ಪಣಜಿ: ಕೊರೋನಾದಿಂದ ಬಳಲುತ್ತಿರುವ ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯ್ಕ್ ಅವರ ಆಕ್ಸಿಜನ್ ಮಟ್ಟ ಕುಸಿತ ಕಂಡಿದೆ.
ಏಮ್ಸ್ ನಲ್ಲಿ ವೈದ್ಯರ ತಂಡ ಕೇಂದ್ರ ಸಚಿವರ ಆರೋಗ್ಯವನ್ನು ಗಮನಿಸಲಿದ್ದು ಅವರನ್ನು ದೆಹಲಿಯ ಏಮ್ಸ್ ಗೆ ಸ್ಥಳಾಂತರಿಸಬೇಕೇ? ಎಂಬ ಬಗ್ಗೆ ನಿರ್ಧರಿಸಲಿದೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.
ಗೋವಾ ರಾಜ್ಯ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಶ್ರೀಪಾದ್ ನಾಯ್ಕ್ ಆರೋಗ್ಯದ ಬಗ್ಗೆ ಮಾತನಾಡಿದ್ದು, ನಾಯ್ಕ್ ಅವರು ಅಕ್ಷರಸಹ ಸಾವಿನ ಕದ ತಟ್ಟಿ ಮರಳಿದ್ದಾರೆ ಎಂದು ಹೇಳಿದ್ದರು. ಮಣಿಪಾಲ್ ಆಸ್ಪತ್ರೆಯಲ್ಲಿ ನಾಯ್ಕ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಆ.14 ರಂದು ಸಚಿವರಿಗೆ ಕೋವಿಡ್-19 ಸೋಂಕು ದೃಢಪಟ್ಟಿತ್ತು.