ್ರಕರಣಗಳಿವೆ.  

ಇದೇ ವೇಳೆ ಪ್ಲಾಸ್ಮಾ ಥೆರೆಪಿ ಬಗ್ಗೆಯೂ ಮಾಹಿತಿ ನೀಡಿರುವ ಲವ ಅಗರ್ವಾಲ್,  ಕಳೆದ 24 ಗಂಟೆಗಳಲ್ಲಿ 684 ಕೊರೋನಾ ಸೋಂಕಿತರು ಗುಣಮುಖರಾಗಿದ್ದಾರೆ, ಗುಣಮುಖವಾಗುತ್ತಿರುವವರ ಸರಾಸರಿ ಶೇ.23.3ರಷ್ಟಿದೆ. ಇದು ಉತ್ತಮವಾದ ರಿಕವರಿ ರೇಟ್ ಎಂದು ಹೇಳಿದ್ದಾರೆ. 

ಕೊರೋನಾಗೆ ಪ್ಲಾಸ್ಮಾ ಥೆರೆಪಿ ಚಿಕಿತ್ಸಾ ವಿಧಾನ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ, ಐಸಿಎಂಆರ್ ಕ್ಲಿನಿಕಲ್ ರಿಸರ್ಚ್ ಹಾಗೂ ಅದರ ಪ್ರಯೋಗದ ನಂತರವಷ್ಟೇ ಪ್ಲಾಸ್ಮಾ ಥೆರೆಪಿ ಬಗ್ಗೆ ಅಧಿಕೃತ ಸ್ಪಷ್ಟನೆ ನೀಡಲಿದೆ. ಇದಕ್ಕೂ ಮುನ್ನ ಪ್ಲಾಸ್ಮಾ ಥೆರೆಪಿ ಬಗ್ಗೆ ಯಾವುದೇ ರೀತಿ ಹೇಳಿಕೆಗಳನ್ನು ನೀಡುವುದು ಸೂಕ್ತವಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

SCROLL FOR NEXT