ಸಂಗ್ರಹ ಚಿತ್ರ 
ದೇಶ

ಲಖನೌ ಗುಂಡಿನ ದಾಳಿಗೆ ಟ್ವಿಸ್ಟ್: ಅಪ್ರಾಪ್ತ ಮಗಳಿಂದ ರೈಲ್ವೆ ಅಧಿಕಾರಿಯ ಪತ್ನಿ, ಮಗನ ಗುಂಡಿಕ್ಕಿ ಕೊಲೆ

ರೈಲ್ವೆ ಕಾರ್ಯನಿರ್ವಾಹಕ ನಿರ್ದೇಶಕರ ಪತ್ನಿ ಮತ್ತು ಮಗನನ್ನು ಅವರ ಅಪ್ರಾಪ್ತ ಮಗಳೇ ಮನೆಯಲ್ಲಿ ಗುಂಡಿಕ್ಕಿ ಸಾಯಿಸಿರುವ ಘಟನೆ ಶನಿವಾರ ಇಲ್ಲಿನ ಗೌತಂಪಳ್ಳಿ ಪ್ರದೇಶದಲ್ಲಿ ನಡೆದಿದೆ. 

ಲಖನೌ: ರೈಲ್ವೆ ಕಾರ್ಯನಿರ್ವಾಹಕ ನಿರ್ದೇಶಕರ ಪತ್ನಿ ಮತ್ತು ಮಗನನ್ನು ಅವರ ಅಪ್ರಾಪ್ತ ಮಗಳೇ ಮನೆಯಲ್ಲಿ ಗುಂಡಿಕ್ಕಿ ಸಾಯಿಸಿರುವ ಘಟನೆ ಶನಿವಾರ ಇಲ್ಲಿನ ಗೌತಂಪಳ್ಳಿ ಪ್ರದೇಶದಲ್ಲಿ ನಡೆದಿದೆ. 

ಮೃತರನ್ನು ಮಾಲತಿ (48) ಮತ್ತು ಶರದ್ (19) ಎಂದು ಗುರುತಿಸಲಾಗಿದೆ. ಶನಿವಾರ ಬೆಳಿಗ್ಗೆ ಮಾಹಿತಿ ದೊರೆತ ತಕ್ಷಣ ರೈಲ್ವೆ ಕಾಲೋನಿಯಲ್ಲಿರುವ ಮನೆಗೆ ಪೊಲೀಸರು ತಲುಪಿದಾಗ ತಾಯಿ ಮತ್ತು ಮಗ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ ಎಂದು ಲಕ್ನೋ ಪೊಲೀಸ್ ಆಯುಕ್ತ ಸುಜೀತ್ ಪಾಂಡೆ ಇಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯಂತೆ ಅಪ್ರಾಪ್ತ ಬಾಲಕಿ ಗುಂಡು ಹಾರಿಸಿದ್ದಾಳೆ. ಅಪರಾಧವನ್ನು ಆಕೆ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸ್ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಅಪರಾಧಕ್ಕೆ ಬಳಸಿದ 0.22 ಬೋರ್ ಪಿಸ್ತೂಲ್ ಮತ್ತು ಮನೆಯಲ್ಲಿನ ಇತರ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿ. ನಾಗೇಂದ್ರಗೆ ಬಿಗ್ ಶಾಕ್​: ಮಾಜಿ ಸಚಿವರನ್ನು ಮತ್ತೆ ತೀವ್ರ ವಿಚಾರಣೆಗೆ ಒಳಪಡಿಸಿದ ED; ಮರು ವಿಚಾರಣೆ ಯಾಕೆ?

ದೆಹಲಿ ಕಟ್ಟಡ ಕುಸಿತ ದುರಂತ: ರಾಜಸ್ಥಾನದಲ್ಲಿ ತಲೆಮರೆಸಿಕೊಂಡಿದ್ದ ಪಿಜಿ ಮಾಲೀಕ ಅಂದರ್; ಐವರು ಅಧಿಕಾರಿಗಳ ಅಮಾನತು!

'ಇಸ್ರೋ ಖಾಸಗೀಕರಣವಾಗುತ್ತಿಲ್ಲ, ನಾವು ನೌಕರರೊಂದಿಗೆ ಮಾತನಾಡುತ್ತೇವೆ': ಭಾರತೀಯ ಬಾಹ್ಯಾಕಾಶ ಸಂಸ್ಥೆ ಮುಖ್ಯಸ್ಥ

ಯುಎಇಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಎಂಜಿನ್ ಆಯಿಲ್ ದಿಢೀರ್ ಕುಸಿತ: ಕೊಚ್ಚಿಗೆ ವಾಪಸ್; ತಪ್ಪಿದ ದೊಡ್ಡ ಅನಾಹುತ

‘ನಿನಗೆ ಖಂಡಿತಾ ಗರ್ಲ್ ಫ್ರೆಂಡ್ ಇಲ್ಲ ಅನಿಸುತ್ತೆ’: ಕ್ರಿಕೆಟರ್ ಜೊತೆ ಡೇಟಿಂಗ್ ರೂಮರ್‌, ಅಭಿಮಾನಿಗೆ ನಟಿ Ameesha Patel ಖಡಕ್ ತಿರುಗೇಟು!