ದೇಶ

ಲಿಪುಲೇಖ್ ಗಡಿಯಲ್ಲಿ ಚೈನಾದಿಂದ ಸೇನೆ ಜಮಾವಣೆ

Srinivas Rao BV

ನವದೆಹಲಿ: ಚೈನಾ ತನ್ನ ನರಿ ಬುದ್ಧಿಯನ್ನು ಮತ್ತೆ ಪ್ರದರ್ಶಿಸಿದೆ. ಲಡಾಖ್ ಬಳಿಯಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಲೇ ಮತ್ತೊಂದು ಕಡೆ ಉತ್ತರಾಖಂಡದ ಲಿಪುಲೇಖ್ ಬಳಿ ಭಾರಿ ಪ್ರಮಾಣದಲ್ಲಿ ಸೇನೆಯನ್ನು ಜಮಾವಣೆ ಮಾಡುತ್ತಿದೆ.

ಸುಮಾರು ಮೂರು ತಿಂಗಳಿಂದ ಲಡಾಖ್ ಗಡಿಯ ಬಳಿ ಭಾರತ-ಚೈನಾ ನಡುವೆ ಉದ್ರಿಕ್ತ ಪರಿಸ್ಥಿತಿ ನಿರ್ಮಾಣಗೊಂಡಿದೆ. ಬಿಗುವಿನ ಪರಿಸ್ಥಿತಿ ತಗ್ಗಿಸಲು ಉಭಯ ದೇಶಗಳ ನಡುವೆ ಉನ್ನತ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ.

ಚರ್ಚೆಯ ಫಲವಾಗಿ ತನ್ನ ಸೇನೆಗಳನ್ನು ಹಿಂದಕ್ಕೆ ಕರೆಸಿಕೊಳಳುವುದಾಗಿ ಚೈನಾ ಪ್ರಕಟಿಸಿದೆ. ಆದರೆ, ಈ ಹೇಳಿಕೆ ನೀಡಿ  ಹಲವು ದಿನಗಳು ಕಳೆಯುವ ಮುನ್ನವೇ ತನ್ನ ವಕ್ರ ಬುದ್ದಿಯನ್ನು ತೋರಿಸಿದೆ. ಲಿಪುಲೇಖ್, ಅರುಣಾಚಲ ಪ್ರದೇಶ, ಸಿಕ್ಕಿಂನ ಉತ್ತರ ಪ್ರದೇಶಲ್ಲಿರುವ ಭಾರತ ಗಡಿಯಲ್ಲಿ ಭಾರಿ ಪ್ರಮಾಣದಲ್ಲಿ ತನ್ನ ಸೇನೆಯ ಜಮಾವಣೆ ಆರಂಭಿಸಿದೆ ಎಂದು ಭಾರತದ ಉನ್ನತ ಸೇನಾದಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ಭಾರತ ಕೂಡಾ ತನ್ನ ಸೇನಾ ಪಡೆಗಳನ್ನೂ ಅಲ್ಲಿಗೆ ರವಾನಿಸಲಾಗುತ್ತಿದೆ. ಚೈನಾ, ನೇಪಾಳ್ ವಿರುದ್ದವೂ ದೃಷ್ಟಿ ಹರಿಸಿದೆ ಎಂದು ವಿವರಿಸಿದ್ದಾರೆ. 

SCROLL FOR NEXT