ದೇಶ

ನೀಟ್, ಜೆ ಇಇ ಪರೀಕ್ಷೆ ಮೂಂದೂಡಲು ಸುಪ್ರೀಂಗೆ 6 ರಾಜ್ಯಗಳ ಮನವಿ

Srinivasamurthy VN

ನವದೆಹಲಿ: ನೀಟ್, ಜೆ ಇಇ ಪರೀಕ್ಷೆ ಆಯೋಜನೆ ಕುರಿತ ಕೇಂದ್ರ ಸರ್ಕಾರ ಹಠಮಾರಿ ಧೋರಣೆ ವಿರುದ್ಧ ಬಿಜೆಪಿಯೇತರ ರಾಜ್ಯಗಳು ತಿರುಗಿಬಿದ್ದಿದ್ದು, ಪರೀಕ್ಷೆ ಮೂಂದೂಡುವಂತೆ ಸುಪ್ರೀಂ ಕೋರ್ಟ್ 6 ರಾಜ್ಯ ಸರ್ಕಾರಗಳು ಅರ್ಜಿ ಸಲ್ಲಿಸಿವೆ.

ಕೊರೊನಾ ಸೋಂಕು ಹರಡುವಿಕೆ, ಮತ್ತು ಕೆಲವು ರಾಜ್ಯಗಳಲ್ಲಿ ಪ್ರವಾಹ ಭೀತಿ, ತೊಂದರೆಯ ಕಾರಣ 2020ನೇ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ನೀಟ್ ಮತ್ತು ಜಂಟಿ ಪ್ರವೇಶ ಪರೀಕ್ಷೆ (ಜೆ ಇಇ) ನಡೆಸಲು ಮುಂದಾಗಿರುವ ಕೇಂದ್ರದ ವಿರುದ್ಧ 6 ಆರು ರಾಜ್ಯಗಳು ಸುಪ್ರೀಂಕೋರ್ಟ್ ಮೊರೆ  ಹೋಗಿವೆ.

ಸಪ್ಟೆಂಬರ್ ತಿಂಗಳಿನಲ್ಲೇ ಇಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ನಡೆಸಬಾರದು. ಬದಲಿಗೆ ಈ ದಿನಾಂಕ ಮುಂದೂಡುವಂತೆ ಸರ್ವೋಚ್ಛ ನ್ಯಾಯಾಲಯಕ್ಕೆ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗಿದೆ. ಬಿಜೆಪಿ ಸರ್ಕಾರೇತರ ರಾಜ್ಯಗಳಾದ ಪಶ್ಚಿಮ ಬಂಗಾಳ, ರಾಜಸ್ಥಾನ, ಪಂಜಾಬ್,  ಮಹಾರಾಷ್ಟ್ರ, ಛತ್ತೀಸ್ ಗಢ ಮತ್ತು ಜಾರ್ಖಂಡ್ ರಾಜ್ಯಗಳು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿವೆ.

ಇದರ ಜೊತೆಗೆ ದೇಶಾದ್ಯಂತ ಹಲವೆಡೆ ಜೆಇಇ ಮತ್ತು ನೀಟ್ ಪರೀಕ್ಷೆಗಳನ್ನು ವಿರೋಧಿಸಿ ಕಾಂಗ್ರೆಸ್ ಮತ್ತು ಭಾರತದ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

SCROLL FOR NEXT