ದೇಶ

ಬಂಗಾಳದಲ್ಲಿ ಎನ್ ಆರ್ ಸಿ, ಎನ್ ಪಿಆರ್ ಜಾರಿಗೆ ಅವಕಾಶ ನೀಡುವುದಿಲ್ಲ: ಮಮತಾ ಬ್ಯಾನರ್ಜಿ

Lingaraj Badiger

ಕೋಲ್ಕತಾ: ರಾಜ್ಯದಲ್ಲಿ ಎನ್‌ಆರ್‌ಸಿ ಮತ್ತು ಎನ್‌ಪಿಆರ್ ಜಾರಿಗೆ ಕೇಂದ್ರಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ಹೇಳಿದ್ದಾರೆ.

"ನಾನು ಬಂಗಾಳವನ್ನು ಗುಜರಾತ್ ಆಗಿ ಪರಿವರ್ತಿಸಲು ಬಿಜೆಪಿಗೆ ಅವಕಾಶ ನೀಡುವುದಿಲ್ಲ. ಅವರು ಜನರನ್ನು ಬಂಗಾಳದಿಂದ ಹೊರಹಾಕಲು ಪ್ರಯತ್ನಿಸುತ್ತಿದ್ದಾರೆ. ನಾನು ರಾಜ್ಯದಲ್ಲಿ ಎನ್ಆರ್ ಸಿ ಮತ್ತು ಎನ್ ಪಿಆರ್ ಅನ್ನು ಅನುಮತಿಸುವುದಿಲ್ಲ. ಯಾರು ಇಲ್ಲಿ ವಾಸಿಸುತ್ತಾರೆ ಎಂಬುದನ್ನು ರಾಜ್ಯ ಸರ್ಕಾರ ನಿರ್ಧರಿಸುತ್ತದೆ" ಎಂದು ಅವರು ಹೇಳಿದರು. 

ಹಿಂದೂ ನಿರಾಶ್ರಿತರ ಸಾಂದ್ರತೆ ಹೆಚ್ಚಿರುವ ಲೋಕಸಭಾ ಕ್ಷೇತ್ರವಾದ ಬೊಂಗಾಂವ್, ಉತ್ತರ 24 ಪರಗಣದಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಮಮತಾ, ಕೇಸರಿ ಪಕ್ಷ "ಚುನಾವಣೆಯಲ್ಲಿ ಬರೀ ಸುಳ್ಳು ಭರವಸೆಗಳನ್ನು ನೀಡುವ ರಾಜಕೀಯ ಪಕ್ಷ" ಎಂದು ವಾಗ್ದಾಳಿ ನಡೆಸಿದರು.

"ನಾನು ಬೊರೊ ಮಾತೆಯರ ಚಿಕಿತ್ಸೆಯ ಎಲ್ಲಾ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದೇನೆ. ಮಾಟುವಾಸ್‌ಗಾಗಿ 10 ಕೋಟಿ ರೂ.ಗಳ ನಿಧಿಯೊಂದಿಗೆ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿದ್ದೇನೆ ಮತ್ತು ಪ್ರತ್ಯೇಕವಾಗಿ ವಿಶ್ವವಿದ್ಯಾಲಯವೊಂದು ನಿರ್ಮಾಣ ಮಾಡುತ್ತಿದ್ದೇವೆ'' ಎಂದರು ದೀದಿ ತಿಳಿಸಿದರು.

SCROLL FOR NEXT