ಸಾಂದರ್ಭಿಕ ಚಿತ್ರ 
ದೇಶ

ಶೇ.27ರಷ್ಟು ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್ ಗೆ ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ಸೌಲಭ್ಯವೇ ಇಲ್ಲ: ಸಮೀಕ್ಷೆ ವರದಿ

ಕೋವಿಡ್-19 ಬಂದ ಮೇಲೆ ಜನಜೀವನ ಬದಲಾಗಿದೆ. ಮಕ್ಕಳಿಗೆ ಇನ್ನೂ ಶಾಲೆ ಆರಂಭವಾಗಿಲ್ಲ. ಆನ್ ಲೈನ್ ನಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ಆದರೆ ಇದು ಎಷ್ಟು ಮಂದಿ ಮಕ್ಕಳಿಗೆ ಸರಿಯಾಗಿ ತಲುಪುತ್ತಿದೆ, ಭಾರತದಲ್ಲಿ ಎಷ್ಟು ಮಕ್ಕಳಿಗೆ ಆನ್ ಲೈನ್ ಕ್ಲಾಸ್, ಸ್ಮಾರ್ಟ್ ಫೋನ್ ಸೌಲಭ್ಯ ಸಿಗುತ್ತಿದೆ ಎಂಬ ಪ್ರಶ್ನೆ ಉದ್ಭವವಾಗಿದೆ.

ನವದೆಹಲಿ:ಕೋವಿಡ್-19 ಬಂದ ಮೇಲೆ ಜನಜೀವನ ಬದಲಾಗಿದೆ. ಮಕ್ಕಳಿಗೆ ಇನ್ನೂ ಶಾಲೆ ಆರಂಭವಾಗಿಲ್ಲ. ಆನ್ ಲೈನ್ ನಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ಆದರೆ ಇದು ಎಷ್ಟು ಮಂದಿ ಮಕ್ಕಳಿಗೆ ಸರಿಯಾಗಿ ತಲುಪುತ್ತಿದೆ, ಭಾರತದಲ್ಲಿ ಎಷ್ಟು ಮಕ್ಕಳಿಗೆ ಆನ್ ಲೈನ್ ಕ್ಲಾಸ್, ಸ್ಮಾರ್ಟ್ ಫೋನ್ ಸೌಲಭ್ಯ ಸಿಗುತ್ತಿದೆ ಎಂಬ ಪ್ರಶ್ನೆ ಉದ್ಭವವಾಗಿದೆ.

ಎನ್ ಸಿಇಆರ್ ಟಿ ನಡೆಸಿದ ಸಮೀಕ್ಷೆ ಪ್ರಕಾರ, ಕನಿಷ್ಠ 27 ಶೇಕಡಾದಷ್ಟು ವಿದ್ಯಾರ್ಥಿಗಳು ಸ್ಮಾರ್ಟ್ ಫೋನ್ ಅಥವಾ ಲ್ಯಾಪ್ ಟಾಪ್ ಸೌಲಭ್ಯವನ್ನು ಹೊಂದಿಲ್ಲ. ಶೇಕಡಾ 28ರಷ್ಟು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಇಂಟರ್ನೆಟ್ ವಿದ್ಯುತ್ ಸೌಲಭ್ಯ ಸರಿಯಾಗಿ ಸಿಗುತ್ತಿಲ್ಲ, ಇದರಿಂದ ಬೋಧನೆ-ಕಲಿಕೆಗೆ ಅಡ್ಡಿಯಾಗುತ್ತಿದೆ ಎಂದು ತಿಳಿದುಬಂದಿದೆ.

