ದೇಶ

ಮಹಾ ಸಿಎಂ ಉದ್ಧವ್ ಠಾಕ್ರೆ ನಿವಾಸದಲ್ಲಿ ಶಿವಸೇನೆ ಸೇರಿದ ಊರ್ಮಿಳಾ ಮಾತೋಂಡ್ಕರ್

Lingaraj Badiger

ಮುಂಬೈ: ಕಾಂಗ್ರೆಸ್ ತೊರೆದಿದ್ದ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಅವರು ಮಂಗಳವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿವಾಸ ಮಾತೋಶ್ರಿಯಲ್ಲಿ ಶಿವಸೇನೆ ಸೇರ್ಪಡೆಯಾಗಿದ್ದಾರೆ.

ಉದ್ಧವ್ ಠಾಕ್ರೆ ಅವರ ಪತ್ನಿ ರಶ್ಮಿ ಠಾಕ್ರೆ ಅವರು ನಟಿಯ ಕೈಗೆ 'ಶಿವ ಬಂಧನ್' ಎಂಬ ಎಳೆಯನ್ನು ಕಟ್ಟುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು. ಈ ವೇಳೆ ಮುಂಬೈ ಮೇಯರ್ ಕಿಶೋರಿ ಪೆಡ್ನೆಕರ್ ಮತ್ತು ಇತರ ಹಿರಿಯ ಸೇನಾ ಮುಖಂಡರು ಉಪಸ್ಥಿತರಿದ್ದರು.

ಮಾತೋಂಡ್ಕರ್ ಅವರು ಮಂಗಳವಾರ ಅಧಿಕೃತವಾಗಿ ಶಿವಸೇನೆಗೆ ಸೇರುವ ಮೊದಲು, ನಟಿಯನ್ನು ರಾಜ್ಯಪಾಲರ ಕೋಟಾದಡಿ ವಿಧಾನ ಪರಿಷತ್(ಎಂಎಲ್‌ಸಿ) ಸದಸ್ಯರಾಗಿ ನೇಮಕ ಮಾಡುವಂತೆ ಶಿಫಾರಸು ಮಾಡಲಾಗಿತ್ತು.

ಊರ್ಮಿಳಾ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಮುಂಬೈ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್​​ನಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಅವರ ವಿರುದ್ಧ ಬಿಜೆಪಿ ಅಭ್ಯರ್ಥಿ ಗೋಪಾಲ್​ ಶೆಟ್ಟಿ ಗೆಲುವು ಸಾಧಿಸಿದ್ದರು. ಇದಾದ ಬಳಿಕ ಊರ್ಮಿಳಾ ಕಳೆದ ಸೆಪ್ಟೆಂಬರ್​ ನಲ್ಲಿ ಕಾಂಗ್ರೆಸ್​ ತೊರೆದಿದ್ದರು. ಇಂದು ಶಿವಸೇನೆ ಸೇರಿದ್ದಾರೆ.

SCROLL FOR NEXT