ಮುರ್ಶಿದಾಬಾದ್ 
ದೇಶ

ಪ.ಬಂಗಾಳದಲ್ಲಿ ಟಿವಿ ನೋಡಂಗಿಲ್ಲ, ಸಂಗೀತ ಕೇಳಂಗಿಲ್ಲ, ಕ್ಯಾರಮ್ ಆಡಂಗಿಲ್ಲ: ಇವೆಲ್ಲಾ ಮಾಡಿದರೆ ಬೀಳತ್ತೆ ದಂಡ! 

ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ಟಿ.ವಿ ನೋಡುವುದು, ಸಂಗೀತ ಕೇಳುವುದು, ಕ್ಯಾರಮ್ ಆಡುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. 

ಮುರ್ಶಿದಾಬಾದ್: ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ಟಿ.ವಿ ನೋಡುವುದು, ಸಂಗೀತ ಕೇಳುವುದು, ಕ್ಯಾರಮ್ ಆಡುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. 

ಇದೇನಪ್ಪಾ ಪ್ರಜಾಪ್ರಭುತ್ವ ಸರ್ಕಾರವಿದ್ದರೂ ಪಶ್ಚಿಮ ಬಂಗಾಳದಲ್ಲಿ ಈ ರೀತಿಯ ಅಂಧಾ ದರ್ಬಾರ್ ನಡೆಸಲಾಗುತ್ತಿದೆಯಾ ಎಂದು ಹುಬ್ಬೇರಿಸಬೇಡಿ, ಇಂತಹ ಆದೇಶ ಹೊರಡಿಸಿರುವುದು ಅಲ್ಲಿನ ಅಲ್ಪಸಂಖ್ಯಾತ ಬಾಹುಳ್ಯವಿರುವ ಸಮುದಾಯದ ಮುಖ್ಯಸ್ಥರು! 

ಮುರ್ಶಿದಾಬಾದ್ ಜಿಲ್ಲೆಯಲ್ಲಿ ಪ್ರಬಲವಾಗಿರುವ  ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಕೆಲವೊಂದು ಚಟುವಟಿಕೆಗಳ ಮೇಲೆ ನಿಷೆಧ ವಿಧಿಸಿದ್ದು(ಫತ್ವಾ), ಈ ಪೈಕಿ ಟಿ.ವಿ ನೋಡುವುದು, ಸಂಗೀತ ಕೇಳುವುದು, ಲಾಟರಿ ಟಿಕೆಟ್ ಮಾರಾಟ ಮಾಡುವುದು, ಮದ ಮಾರಾಟ ಮಾಡುವುದು ಕ್ಯಾರಮ್ ಆಡುವುದೂ ಸಹ ಸೇರ್ಪಡೆಯಾಗಿದೆ. ಒಂದು ವೇಳೆ ಈ ಫತ್ವಾವನ್ನು ಉಲ್ಲಂಘನೆ ಮಾಡಿದವರು 500 ರೂಪಾಯಿಗಳಿಂದ 7,000 ರೂಪಾಯಿಗಳ ವರೆಗೆ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ. 

ಸಾಮಾಜಿಕ ಸುಧಾರಣಾ ಸಮಿತಿಯ ಬ್ಯಾನರ್ ನ ಅಡಿಯಲ್ಲಿ ಈ ಫತ್ವಾ ಹೊರಡಿಸಲಾಗಿದೆ. ಈ ಆದೇಶವನ್ನೂ ಮೀರಿ ನಡೆದರೆ ಸಂಗೀತ ಕೇಳಿದರೆ 1,000 ರೂಪಾಯಿ ದಂಡ, ಕೇರಮ್ ಆಡಿದರೆ 500 ರೂಪಾಯಿ ದಂಡ ಲಾಟರಿ ಖರೀದಿಸಿದರೆ 2,000 ರೂಪಾಯಿ ದಂಡ, ಮದ್ಯ ಮಾರಾಟ ಮಾಡಿದರೆ, 7,000 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಫತ್ವಾದಲ್ಲಿ ತಿಳಿಸಲಾಗಿದೆ. 

ಫತ್ವಾ ಉಲ್ಲಂಘಿಸಿದವರ ಬಗ್ಗೆ ಮಾಹಿತಿ ನೀಡುವವರಿಗೂ 200-2000 ರೂಪಾಯಿ ವರೆಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಈ ಅಂಶಗಳೆಲ್ಲವೂ ಯುವ ಪೀಳಿಗೆಯನ್ನು ಸಂಸ್ಕೃತಿ ಮತ್ತು ನೈತಿಕ ಅಧಃಪತನದತ್ತ ಕೊಂಡೊಯ್ಯುವುದನ್ನು ತಪ್ಪಿಸಲು ಸಮಿತಿ ಈ ರೀತಿಯ ನಿಷೇಧ, ಫತ್ವಾ ವಿಧಿಸಿದೆ ಎಂಬ ಸಮರ್ಥನೆಯೂ ವ್ಯಕ್ತವಾಗತೊಡಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT