ಎಸ್ ಜೈಶಂಕರ್ 
ದೇಶ

ಭಯೋತ್ಪಾದನೆ ಸಾಂಕ್ರಾಮಿಕ ರೋಗದಂತೆ ಎಲ್ಲರ ಮೇಲೆ ಪ್ರಭಾವ ಬೀರುವ ಕ್ಯಾನ್ಸರ್: ಕೇಂದ್ರ ಸಚಿವ ಜೈಶಂಕರ್

ಭಯೋತ್ಪಾದಕರನ್ನು ಹುಟ್ಟಿಸಿ ಅವರನ್ನೇ ತಮ್ಮ ಪ್ರಾಥಮಿಕ ರಫ್ತು ಸರಕನ್ನಾಗಿಸಿಕೊಂಡಿದ್ದ ರಾಷ್ಟ್ರಗಳು ಈಗ  ತಮ್ಮನ್ನು ಭಯೋತ್ಪಾದನೆಯ ಬಲಿಪಶುಗಳೆಂದು ಬಿಂಬಿಸಲು ಪ್ರಯತ್ನಿಸುತ್ತಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್  ಹೇಳಿದ್ದಾರೆ. ಅಪಾಯವನ್ನು ಬೆಂಬಲಿಸುವ ಸಂಘಟನೆಗಳನ್ನು ಸ್ಥಗಿತಗೊಳಿಸಲು ಜಾಗತಿಕ ಕಾರ್ಯವಿಧಾನಗಳನ್ನು ರಚಿಸಬೇಕು ಎಂದು ಅವರು ಕರೆ ನೀಡಿದರು.

ನವದೆಹಲಿ: ಭಯೋತ್ಪಾದಕರನ್ನು ಹುಟ್ಟಿಸಿ ಅವರನ್ನೇ ತಮ್ಮ ಪ್ರಾಥಮಿಕ ರಫ್ತು ಸರಕನ್ನಾಗಿಸಿಕೊಂಡಿದ್ದ ರಾಷ್ಟ್ರಗಳು ಈಗ  ತಮ್ಮನ್ನು ಭಯೋತ್ಪಾದನೆಯ ಬಲಿಪಶುಗಳೆಂದು ಬಿಂಬಿಸಲು ಪ್ರಯತ್ನಿಸುತ್ತಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್  ಹೇಳಿದ್ದಾರೆ. ಅಪಾಯವನ್ನು ಬೆಂಬಲಿಸುವ ಸಂಘಟನೆಗಳನ್ನು ಸ್ಥಗಿತಗೊಳಿಸಲು ಜಾಗತಿಕ ಕಾರ್ಯವಿಧಾನಗಳನ್ನು ರಚಿಸಬೇಕು ಎಂದು ಅವರು ಕರೆ ನೀಡಿದರು.

ಪಾಕಿಸ್ತಾನದ ಬಗ್ಗೆ ಸ್ಪಷ್ಟವಾದ ಉಲ್ಲೇಖ ಮಾಡುತ್ತಾ ಅಂತರರಾಷ್ಟ್ರೀಯ ಒತ್ತಡವು ಅಂತಿಮವಾಗಿ ಭಯೋತ್ಪಾದಕ ಗುಂಪುಗಳು ಮತ್ತು ಸಂಬಂಧಿತ ಕ್ರಿಮಿನಲ್ ಸಿಂಡಿಕೇಟ್‌ಗಳಿಗೆ "ಸಹಾಯ ತರಬೇತಿ ಮತ್ತು ನಿರ್ದೇಶನ" ನೀಡುವಲ್ಲಿ ಒಂದು ರಾಷ್ಟ್ರವನ್ನು  ಒತ್ತಾಯಿಸಿದೆ ಎಂದು ಹೇಳಿದರು. 

