ದೇಶ

ನೆನಪಿನಶಕ್ತಿ ಕಳೆದುಕೊಂಡ 75 ವರ್ಷದ ವೃದ್ಧೆ ಮೇಲೆ ಅತ್ಯಾಚಾರ!

Srinivasamurthy VN

ಕೊಚ್ಚಿ: ನೆನಪಿನಶಕ್ತಿ ಕಳೆದುಕೊಂಡ ಸುಮಾರು 75 ವರ್ಷ ವಯಸ್ಸಿನ ವೃದ್ಧೆ ಮೇಲೆ ಕಾಮುಕನೋರ್ವ ಅತ್ಯಾಚಾರ ನಡೆಸಿರುವ ಘಟನೆ ಕೇರಳದಲ್ಲಿ ವರದಿಯಾಗಿದೆ.

ಕೇರಳದ ಕೋಲೆಂಚೆರಿ ಸಮೀಪದ ಪ್ಯಾಂಗೋಡ್​ ಎಂಬ ಗ್ರಾಮದಲ್ಲಿ ಪರಿಚಿತರ ಮನೆಗೆ ಬಂದಿದ್ದಾಗ ವೃದ್ಧೆಯ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾಗಿದೆ. ಖಾಸಗಿ ವೈದ್ಯಕೀಯ ಆಸ್ಪತ್ರೆಗೆ ವೃದ್ಧೆಯನ್ನು ದಾಖಲಿಸಲಾಗಿದೆ. ಆಕೆಗೆ ಚಿಕಿತ್ಸೆ ಕೊಡುತ್ತಿರುವ ವೈದ್ಯರು ಕೂಡ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದನ್ನು ಖಚಿತಪಡಿಸಿದ್ದಾರೆ.

ಎರಡು ಮಕ್ಕಳು ಮತ್ತು ಮೊಮ್ಮಕ್ಕಳನ್ನು ಹೊಂದಿರುವ ಈ ವೃದ್ಧೆ ಭಾನುವಾರ ತನ್ನ ಗ್ರಾಮದಲ್ಲಿರುವ ಪರಿಚಿತರ ಮನೆಗೆ ಬಂದಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಮೂಲಗಳು ತಿಳಿಸಿರುವಂತೆ ವೃದ್ಧೆಗೆ ನೆನಪಿನ ಶಕ್ತಿ ಕ್ಷೀಣಿಸಿದೆ. ತನ್ನ ಮೇಲೆ ಅತ್ಯಾಚಾರ ಎಸಗಿದವನ ಬಗ್ಗೆ ಕ್ಷಣಕ್ಕೊಂದು ಮಾಹಿತಿ ಕೊಡುತ್ತಿದ್ದಾರೆ. ಹಾಗಾಗಿ, ನಿಜವಾದ ಆರೋಪಿಯನ್ನು ಬಂಧಿಸಲು ಕಷ್ಟವಾಗುತ್ತಿದೆ. ಆದರೂ ಶಂಕೆಯ ಮೇರೆಗೆ ಒಂದಷ್ಟ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. 

SCROLL FOR NEXT