ಸಮೀಕ್ಷೆಯಲ್ಲಿ 34 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಶಾಲೆಗಳು ಭಾಗವಹಿಸಿವೆ. ಸ್ಮಾರ್ಟ್ ಫೋನ್ ಗಳನ್ನು ಆನ್ ಲೈನ್ ಶಿಕ್ಷಣಕ್ಕೆ ಸರಿಯಾಗಿ ಹೇಗೆ ಬಳಸಿಕೊಳ್ಳುವುದು ಮತ್ತು ಹಲವು ಕಡೆಗಳಲ್ಲಿ ಶಿಕ್ಷಕರು ಕೂಡ ಆನ್ ಲೈನ್ ನಲ್ಲಿ ಬೋಧನೆಯನ್ನು ಪರಿಣಾಮಕಾರಿಯಾಗಿ ಮಾಡುವ ಅನುಭವವನ್ನು ಹೊಂದಿರುವುದಿಲ್ಲ, ಇದರಿಂದ ಕಲಿಕಾ ಪ್ರಕ್ರಿಯೆಗೆ ಹಿನ್ನಡೆಯುಂಟಾಗಿದೆ ಎಂದು ತಿಳಿದುಬಂದಿದೆ.

ಕೋವಿಡ್ 19ನ ಈ ಸಂಕಷ್ಟದ ಪರಿಸ್ಥಿತಿ ಮಧ್ಯೆ ಆನ್ ಲೈನ್ ಕಲಿಕೆಗೆ ಬಹುತೇಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮೊಬೈಲ್ ಫೋನ್ ನ್ನು ಬಳಸಿಕೊಂಡಿದ್ದಾರೆ. ಶೇಕಡಾ 27ರಷ್ಟು ಮಕ್ಕಳು ಸೌಲಭ್ಯದಿಂದ ವಂಚಿತರಾಗಿದ್ದಾರೆ.

ಶೇಕಡಾ 36ರಷ್ಟು ವಿದ್ಯಾರ್ಥಿಗಳು ಪಠ್ಯಪುಸ್ತಕ ಮತ್ತು ಇತರ ಪುಸ್ತಕಗಳನ್ನು ಕಲಿಕೆಗೆ ಬಳಸುತ್ತಿದ್ದಾರೆ. ಶಿಕ್ಷಕರು ಮತ್ತು ಪ್ರಾಂಶುಪಾಲರಿಗೆ ನಂತರ ಲ್ಯಾಪ್ ಟಾಪ್ ಅತ್ಯಂತ ಅಚ್ಚುಮೆಚ್ಚಾಗುತ್ತದೆ. ಈ ಕೊರೋನಾ ಸಮಯದಲ್ಲಿ ರೇಡಿಯೊ ಮತ್ತು ಟಿವಿಗಳನ್ನು ಅತ್ಯಂತ ಕಡಿಮೆಯಾಗಿ ಬಳಸಲಾಗುತ್ತದೆ. ಆನ್ ಲೈನ್ ಪಾಠದ ಮಧ್ಯೆ ಬೋಧಕರು ಮತ್ತು ಮಕ್ಕಳ ಮಧ್ಯೆ ಸಂವಹನ ಕೊರತೆ ಎದ್ದುಕಾಣುತ್ತಿದೆ.

ಇನ್ನು ಹಲವು ರಾಜ್ಯಗಳಲ್ಲಿ ಮಕ್ಕಳ ಶಿಕ್ಷಣ ಪ್ರಗತಿಯನ್ನು ಅಧ್ಯಯನ ಮಾಡಲು ಶಿಕ್ಷಕರು ಮಕ್ಕಳ ಮನೆಗೆ ಹೋಗಿ ಇಲ್ಲವೇ ಫೋನ್ ಮೂಲಕ ವಿಚಾರಿಸುತ್ತಿದ್ದಾರಂತೆ. ಎನ್ ಸಿಇಆರ್ ಟಿ ಸಮೀಕ್ಷೆ ಪ್ರಕಾರ, ಶಿಕ್ಷಣ ಸಚಿವಾಲಯ ವಿದ್ಯಾರ್ಥಿಗಳ ಕಲಿಕೆ ವಿಸ್ತರಣೆ ಮಾರ್ಗಸೂಚಿಯನ್ನು ಪ್ರಕಟಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT