ಆಟಿಕೆಗಳು 
ದೇಶ

ಸೆ.1ರಿಂದ ಗುಣಮಟ್ಟ ಪರೀಕ್ಷಿಸಿದ ನಂತರವಷ್ಟೇ ಆಮದಾಗುವ ಆಟಿಕೆಗಳಿಗೆ ದೇಶದೊಳಗೆ ಪ್ರವೇಶ- ಪಾಸ್ವಾನ್

ಸೆಪ್ಟೆಂಬರ್ 1ರಿಂದ ಕಡ್ಡಾಯವಾಗಿ ಗುಣಮಟ್ಟ ಪರೀಕ್ಷಿಸಿದ ನಂತರವಷ್ಟೇ ಆಮದು ಮಾಡಿಕೊಂಡ ಆಟಿಕೆಗಳಿಗೆ ದೇಶದೊಳಗೆ ಅವಕಾಶ ನೀಡಲಾಗುವುದು ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.

ನವದೆಹಲಿ: ಸೆಪ್ಟೆಂಬರ್ 1ರಿಂದ ಕಡ್ಡಾಯವಾಗಿ ಗುಣಮಟ್ಟ ಪರೀಕ್ಷಿಸಿದ ನಂತರವಷ್ಟೇ ಆಮದು ಮಾಡಿಕೊಂಡ ಆಟಿಕೆಗಳಿಗೆ ದೇಶದೊಳಗೆ ಅವಕಾಶ ನೀಡಲಾಗುವುದು ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.

ಚೀನಾ ಸೇರಿದಂತೆ ವಿದೇಶದಿಂದ ಆಮದಾಗುವ ಉಕ್ಕು, ರಾಸಾಯನಿಕ, ಔಷಧೀಯ ವಸ್ತುಗಳು, ವಿದ್ಯುತ್ ಯಂತ್ರೋಪಕರಣಗಳಿಗೆ ಗುಣಮಟ್ಟದ ಮಾನದಂಡಗಳನ್ನು ಸರ್ಕಾರ ಕಡ್ಡಾಯಪಡಿಸುತ್ತಿದೆ. ಸಂಬಂಧಿತ ಸಚಿವಾಲಯದ ಸಹಭಾಗಿತ್ವದೊಂದಿಗೆ ಭಾರತೀಯ ಗುಣಮಟ್ಟ ಬ್ಯೂರೋ ಗುಣಮಟ್ಟದ ಮಾನದಂಡಗಳನ್ನು ರೂಪಿಸುತ್ತಿದೆ.

ಆಮದು ಮಾಡಿಕೊಳ್ಳುವ ಆಟಿಕೆಗಳಿಗೆ ಕಡ್ಡಾಯ ಗುಣಮಟ್ಟದ ನಿಯಂತ್ರಣ ಮಾನದಂಡವನ್ನು ಸೆಪ್ಟೆಂಬರ್ 1 ರಿಂದ ಜಾರಿಗೆ ತರಲಾಗುವುದು, ಆಟಿಕೆಗಳು ಮಾತ್ರವಲ್ಲದೇ, ಉಕ್ಕು, ರಾಸಾಯನಿಕಗಳು, ವಿದ್ಯುತ್ ಉಪಕರಣಗಳು ಮತ್ತು ಬೃಹತ್ ಯಂತ್ರೋಪಕರಣಗಳು, ಪ್ಯಾಕೇಜ್ಡ್ ನೀರು, ಹಾಲಿನ ಉತ್ಪನ್ನದಂತಹ ವಸ್ತುಗಳ ಗುಣಮಟ್ಟ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಸುದ್ದಿಗಾರರಿಗೆ ಪಾಸ್ವಾನ್ ತಿಳಿಸಿದ್ದಾರೆ.

ಇದಲ್ಲದೇ, ಚಿನ್ನದ ಗುಣಮಟ್ಟದ ಪರಿಶೀಲನೆ ಜೂನ್ 2021ರಿಂದ ಜಾರಿಗೆ ಬರಲಿದೆ ಎಂದು ಭಾರತೀಯ ಗುಣಮಟ್ಟ ಬ್ಯುರೋ ಮಹಾನಿರ್ದೇಶಕ ಪ್ರಮೋದ್ ಕುಮಾರ್ ತಿವಾರಿ ತಿಳಿಸಿದ್ದಾರೆ.      

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT