ಐಎಸ್ಐ 
ದೇಶ

ಪಾಕ್ ಐಎಸ್ಐ ಗೆ ಕರಾಚಿಯ ಸೆಕ್ಸ್ ವರ್ಕರ್ ಮೂಲಕ ಗೋರಖ್ ಪುರದ ವ್ಯಕ್ತಿಯ ನೇಮಕ: ಸ್ಫೋಟಕ ಮಾಹಿತಿ ಬಹಿರಂಗ! 

ಪಾಕಿಸ್ತಾನ ಗುಪ್ತಚರ ಇಲಾಖೆ ಐಎಸ್ಐ ಭಾರತದಲ್ಲಿ ತನಗಾಗಿ ಕೆಲಸ ಮಾಡುವುದಕ್ಕೆ ಗೋರಖ್ ಪುರದ ವ್ಯಕ್ತಿಯೋರ್ವನನ್ನು ಕರಾಚಿಯ ಸೆಕ್ಸ್ ವರ್ಕರ್ ಮೂಲಕ ಬಲೆಗೆ ಕೆಡವಲು ಯತ್ನಿಸಿದ್ದ  ಕೃತ್ಯ ಬಹಿರಂಗವಾಗಿದೆ. 

ಲಖನೌ: ಪಾಕಿಸ್ತಾನ ಗುಪ್ತಚರ ಇಲಾಖೆ ಐಎಸ್ಐ ಭಾರತದಲ್ಲಿ ತನಗಾಗಿ ಕೆಲಸ ಮಾಡುವುದಕ್ಕೆ ಗೋರಖ್ ಪುರದ ವ್ಯಕ್ತಿಯೋರ್ವನನ್ನು ಕರಾಚಿಯ ಸೆಕ್ಸ್ ವರ್ಕರ್ ಮೂಲಕ ಬಲೆಗೆ ಕೆಡವಲು ಯತ್ನಿಸಿದ್ದ  ಕೃತ್ಯ ಬಹಿರಂಗವಾಗಿದೆ. 

ಗೋರಖ್ ಪುರದ ಪತ್ನಿಯನ್ನು ಕಳೆದುಕೊಂಡಿದ್ದ (ವಿದುರ) ಗೋರಖ್ ಪುರದ ಮೊಹಮ್ಮದ್ ಆರೀಫ್ (51) ಎಂಬ ವ್ಯಕ್ತಿಯೋರ್ವ ತನ್ನ ಸಂಬಂಧಿಕರನ್ನು ಭೇಟಿ ಮಾಡಲು ಕರಾಚಿಗೆ ಆಗಾಗ್ಗೇ ಹೋಗಿ ಬರುತ್ತಿದ್ದ. ಇದನ್ನೇ ಬಂಡವಾಳವಾಗಿರಿಸಿಕೊಂಡ ಪಾಕಿಸ್ತಾನದ ಐಎಸ್ಐ ಕರಾಚಿಯ ಸೆಕ್ಸ್ ವರ್ಕರ್ ನನ್ನಿಟ್ಟುಕೊಂಡು ಹನಿ ಟ್ರ್ಯಾಪ್ ಮೂಲಕ ಆತನನ್ನು ಬಲೆಗೆ ಕೆಡವಿ ಭಾರತದಲ್ಲಿ ತನ್ನ ಪರವಾಗಿ ಕೆಲಸ ಮಾಡಲು ಬೆದರಿಕೆ ಹಾಕುವ ಯೋಜನೆ ರೂಪಿಸಿತ್ತು. 

ಆದರೆ ಭಾರತದ ಸೇನಾ ಗುಪ್ತಚರ ವಿಭಾಗದಿಂದ ಈ ಯೋಜನೆ ವಿಫಲವಾಗಿದ್ದು, ಐಎಸ್ಐ ಕುಕೃತ್ಯ ಬಹಿರಂಗವಾಗಿದೆ. 

ಆಪರೇಷನ್ ಗೋರಖ್ ದಂಧಾ ಎಂಬ ಹೆಸರಿನ ಕಾರ್ಯಾಚರಣೆ ವೇಳೆ ಈ ಸಂಚು ಬಯಲಾಗಿದೆ. ಸೇನಾ ಗುಪ್ತಚರ (ಎಂಐ) ಹಾಗೂ ಉತ್ತರ ಪ್ರದೇಶದ ಭಯೋತ್ಪದನೆ ನಿಗ್ರಹ ತಂಡ (ಎಟಿಎಸ್) ಜಂಟಿ ಕಾರ್ಯಾಚರಣೆಯ ಮೂಲಕ ಐಎಸ್ಐ ನ ಕೃತ್ಯ ಬಯಲಾಗಿದ್ದು, ಭಾರತದಲ್ಲಿ ಗೂಢಚಾರರನ್ನು ನೇಮಕ ಮಾಡಿಕೊಳ್ಳುವ ಅದರ ಸಂಚು ವಿಫಲಗೊಂಡಿದೆ. 

ಎಟಿಎಸ್ ನ ಹೆಚ್ಚುವರಿ ಪ್ರಧಾನ ನಿರ್ದೇಶಕ ಡಿ.ಕೆ ಠಾಕೂರ್ ಐಎಸ್ಐನ ಬಲೆಗೆ ಬಿದಿದ್ದ ವ್ಯಕ್ತಿ ಮೊಹಮ್ಮದ್ ಆರೀಫ್ ನ ಬಂಧನವನ್ನು ಖಚಿತಪಡಿಸಿದ್ದಾರೆ. 

ಐಎಎನ್ಎಸ್ ವರದಿಯ ಪ್ರಕಾರ, ಗೋರಖ್ ಪುರ ಮೂಲದ ಮೊಬೈಲ್ ನಂಬರ್ ಒಂದರ ಮೂಲಕ ಅನುಮಾನಾಸ್ಪದ ಚಟುವಟಿಕೆಗಳು, ಸಂವಾದಗಳು ನಡೆಯುತ್ತಿರುವುದರ ಬಗ್ಗೆ ಜಮ್ಮು-ಕಾಶ್ಮೀರದ ಸೇನಾ ಗುಪ್ತಚರ ವಿಭಾಗ ಲಖನೌ ನಲ್ಲಿದ್ದ ಸೇನಾ ಗುಪ್ತಚರ ವಿಭಾಗಕ್ಕೆ ಮಾಹಿತಿ ರವಾನೆ ಮಾಡಿದೆ.  ಈ ಬಳಿಕ ಅಲ್ಲಿನ ಸ್ಥಳೀಯ ಅಧಿಕಾರಿಗಳು ಗೋರಖ್ ಪುರದಲ್ಲಿನ ಶಂಕಿತನ ಮೇಲೆ ಕಣ್ಣಿರಿಸಿದ್ದರು, ಇದಕೆಕ್ ಆಪರೇಷನ್ ಗೋರಖ್ ಧಂದಾ ಎಂಬ ಹೆಸರಿಡಲಾಗಿತ್ತು. ಅಗತ್ಯವಿರುವ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ಅಧಿಕಾರಿಗಳು ಮೊಹಮ್ಮದ್ ಆರೀಫ್ ನನ್ನು ವಿಚಾರಣೆಗೆ ಕರೆಸಿದ್ದು, ಆತ ವಿಚಾರಣೆ ವೇಳೆ ತಾನು ಹೇಗೆ ಐಎಸ್ಐ ಗೆ ಸೆಕ್ಸ್ ವರ್ಕರ್ ನ ಹನಿ ಟ್ರ್ಯಾಪ್ ಮೂಲಕ ಬಲೆಗೆ ಬಿದ್ದು ಹೇಗೆ ನೇಮಕಗೊಂಡೆ ಎಂಬುದನ್ನು ವಿವರಿಸಿದ್ದಾನೆ. 

ಫೆಬ್ರವರಿ 2020 ರಲ್ಲಿ ಉತ್ತರ ಪ್ರದೇಶದ ಎಟಿಎಸ್ ಹಾಗೂ ಸೇನಾ ಗುಪ್ತಚರ ಕಾರ್ಯಾಚರಣೆಯಲ್ಲಿ ಬಂಧನಕ್ಕೊಳಗಾಗಿದ್ದ ಮೊಹಮ್ಮದ್ ರಶೀದ್ ಎಂಬಾತನ ಪ್ರಕರಣಕ್ಕೂ ಈ ಪ್ರಕರಣಕ್ಕೂ ಸಾಮ್ಯತೆ ಇದೆ. ಮೊಹಮ್ಮದ್ ರಶೀದ್ ಪ್ರಕರಣವನ್ನು ಎನ್ಐಎ ತನಿಖೆ ಮಾಡುತ್ತಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

SCROLL FOR NEXT