ದೇಶ

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಆಟಿಕೆಗಳ ಮೇಲೆ ಗಮನ- ಪ್ರಧಾನಿ ಮೋದಿ

Nagaraja AB

ನವದೆಹಲಿ: ಭಾರತವನ್ನು ಜಾಗತಿಕ ಆಟಿಕೆಗಳ ತಯಾರಿಕೆ ಕೇಂದ್ರವಾಗಿ ಹೊರಹೊಮ್ಮಿಸುವ  ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ ಆಟಿಕೆಗಳ ಮೇಲೆ ಗಮನ ಹರಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಆಕಾಶವಾಣಿಯಲ್ಲಿ ತಿಂಗಳ 'ಮನ್ ಕೀ ಬಾತ್' ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೋವಿಡ್-19
ಲಾಕ್ ಡೌನ್ ಸಂದರ್ಭದಲ್ಲಿ ಮಕ್ಕಳ ಬಗ್ಗೆ ಯೋಚಿಸಿದೆ ಮತ್ತು ಭಾರತವನ್ನು ಜಾಗತಿಕ ಆಟಿಕೆಗಳ ತಯಾರಿಕೆ ಕೇಂದ್ರವಾಗಿ ರೂಪಿಸುವ ಬಗ್ಗೆ ಚರ್ಚಿಸಿದ್ದಾಗಿ ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಆಟಿಕೆಗಳ ಮೇಲೆ ಗಮನ ಹರಿಸಲಾಗುತ್ತಿದೆ. ಆಡುವಾಗ ಕಲಿಯುವುದು, ಆಟಿಕೆಗಳು ತಯಾರಿಸುವುದು ಇತ್ಯಾದಿ ಪಠ್ಯಕ್ರಮದ ಒಂದು ಭಾಗವಾಗಿದೆ ಎಂದು ಮೋದಿ ಹೇಳಿದರು.

ಜಾಗತಿಕ ಆಟಿಕೆ ಉದ್ಯಮದಲ್ಲಿ ಭಾರತದ ಪಾಲು 7 ಲಕ್ಷ ಕೋಟಿ ಆಗಿದ್ದು ತುಂಬಾ ಕಡಿಮೆಯಾಗಿದೆ. ದೇಶದಲ್ಲಿನ ಸ್ಟಾರ್ಟ್ ಆಫ್ ಗಳು ಸ್ಥಳೀಯರಿಗೆ ಧ್ವನಿ ನೀಡಬೇಕು ಎಂದು ಪ್ರಧಾನಿ ಮೋದಿ ಒತ್ತಾಯಿಸಿದ್ದಾರೆ.

ರಾಮನಗರದ ಚನ್ನಪಟ್ಟಣ, ಆಂಧ್ರಪ್ರದೇಶದ ಕೊಂಡಪ್ಲಿ, ತಮಿಳುನಾಡಿನ ತಂಜಾವೂರು, ಅಸ್ಸಾಂನ ದುಬ್ರಿ, ಉತ್ತರ ಪ್ರದೇಶದ ವಾರಾಣಸಿ, ಮೊದಲಾದ ಸ್ಥಳಗಳು ಆಟಿಕೆ ಉತ್ಪನ್ನಗಳ ಕೇಂದ್ರಗಳಾಗಿದ್ದು, ಆಟಿಕೆಗಳ ಕ್ಲಸ್ಟರ್ ಆಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.

SCROLL FOR NEXT