ದೇಶ

ನಟಿ ಸ್ವರಾ ಭಾಸ್ಕರ್ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿ ತಿರಸ್ಕರಿಸಿದ ಅಟಾರ್ನಿ ಜನರಲ್

Srinivasamurthy VN

ನವದೆಹಲಿ: ಆಯೋಧ್ಯೆ ರಾಮ ಮಂದಿರ ನಿರ್ಮಾಣ ಮತ್ತು ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು ಎಂಬ ಅರ್ಜಿಯನ್ನು ಅಟಾರ್ನಿ ಜನರಲ್ ತಿರಸ್ಕರಿಸಿದ್ದಾರೆ.

ಆಯೋಧ್ಯೆ ರಾಮ ಮಂದಿರ ನಿರ್ಮಾಣ ಮತ್ತು ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಬಗ್ಗೆ ನಟಿ ಸ್ವರಾ ಭಾಸ್ಕರ್ ತಮ್ಮ ಟ್ವಿಟರ್ ಖಾತೆಯಲ್ಲಿ ವ್ಯಂಗ್ಯ ಮಾಡಿದ್ದರು. ಈ ಕುರಿತು ವಕೀಲ ಅನೂಜ್ ಸಕ್ಸೇನಾ ಎಂಬುವವರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ  ದಾಖಲಿಸಿ, ನಟಿ ಸ್ವರಾ ಭಾಸ್ಕರ್ ಅವರ ಹೇಳಿಕೆ ನ್ಯಾಯಾಲಯದ ಅವಹೇಳನಕಾರಿ ಮತ್ತು ಹಗರಣಾತ್ಮಕವಾದ್ದದ್ದು. ಹೀಗಾಗಿ ಅವರ ವಿರುದ್ಧ 1971 ರ ನ್ಯಾಯಾಂಗ ನಿಂದನೆ ಕಾಯ್ದೆಯ ಸೆಕ್ಷನ್ 15ರ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದರು.

ಈ ಅರ್ಜಿಯ ಕುರಿತು 2 ಪುಟಗಳ ಪತ್ರ ಬರೆದಿರುವ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು, ನ್ಯಾಯಾಲಯದ ತೀರ್ಪಿನ ವಿರುದ್ಧ ಹೇಳಿಕೆ ಅಥವಾ ಟೀಕೆ ಸಾಂವಿಧಾನಿಕ ಸಂಸ್ಥೆಯ ಮೇಲಿನ ದಾಳಿಯಾಗುವುದಿಲ್ಲ. ಟೀಕಿಸಿದ ಮಾತ್ರಕ್ಕೇ ಹಗರಣಾತ್ಮಕವಾಗುವುದಿಲ್ಲ. ನನ್ನ ಅಭಿಪ್ರಾಯದಂತೆ ಸ್ವರ ಭಾಸ್ಕರ್  ಅವರ ಸುಪ್ರೀಂಕೋರ್ಟ್ ಕುರಿತ ಹೇಳಿಕೆ ಅವರ ದೃಷ್ಟಿಕೋನದ್ದು ಮಾತ್ರ ಆಗಿದೆ. ಅದು ಸುಪ್ರೀಂ ಕೋರ್ಟ್ ಬಗ್ಗೆ ನೀಡಿದ ಹೇಳಿಕೆಯಲ್ಲ ಅಥವಾ ಸುಪ್ರೀಂ ಕೋರ್ಟನ್ನು ಅವಮಾನಿಸುವ ಹೇಳಿಕೆ ಅಲ್ಲ ಎಂದು ಕೆ.ಕೆ. ವೇಣುಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ. 

SCROLL FOR NEXT