ಅಭಿಶೇಕ್ ಮನು ಸಿಂಘ್ವಿ 
ದೇಶ

ಭಾರತದ ಬಗ್ಗೆ ಚೀನಾದಲ್ಲಿ ನಡುಕ ಹುಟ್ಟಿಸಿ, ಬೀಜಿಂಗ್ ವಿರುದ್ಧ ಕಠಿಣ ನಿಯಮ ರೂಪಿಸಿ: ಕಾಂಗ್ರೆಸ್ ಮುಖಂಡ ಸಿಂಘ್ವಿ

ದ್ವಿಪಕ್ಷೀಯ ಸಂಬಂಧದಲ್ಲಿ ಸಮತೋಲನವನ್ನು ಸಾಧಿಸಬೇಕಾದರೆ ಭಾರತವು ಚೀನಾದ ಮನಸ್ಸಿನಲ್ಲಿ ಭಯವನ್ನು ಮೂಡಿಸುವ ಅಗತ್ಯವಿದೆ ಎಂದಿರುವ ಕಾಂಗ್ರೆಸ್ ಹಿರಿಯ ನಾಯಕ ಅಭಿಷೇಕ್ ಮನುಸಿಂಘ್ವಿ, ಬೀಜಿಂಗ್ ಕುರಿತು ಭಾರತದ ನೀತಿಯಲ್ಲಿ ಸಮಗ್ರ, ಆಕ್ರಮಣಕಾರಿ ಬದಲಾವಣೆಗೆ ಕರೆ ನೀಡಿದ್ದಾರೆ.

ನವದೆಹಲಿ: ದ್ವಿಪಕ್ಷೀಯ ಸಂಬಂಧದಲ್ಲಿ ಸಮತೋಲನವನ್ನು ಸಾಧಿಸಬೇಕಾದರೆ ಭಾರತವು ಚೀನಾದ ಮನಸ್ಸಿನಲ್ಲಿ ಭಯವನ್ನು ಮೂಡಿಸುವ ಅಗತ್ಯವಿದೆ ಎಂದಿರುವ ಕಾಂಗ್ರೆಸ್ ಹಿರಿಯ ನಾಯಕ ಅಭಿಷೇಕ್ ಮನುಸಿಂಘ್ವಿ, ಬೀಜಿಂಗ್ ಕುರಿತು ಭಾರತದ ನೀತಿಯಲ್ಲಿ ಸಮಗ್ರ, ಆಕ್ರಮಣಕಾರಿ ಬದಲಾವಣೆಗೆ ಕರೆ ನೀಡಿದ್ದಾರೆ.

ದೆಹಲಿಯ ಪ್ರಧಾನ ಕಚೇರಿಯ ಥಿಂಕ್-ಟ್ಯಾಂಕ್ ಮತ್ತು ಡಿಫೆನ್ಸ್ ಕ್ಯಾಪಿಟಲ್ ಭದ್ರತೆ ಮತ್ತು ಕಾರ್ಯತಂತ್ರದ ವ್ಯವಹಾರಗಳ ವೇದಿಕೆಯಾದ ಲಾ ಅಂಡ್ ಸೊಸೈಟಿ ಅಲೈಯನ್ಸ್ ಆಯೋಜಿಸಿದ ವೆಬ್ನಾರ್ನಲ್ಲಿ, ಚೀನಾ ಸವಾಲಿಗೆ ಕೇಂದ್ರೀಕೃತ ಮತ್ತು ಏಕೀಕೃತ ಪ್ರತಿಕ್ರಿಯೆ ಕುರಿತು ಮಾತನಾಡಿದ್ದಾರೆ.

ಚೀನಾ ಮತ್ತು ಉತ್ತರ ನೆರೆಯವರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಭಾರತವು ಹೆಚ್ಚು ಕಾರ್ಯಸಾಧನೆ ಹಾಗೂ ಕಡಿಮೆ ಮಾತಿನ ಮೂಲಕ ಸಮತೋಲನ ಕಾಯ್ದುಕೊಳ್ಳುವ ಅಗತ್ಯವಿದೆ.

ಭಾರತ ಮತ್ತು ಚೀನಾ ಏಷ್ಯಾ ಎಂಬ ಒಂದೇ ಖಡ್ಗದಲ್ಲಿನ ಎರಡು ಕತ್ತಿಗಳು. ಉಭಯ ರಾಷ್ಟ್ರಗಳ ನಡುವೆ ಬಲವಂತದ ಗೌರವವನ್ನು ಹೊಂದಿರಬೇಕು. ನೈಜ ಜಗತ್ತಿನಲ್ಲಿ, ಗೌರವ ಮತ್ತು ಬಾಹ್ಯ ಸಮಾನತೆ ಎರಡೂ ಭಯದ ಪರಿಣಾಮಗಳಾಗಿವೆ. ಚೀನಾದಲ್ಲಿ ಭಾರತದ ಬಗ್ಗೆ ಭಯ ಹುಟ್ಟಿಸುವ ಅವಶ್ಯಕತೆಯಿದೆ. ಇದರಿಂದ ಮಾತ್ರ ಎರಡು ದೈತ್ಯ ರಾಷ್ಟ್ರಗಳ ನಡುವೆ ಸಮತೋಲನ ಹೊಂದಲು ಸಾಧ್ಯ ಸಿಂಘ್ವಿ ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ಸಶಸ್ತ್ರ ಪಡೆಗಳು ನಿರ್ದಾಕ್ಷಿಣ್ಯವಾಗಿ ತನ್ನ ಪರಸ್ಪರ ಸ್ನೇಹಿತರು ಮತ್ತು ಪಾಲುದಾರರೊಂದಿಗೆ ಜಂಟಿ ಮಿಲಿಟರಿ ಕಸರತ್ತು ನಡೆಸಬೇಕೆಂದು ಸಲಹೆ ನೀಡಿದರು. ನಮ್ಮ ಮಿಲಿಟರಿ ಮೈತ್ರಿ ಮತ್ತು ಸಹಭಾಗಿತ್ವವನ್ನು ಹೆಚ್ಚಿಸುವ ಬಗ್ಗೆ ನಾವು ಮುಕ್ತ ಹಾಗೂ ಸಾರ್ವಜನಿಕವಾಗಿರಬೇಕು. ಭಾರತವು ಅದರತ್ತ ಗಮನ ಹರಿಸಬೇಕು ಎಂದಿದ್ದಾರೆ.

ಸಶಸ್ತ್ರ ಪಡೆಗಳಿಗೆ ಜಿಡಿಪಿ ಪರಿಭಾಷೆಯಲ್ಲಿ ರಕ್ಷಣಾ ಬಜೆಟ್ ನ ಹೆಚ್ಚಿನ ಪಾಲು ಮತ್ತು ಚೀನಾವನ್ನು ಎದುರಿಸಲು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು, ವಿಶೇಷವಾಗಿ ಕ್ಷಿಪಣಿ ಸಾಮರ್ಥ್ಯಗಳು ಮತ್ತು ಗಡಿ ಮೂಲಸೌಕರ್ಯ ಅಭಿವೃದ್ಧಿಯ ಹೊರತಾಗಿ ಮಿಲಿಟರಿ ಡ್ರೋನ್ ಶಸ್ತ್ರಾಸ್ತ್ರ ತಂತ್ರಜ್ಞಾನದ ಬಗ್ಗೆಯೂ ಅವರು ಮಾತನಾಡಿದ್ದಾರೆ. ಜಾಗತಿಕ ವೇದಿಕೆಯಲ್ಲಿ ಚೀನಾವನ್ನು ನೇರವಾಗಿ ಎದುರಿಸಿ, ನಾಚಿಕೆಪಟ್ಟುಕೊಳ್ಳುವಂತೆ ಮಾಡಬೇಕು ಎಂದಿರುವ ಅವರು, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕೆಲ್ ಆರ್. ಪೊಂಪಿಯೊ ಅವರ ಉದಾಹರಣೆ ನೀಡುತ್ತಾ, ಪೊಂಪಿಯೊ ಅವರ ಎಲ್ಲ ನಡೆಯನ್ನೂ ಒಪ್ಪಿಕೊಳ್ಳಲು ಸಾಧ್ಯವಿಲ್ಲವಾದರೂ, ಚೀನಾದ ಬಗ್ಗೆ ಅವರ ನೇರ ನಡೆಯನ್ನು ಶ್ಲಾಘಿಸಬೇಕುಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT