ದೇಶ

ಆಂಧ್ರ ಪ್ರದೇಶ: ಕ್ರಾಂತಿ ಕಾರಿ ತೆಲುಗು ಬರಹಗಾರ ವಂಗಪಂಡು ಪ್ರಸಾದ್ ರಾವ್ ನಿಧನ

Shilpa D

ವಿಜಯವಾಡ: ಕ್ರಾಂತಿಕಾರಿ ಲೇಖಕ ಮತ್ತು ಗಾಯಕ ವಂಗಪಂಡು ಪ್ರಸಾದ್ ರಾವ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ವೈಜಾನಗರಂ ನಲ್ಲಿರುವ ಪಾರ್ವತಿಪುರದ ನಿವಾಸದಲ್ಲಿ 77 ವರ್ಷದ ವಂಗಪಂಡು ಪ್ರಸಾದ್ ರಾವ್ ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ. ಪ್ರಸಾದ್ ರಾವ್ ಪುತ್ರಿಯನ್ನು ಅಗಲಿದ್ದಾರೆ.

1943 ರಲ್ಲಿ ಪಾರ್ವತಿಪುರಂ ಮಂಡಲ್ ನಲ್ಲಿ ಜನಿಸಿದ ರಾವ್ ಜನ ನಾಟ್ಯ ಮಂಡಳಿ ಸ್ಥಾಪಿಸಿದರು, 1972 ರಲ್ಲಿ ಪೀಪಲ್ಸ್ ವಾರ್ ಗ್ರೂಪ್ನ ಸಾಂಸ್ಕೃತಿಕ ವಿಭಾಗ ಮತ್ತು ಉತ್ತರಾಂದ್ರ  ಗಡ್ಡರ್ ಎಂದು ಸಾಕಷ್ಟು ಜನಪ್ರಿಯವಾಗಿತ್ತು. 2017 ರಲ್ಲಿ ಆಂದ್ರ ಪ್ರದೇಶ ಸರ್ಕಾರದಿಂದ ಕಲಾರತ್ನ ಪ್ರಶಸ್ತಿ ಲಭಿಸಿತ್ತು.

ಉತ್ತಮ ಧ್ವನಿ ಹೊಂದಿದ್ದ ರಾವ್ ಗಾಯಕ ಕೂಡ ಆಗಿದ್ದರು. ಇನ್ನೂ ರಾವ್ ಅವರ ಸಾವಿಗೆ ಸಿಎಂ ಜಗನ್ ಮೋಹನ್ ಅವರು ಸಂತಾಪ ಸೂಚಿಸಿದ್ದಾರೆ. ಅವರ ಸಾವಿನಿಂದ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

SCROLL FOR NEXT