ದೇಶ

ರಿಸರ್ವ್ ಬ್ಯಾಂಕ್ ಆಫ್ ಕೈಲಾಸ, ಹಿಂದೂ ಸಂಸತ್ ಘೋಷಣೆ ಮಾಡಿದ ನಿತ್ಯಾನಂದ! 

Srinivas Rao BV

ಬೆಂಗಳೂರು: ಪ್ರತ್ಯೇಕ ರಾಷ್ಟ್ರ ರಚನೆ ಮಾಡಿಕೊಂಡು, ಆ ದ್ವೀಪಕ್ಕೆ ಕೈಲಾಸವೆಂದು ಹೆಸರು ನೀಡಿದ್ದ ನಿತ್ಯಾನಂದ ಈಗ ಹಿಂದೂ ಸಂಸತ್ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಕೈಲಾಸವನ್ನು ಘೋಷಿಸಿದ್ದಾರೆ. 

ಮುಂದಿನ ಆರು ತಿಂಗಳಲ್ಲಿ ಹಿಂದೂ ಸಂಸತ್ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಕೈಲಾಸ ಅಸ್ತಿತ್ವಕ್ಕೆ ಬರಲಿದೆ ಎಂದು ನಿತ್ಯಾನಂದ ಘೋಷಿಸಿದ್ದಾರೆ. ಗಣಪತಿಯ ಆಶೀರ್ವಾದದೊಂದಿಗೆ ನಾವು ಹಿಂದೂ ಧರ್ಮಕ್ಕಾಗಿ ಹಿಂದೂ ಸಂಸತ್ ನ್ನು ಸ್ಥಾಪಿಸಲು ಇಚ್ಛಿಸುತ್ತಿದ್ದೇವೆ, ಹಿಂದ್ ಧಾರ್ಮಿಕ ಮೂಲದ ಸಂಘಟನೆಗಳ ಮಾದರಿ ಸರ್ಕಾರವನ್ನು ಸ್ಥಾಪಿಸುವುದು ಇದರ ಉದ್ದೇಶ ಎಂದು ಅಧಿಕೃತ ಸಮಾಜಿಕ ಜಾಲತಾಣದ ಮೂಲಕ ನಿತ್ಯಾನಂದ ತಿಳಿಸಿದ್ದಾರೆ. 

ಸಂಸತ್ ಸ್ಥಾಪನೆಗೆ 6 ತಿಂಗಳ ಕಾಲಾವಧಿ ಹಿಡಿಯಬಹುದು. ಜನವರಿ ವೇಳೆಗೆ ಈ ಕೆಲಸ ಮುಕ್ತಾಯಗೊಳ್ಳಲಿದೆ ಎಂದು ನಿತ್ಯಾನಂದ ಹೇಳಿದ್ದಾರೆ. ಸಂಸತ್ ನಲ್ಲಿ ಆರು ಭಾಗಗಳಿರಲಿದ್ದು, ಚಿತ್ ಸಭೆ, ರಾಜ ಸಭೆ, ದೇವ ಸಭೆ, ಕನಕ ಸಭೆ, ನಿತ್ಯಾನಂದ ಸಭೆ ಎಂದು ಇವುಗಳಿಗೆ ನಾಮಕರಣ ಮಾಡಲಾಗಿದೆ. 

ವೇದ, ಆಗಮಗಳಲ್ಲಿ ಪರಮಶಿವ ಹೇಳಿದ ಪ್ರಕಾರವಾಗಿಯೇ ಈ ಐದೂ ಸಭೆಗಳು ಕಾರ್ಯನಿರ್ವಹಣೆ ಮಾಡಲಿವೆ, ಆರು ತಿಂಗಳಲ್ಲಿ ಇವುಗಳ ಸದಸ್ಯರು ಹಾಗೂ ರಚನೆಯ ವಿವರಗಳನ್ನು ಬಿಡುಗಡೆಯಾಗಲಿದೆ. 

SCROLL FOR NEXT