ದೇಶ

ಜಾಗತಿಕ ವಸತಿ ಮಾರುಕಟ್ಟೆಯಲ್ಲಿ ಬೆಂಗಳೂರಿಗೆ 26 ನೇ ಸ್ಥಾನ 

Nagaraja AB

ನವದೆಹಲಿ: ವಿಲಾಸಿ ವಸತಿ ಆಸ್ತಿಗಳ ವಾರ್ಷಿಕ ಬೆಲೆ ಏರಿಕೆಯಲ್ಲಿ ಬೆಂಗಳೂರು 26 ನೇ ಸ್ಥಾನಪಡೆದಿದ್ದರೆ ರಾಜಧಾನಿ ನವದೆಹಲಿ 
 27ನೇ ಸ್ಥಾನದಲ್ಲಿದೆ. 

ಈ ವಿಚಾರದಲ್ಲಿ ಬೆಂಗಳೂರು ದೆಹಲಿಯನ್ನು ಹಿಂದೆ ನೂಕಿದೆ.ಇದು ಜಾಗತಿಕ ಮಟ್ಟದಲ್ಲಿ ನಡೆದಿರುವ ಮೌಲ್ಯಮಾಪನದ ಫಲಿತಾಂಶ. ನೈಟ್ ಫ್ರಾಂಕ್ ನೀಡಿರುವ ವರದಿಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.ಈ ಪಟ್ಟಿಯಲ್ಲಿ ಮುಂಬೈ 32ನೇ ಸ್ಥಾನದಲ್ಲಿದೆ ಎಂದು 'ಪ್ರೈಮ್ ಗ್ಲೋಬಲ್ ಸಿಟೀಸ್ ಸೂಚ್ಯಂಕ 2020 ತನ್ನ  ವರದಿಯಲ್ಲಿ ತಿಳಿಸಿದೆ.

2020ರಲ್ಲಿ  ಮೊದಲ ಮೂರು ತಿಂಗಳ ವರದಿಗೆ ಹೋಲಿಸಿದಲ್ಲಿ ಬೆಂಗಳೂರು,ಮುಂಬೈ ತಲಾ ಒಂದು ಸ್ಥಾನ ಮೇಲಕ್ಕೆ ಏರಿಕೆಯಾಗಿದೆ. ನೈಟ್ ಪ್ರಕಾರ ವಿಶ್ವದ ಪ್ರಮುಖ ವಸತಿ ಮಾರುಕಟ್ಟೆಯಲ್ಲಿ 26ನೇ ಅತ್ಯಂತ ವೇಗವಾಗಿ ಬೆಳೆಯುವ ನಗರ ಬೆಂಗಳೂರು ಎನಿಸಿಕೊಂಡಿದೆ.

SCROLL FOR NEXT