ಕಳೆದ ವಾರ ಪಾಕಿಸ್ತಾನದ ಶಾಸನಬದ್ಧ ನಿಯಂತ್ರಣ ಆದೇಶದಲ್ಲಿ (ಎಸ್‌ಆರ್‌ಒ) ದಾವೂದ್ ಇಬ್ರಾಹಿಂ, ಹಫೀಜ್ ಸಯೀದ್ ಮತ್ತು ಮಸೂದ್ ಅಜರ್ ಸೇರಿದಂತೆ 80 ಭಯೋತ್ಪಾದಕರ ಹೆಸರುಗಳನ್ನು ಉಲ್ಲೇಖಿಸಲಾಗಿದೆ.

ಪಾಕಿಸ್ತಾನ ಭಯೋತ್ಪಾದನಾ ವಿರೋಧಿ ಒಕ್ಕೂಟ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ನ ಕಪ್ಪುಪಟ್ಟಿಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಈ ಆದೇಶವನ್ನು ನೀಡಿದೆ.

ದಿ ಎನರ್ಜಿ ರಿಸರ್ಚ್ ಇನ್ಸ್ಟಿಟ್ಯೂಟ್ (ಟೆರಿ) ಆಯೋಜಿಸಿದ್ದ 19 ನೇ ದರ್ಬಾರಿ ಸೇಥ್ ಸ್ಮಾರಕ ಉಪನ್ಯಾಸದಲ್ಲಿ ಜೈಶಂಕರ್ ಅವರು ಭಾರತದ ಜಾಗತಿಕ ದೃಷ್ಟಿಕೋನ, ಸ್ವಾವಲಂಬನೆಯ ಸಾರ (ಆತ್ಮನಿರ್ಭರತೆ)ಮತ್ತು ಬಹುಪಕ್ಷೀಯತೆ ಸೇರಿದಂತೆ ಹಲವಾರು ವಿಷಯಗಳ ಕುರಿತುಮಾತನಾಡಿದ್ದಾರೆ.

"ರಾಜಕೀಯ ಫ್ಯಾಷನ್ ಮತ್ತು ವಾಣಿಜ್ಯ ಅನುಕೂಲತೆಗಾಗಿ ಜೀವನೋಪಾಯ ಮತ್ತು ನಾವೀನ್ಯತೆಯ ತ್ಯಾಗ ಮಾಡುವುದು ಸರಿಯಲ್ಲ. ನಮ್ಮ ದೇಶವು ಅವುಗಳನ್ನು ರಕ್ಷಿಸುವ ವಿಶ್ವಾಸದಲ್ಲಿದೆ. ಆಡುವ ವಿಶ್ವಾಸವಿದ್ದಾದರೆ ನಮ್ಮಲ್ಲಿ ಆಡಲು ಸಾಕಷ್ಟು ಕಾರ್ಡುಗಳಿದೆ. ಆರ್ಥಿಕ ವಿಷಯಗಳ ಬಗ್ಗೆ ಮಾತನಾಡುತ್ತಾಸರ್ಕಾರದ ಗಮನವನ್ನು ಎತ್ತಿ ತೋರಿಸಿದ ಸಚಿವರು ಭಾರತವನ್ನು ಸ್ವಾವಲಂಬಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಬೆಂಬಲಿಸಲು ಕೋರಿದ್ದಾರೆ.

ಭಯೋತ್ಪಾದನೆಯ ಸವಾಲಿನ ಬಗ್ಗೆ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವರು, ಸಾಂಕ್ರಾಮಿಕ ರೋಗಗಳು ಎಲ್ಲಾ ಮಾನವರ ಮೇಲೆ ಪ್ರಭಾವ ಬೀರುವಂತೆಯೇ ಇದು ಎಲ್ಲರ ಮೇಲೆ ಪರಿಣಾಮ ಬೀರುವ ಕ್ಯಾನ್ಸರ್ ಎಂದಿದ್ದಾರೆ. 

