ದೇಶ

ಕ್ಯಾಡಿಲಾದಿಂದ ದೇಶದ ಅಗ್ಗದ ಕೋವಿಡ್-19 ಔಷಧ ಮಾರುಕಟ್ಟೆಗೆ ಬಿಡುಗಡೆ: ಬೆಲೆ ಎಷ್ಟು ಗೊತ್ತಾ?

Nagaraja AB

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗಾಗಿ ರೆಮ್ಡಾಕ್ ಬ್ರಾಂಡ್ ಹೆಸರಿನಲ್ಲಿ
ರೆಮ್ಡೆಸಿವಿರ್ ಔಷಧವನ್ನು ದೇಶದ ಮಾರುಕಟ್ಟೆಗೆ ಬಿಡುಗಡೆ ಮಾಡಿರುವುದಾಗಿ ಔಷಧೀಯ ಸಂಸ್ಥೆ ಜಿಡಸ್ ಕ್ಯಾಡಿಲಾ ಗುರುವಾರ
ಹೇಳಿದೆ.

ಇದರ ಬೆಲೆ 100 ಮಿಲಿ ಗ್ರಾಂಗೆ 2800 ರೂ. ಆಗಿದ್ದು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿರುವ ಕೋವಿಡ್-19 ರೋಗಿಗಳ
ಚಿಕಿತ್ಸೆಗಾಗಿ ದೇಶಾದ್ಯಂತ ಎಲ್ಲಾ ಕಡೆ ದೊರೆಯುವಂತೆ ವಿತರಣೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.

ಕೋವಿಡ್-19 ನಿಯಂತ್ರಿಸುವಲ್ಲಿ ರೆಮ್ಡಾಕ್ ಅತ್ಯಂತ ಸೂಕ್ತ ಔಷಧವಾಗಿದ್ದು,  ರೋಗಿಗಳು ಗುಣಮುಖ ಹೊಂದಲು ಅತ್ಯಂತ
ಉಪಯುಕ್ತ ಔಷಧವಾಗಿದೆ ಎಂದು ಕ್ಯಾಡಿಲಾ ಹೆಲ್ತ್ ಕೇರ್ ವ್ಯವಸ್ಥಾಪಕ ನಿರ್ದೇಶಕ ಡಾ. ಡಾ.ಶಾರ್ವಿಲ್ ಪಟೇಲ್ ಪಟೇಲ್
ಹೇಳಿದ್ದಾರೆ.

ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಲಸಿಕೆ ಅಭಿವೃದ್ಧಿಪಡಿಸಿ, ಉತ್ಪಾದನೆ, ವಿತರಣೆ ಹೆಚ್ಚಳ ಅಥವಾ ಹೊಸ
ಅನ್ವೇಷಣೆಯತ್ತ ಕಂಪನಿ ಗಮನ ಕೇಂದ್ರಿಕರಿಸಿರುವುದಾಗಿ ಅವರು ತಿಳಿಸಿದ್ದಾರೆ. 

ಈ ವರ್ಷದ ಜೂನ್ ನಲ್ಲಿ ಜಿಡಸ್ ಕಂಪನಿ ರೆಮ್ಡಿಸೆವಿರ್ ಉತ್ಪಾದನೆ ಮತ್ತು ಮಾರಾಟ  ಮಾಡಲು ಗಿಲಿಡ್ ಸೈನ್ಸ್ ಇಂಕ್  ಕಂಪನಿ ಜೊತೆ ಒಡಂಬಡಿಕೆ ಮಾಡಿಕೊಂಡಿತ್ತು. ಕೋವಿಡ್-19 ನಿಂದ ಬಳಲುತ್ತಿರುವ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಲು ಅಮೆರಿಕಾದ ಆಹಾರ ಮತ್ತು ಔಷಧ ಪ್ರಾಧಿಕಾರ ಅನುಮೋದನೆ ನೀಡಿತ್ತು.

SCROLL FOR NEXT