ದೇಶ

ಭಾರತದ ಕೋವಿಡ್-19 ಚೇತರಿಕೆ ಪ್ರಮಾಣ ಶೇ.67.19 ಕ್ಕೆ ಏರಿಕೆ: ಮರಣ ಪ್ರಮಾಣ ಶೇ.2.09 ಕ್ಕೆ ಇಳಿಕೆ 

Srinivas Rao BV

ನವದೆಹಲಿ: ಭಾರತದಲ್ಲಿ ಕೋವಿಡ್ ಚೇತರಿಕೆ ಪ್ರಮಾಣ ಶೇ.67.19 ಕ್ಕೆ ಏರಿಕೆಯಾಗಿದ್ದು, ಮರಣದ ಪ್ರಮಾಣ ಶೇ.2.09 ಕ್ಕೆ ಇಳಿಕೆಯಾಗಿದೆ. 

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 51,706 ಕೊರೋನಾ ರೋಗಿಗಳು ಚೇತರಿಕೆ ಕಂಡಿದ್ದಾರೆ. ಮರಣದ ಪ್ರಮಾಣ ಶೇ.2.09 ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. 

ಒಟ್ಟಾರೆ 12, 82,215  ರೋಗಿಗಳು ಚೇತರಿಕೆ ಕಂಡಿದ್ದು, ಸಕ್ರಿಯವಾಗಿರುವ ಪ್ರಕರಣಗಳ ಎರಡರಷ್ಟು ಮಂಡಿ ಗುಣಮುಖರಾಗಿದ್ದಾರೆ ಎಂದು ಸಚಿವಾಲಯ ಮಾಹಿತಿ ನೀಡಿದೆ. 

ಅತಿ ಹೆಚ್ಚು ಜನರು ಗುಣಮುಖರಾಗಿರುವುದರಿಂದ ಸಕ್ರಿಯ ಪ್ರಕರಣಗಳು 5,86,244 ಕ್ಕೆ ಇಳಿಕೆಯಾಗಿದೆ. ಕೇಂದ್ರದ ಟೆಸ್ಟ್, ಟ್ರ್ಯಾಕ್, ಟ್ರೀಟ್ ಕಾರ್ಯತಂತ್ರದ ಫಲವಾಗಿ ಕೋವಿಡ್-19 ನಿಂದ ಚೇತರಿಕೆ ಕಾಣುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. 

ಮಂಗಳವಾರದಂದು 6,19,652 ಪರೀಕ್ಷೆಗಳು ನಡೆದಿದ್ದು, ಒಟ್ಟಾರೆ 2,14,84,402 ಸೋಂಕು ಪರೀಕ್ಷೆಗಳು ಈವರೆಗೂ ನಡೆದಿದೆ, ಇದೇ ವೇಳೆ ಒಂದು ಮಿಲಿಯನ್ ಗೆ 15,568 ಪರೀಕ್ಷೆಗಳು ನಡೆಯುತ್ತಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

SCROLL FOR NEXT