9/11' ಭಯೋತ್ಪಾದಕ ದಾಳಿ ಮತ್ತು '26 / 11 'ಮುಂಬೈದಾಳಿಯ ಬಗೆಗೆ ಪ್ರಸ್ತಾಪಿಸಿದ್ದ ಸಚಿವರು ಎಫ್‌ಎಟಿಎಫ್‌ನಂತಹ ಹಲವಾರು ಕಾರ್ಯವಿಧಾನಗಳನ್ನು ಜಾರಿಗೆ ತರಲಾಗಿದೆ ಆದರೆ ಜಗತ್ತು ಇನ್ನೂ "ಸಮಗ್ರ ಪರಿಹಾರ"ದ ಕೊರತೆಯನ್ನು ಎದುರಿಸುತ್ತಿದೆ. ಅಂತರರಾಷ್ಟ್ರೀಯ ಭಯೋತ್ಪಾದನೆ ಕುರಿತು ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳು ಇನ್ನೂ ಕೆಲವು ಮೂಲ ತತ್ವಗಳೊಂದಿಗೆ ಕುಸ್ತಿಯಾಡುತ್ತಿದೆ.ಎಲ್ಲಾ ಸಮಯದಲ್ಲೂ, ಭಯೋತ್ಪಾದಕರ ಉತ್ಪಾದನೆಯನ್ನು ಪ್ರಾಥಮಿಕ ರಫ್ತುವನ್ನಾಗಿ ಪರಿವರ್ತಿಸಿದ ರಾಷ್ಟ್ರಗಳು ತಮ್ಮನ್ನು ಭಯೋತ್ಪಾದನೆಯ ಬಲಿಪಶುಗಳೆಂದು ಬಿಂಬಿಸಲು ಬ್ಲಾಂಡ್ ನಿರಾಕರಣೆಯ ಮೂಲಕ ಪ್ರಯತ್ನಿಸಿವೆ ಎಂದು ಅವರು ಹೇಳಿದರು.

ಅದೇ ಸಮಯದಲ್ಲಿ, ಭಯೋತ್ಪಾದಕ ಗುಂಪುಗಳಿಗೆ ಮತ್ತು ಅದರ ಮುಂಚೂಣಿ ಏಜೆನ್ಸಿಗಳಿಗೆ ಹಣದ ಹರಿವನ್ನು  ತಡೆಗಟ್ಟಲು ಅಂತರರಾಷ್ಟ್ರೀಯ ಕಾರ್ಯವಿಧಾನಗಳ ಮೂಲಕ ನಿರಂತರ ಒತ್ತಡ ಹೇರಿದೆ ಎಂದು ಜೈಶಂಕರ್ ಹೇಳಿದರು, "ಭಯೋತ್ಪಾದಕ ಗುಂಪುಗಳು ಮತ್ತು ಸಂಬಂಧಿತ ಕ್ರಿಮಿನಲ್ ಸಿಂಡಿಕೇಟ್‌ಗಳಿಗೆ ಸಹಾಯ ಮಾಡಲು, ರಬೇತಿ ನೀಡಲು ಮತ್ತು ನಿರ್ದೇಶಿಸಲು ಇದು ಅಂತಿಮವಾಗಿ ಒಂದು ರಾಷ್ಟ್ರವನ್ನು ಒತ್ತಾಯಿಸಿದೆ "ದಕ್ಷಿಣ ಏಷ್ಯಾದಲ್ಲಿ ಅಥವಾ ಜಗತ್ತಿನಾದ್ಯಂತ ಭಯೋತ್ಪಾದನೆಯನ್ನು ಬೆಂಬಲಿಸುವ ಮತ್ತು ಶಕ್ತಗೊಳಿಸುವ ರಚನೆಗಳನ್ನು ಸ್ಥಗಿತಗೊಳಿಸಲು ಅಗತ್ಯ ವ್ಯವಸ್ಥೆಗಳನ್ನು ರಚಿಸುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಗಬೇಕಾದ ತುರ್ತು" ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

SCROLL FOR NEXT