ಚೆನ್ನೈ: ಆಘಾತಕಾರಿ ಘಟನೆಯೊಂದರಲ್ಲಿ ತಮಿಳಿನ ತೂತ್ತುಕ್ಕುಡಿ ಜಿಲ್ಲೆಯ ದಕ್ಷಿಣ ಭಾಗದ ಮನಕ್ಕರೈ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ನಾಡಬಾಂಬ್ ದಾಳಿಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದಾರೆ.
ಇಲ್ಲಿನ ಪೊಲೀಸ್ ಪ್ರಧಾನ ಕಚೇರಿಗೆ ಬಂದಿರುವ ವರದಿಗಳಂತೆ, ಪೋಲೀಸ್ ಕಾನ್ಸ್ ಟೇಬಲ್ ಅನ್ನು ಸುಬ್ರಮಣ್ಯಂ ಎಂದು ಗುರುತಿಸಲಾಗಿದೆ.
ಗ್ರಾಮದಲ್ಲಿ ಅಪರಾಧಿಯೊಬ್ಬನನ್ನು ಬಂಧಿಸಲು ಹೋದಾಗ ಪೋಲೀಸ್ ಮೇಲೆ ಅಪರಾಧಿ ನಾಡಬಾಂಬ್ ಎಸೆದಿದ್ದಾನೆ. ದಾಳಿಯಿಂದ ಪೊಲೀಸ್ ಸ್ಥಳದಲ್ಲೇ ಮೃತಟ್ಟಿದ್ದಾರೆ. ರೌಡಿ ಶೀಟರ್ ದೊರೈ ಮುತ್ತು ಇಲ್ಲಿನ ಮನಕಾರೈ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ ಬಾಂಬ್ ಎಸೆದಿದ್ದು ಹಾಗೆ ಎಸೆಯುವ ವೇಳೆ ಅವನ ಕೈಗೆ ಗಾಯಗಳಾಗಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎರಡು ಕೊಲೆ ಪ್ರಕರಣಗಳು ಮುತ್ತು ವಿರುದ್ಧ ಬಾಕಿ ಉಳಿದಿದ್ದು, ವಿಶೇಷ ತಂಡವು ಮಾಹಿತಿಯನ್ನು ಅನುಸರಿಸಿ ಪ್ರದೇಶಕ್ಕೆ ಆಗಮಿಸಿತ್ತು. ಪೊಲೀಸ್ ತಂಡಕ್ಕೆ ಎಸೆದ ಎರಡು ಬಾಂಬ್‌ಗಳಲ್ಲಿ, ಎರಡನೆಯದು ಸ್ಫೋಟಗೊಂಡು, ಕಾನ್‌ಸ್ಟೆಬಲ್‌ಗೆ ತಲೆಗೆ ಮಾರಣಾಂತಿಕವಾಗಿ ಗಾಯವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆರೋಪಿ ಮುತ್ತು ನೆರೆಯ ತಿರುನೆಲ್ವೇಲಿಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.