ದೇಶ

ಪಂ.ಬಂಗಾಳದ ಖಾಸಗಿ ಬಸ್ ಗಳಲ್ಲಿ ಎರಡು ಸೀಟು ತೃತೀಯ ಲಿಂಗಿಗಳಿಗೆ ಮೀಸಲು: ಒಕ್ಕೂಟದ ನಿರ್ಧಾರ 

Sumana Upadhyaya

ಕೋಲ್ಕತ್ತಾ: ಉತ್ತಮ ನಡೆಯೊಂದರಲ್ಲಿ ಪಶ್ಚಿಮ ಬಂಗಾಳದ ಖಾಸಗಿ ಬಸ್ ನಿರ್ವಾಹಕರ ಒಕ್ಕೂಟ ಬಸ್ಸುಗಳಲ್ಲಿ ಎರಡು ಸೀಟುಗಳನ್ನು ತೃತೀಯ ಲಿಂಗಿಗಳಿಗೆ ಮೀಸಲಿಡಲು ನಿರ್ಧರಿಸಿದೆ.

ಒಕ್ಕೂಟಕ್ಕೆ ಸೇರಿದ ಪ್ರತಿ ಬಸ್ಸುಗಳಲ್ಲಿ ಎರಡು ಸೀಟುಗಳನ್ನು ತೃತೀಯ ಲಿಂಗಿಗಳಿಗೆ ನೀಡಲು ನಿರ್ಧರಿಸಲಾಗಿದ್ದು ರಾಜ್ಯದಲ್ಲಿ ಒಕ್ಕೂಟಕ್ಕೆ ಸೇರಿದ 35 ಸಾವಿರದಿಂದ 40 ಸಾವಿರ ಬಸ್ಸುಗಳಿವೆ ಎಂದು ಬಸ್ ಸಿಂಡಿಕೇಟ್ ಜಂಟಿ ಸಮಿತಿಯ ಪ್ರಧಾನ ಕಾರ್ಯದರ್ಶಿ ತಾಪನ್ ಬ್ಯಾನರ್ಜಿ ತಿಳಿಸಿದ್ದಾರೆ.

ಬಸ್ಸುಗಳಲ್ಲಿ ಕೇವಲ ಎರಡು ಸೀಟು ಮೀಸಲಿಡುವುದು ಇಲ್ಲಿ ಮುಖ್ಯವಲ್ಲ, ಬದಲಿಗೆ ತೃತೀಯ ಲಿಂಗಿಗಳನ್ನು ಕೂಡ ಬೇರೆ ಸಾಮಾನ್ಯರಂತೆ ಗುರುತಿಸಿ ಅವರನ್ನೂ ಸಮಾನವಾಗಿ ಕಾಣಬೇಕೆಂಬುದು ಇದರ ಉದ್ದೇಶವಾಗಿದೆ ಎಂದು ಬ್ಯಾನರ್ಜಿ ತಿಳಿಸಿದರು.
ಬೇರೆ ಖಾಸಗಿ ಬಸ್ ನಿರ್ವಾಹಕರು ಮತ್ತು ರಾಜ್ಯ ಸರ್ಕಾರಿ ಬಸ್ ಗಳಲ್ಲಿ ಕೂಡ ಈ ನಡೆಯನ್ನು ಅನುಸರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

SCROLL FOR NEXT