ಸಾಂದರ್ಭಿಕ ಚಿತ್ರ 
ದೇಶ

ಮತ್ತೊಂದು ಗ್ಯಾಂಗ್ ರೇಪ್ ಪ್ರಕರಣ: ಜಾರ್ಖಂಡ್ ನಲ್ಲಿ 35 ವರ್ಷದ ಮಹಿಳೆ ಮೇಲೆ 17 ಮಂದಿ ಸಾಮೂಹಿಕ ಅತ್ಯಾಚಾರ 

ಜಾರ್ಖಂಡ್ ರಾಜ್ಯದ ಡುಮ್ಕಾ ಜಿಲ್ಲೆಯ ಮುಫಸ್ಸಿಲ್ ಪ್ರದೇಶದಲ್ಲಿ 35 ವರ್ಷದ ಮಹಿಳೆ ಮೇಲೆ 17 ಮಂದಿ ಪುರುಷರು ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣ ಕಳೆದ ಮಂಗಳವಾರ ರಾತ್ರಿ ನಡೆದಿದೆ.

ರಾಂಚಿ: ಜಾರ್ಖಂಡ್ ರಾಜ್ಯದ ಡುಮ್ಕಾ ಜಿಲ್ಲೆಯ ಮುಫಸ್ಸಿಲ್ ಪ್ರದೇಶದಲ್ಲಿ 35 ವರ್ಷದ ಮಹಿಳೆ ಮೇಲೆ 17 ಮಂದಿ ಪುರುಷರು ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣ ಕಳೆದ ಮಂಗಳವಾರ ರಾತ್ರಿ ನಡೆದಿದೆ.

ಮಾರುಕಟ್ಟೆಯಿಂದ ಕೆಲಸ ಮುಗಿಸಿ ಮಹಿಳೆ ತನ್ನ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮುಫಸ್ಸಿಲ್ ನ ಡಿಐಜಿ ಸುದರ್ಶನ್ ಮಂಡಲ್ ತಿಳಿಸಿದ್ದಾರೆ.

ಈ ಅತ್ಯಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಮಹಿಳಾ ಆಯೋಗ, ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ. ಈ ಬಗ್ಗೆ ಜಾರ್ಖಂಡ್ ಡಿಜಿಪಿಗೆ ಪತ್ರ ಬರೆದಿರುವ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ, ಈ ಪ್ರಕರಣ ಕುರಿತು 2 ತಿಂಗಳೊಳಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ. ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ತೆಗೆದುಕೊಳ್ಳುವ ಕ್ರಮವನ್ನು ವಿಸ್ತ್ರೃತವಾಗಿ ತಿಳಿಸಬೇಕೆಂದು ಕೂಡ ಹೇಳಲಾಗಿದೆ. 

ಜಾರ್ಖಂಡ್ ರಾಜ್ಯದ ತಪ್ಪು: ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಹಾರ ಉಪ ಮುಖ್ಯಮಂತ್ರಿ ರೇಣು ದೇವಿ, ಇದು ಜಾರ್ಖಂಡ್ ಸರ್ಕಾರದ ತಪ್ಪು ಕ್ರಮಗಳಿಂದಾಗಿ ಇಂತಹ ಘಟನೆಗಳು ನಡೆಯುತ್ತವೆ. ಕಾನೂನು, ಸುವ್ಯವಸ್ಥೆಯನ್ನು ಕಠಿಣವಾಗಿ ಜಾರಿಗೆ ತರದಿದ್ದರೆ ತಪ್ಪು ಮಾಡುವವರಿಗೆ ಸುಲಭವಾಗುತ್ತದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಿ ಸಂತ್ರಸ್ತ ಮಹಿಳೆಗೆ ನ್ಯಾಯ ನೀಡಬೇಕೆಂದು ಕೋರುತ್ತೇನೆ ಎಂದು ಒತ್ತಾಯಿಸಿದ್ದಾರೆ. 

ಉತ್ತರ ಪ್ರದೇಶದಲ್ಲಿ ಮತ್ತೊಂದು ಪ್ರಕರಣ: ಇನ್ನು ಉತ್ತರ ಪ್ರದೇಶದಲ್ಲಿ ಇದೇ ರೀತಿ ಮತ್ತೊಂದು ಲೈಂಗಿಕ ಹಲ್ಲೆ ಪ್ರಕರಣ ನಡೆದಿದೆ. ಇಬ್ಬರು ಅಪ್ರಾಪ್ತ ಬಾಲಕರು ಅಪ್ರಾಪ್ತ ಬಾಲಕಿ ಮೇಲೆ ಉತ್ತರ ಪ್ರದೇಶದ ಜಲೌನ್ ಜಿಲ್ಲೆಯ ಸಂಡಿ ಗ್ರಾಮದಲ್ಲಿ ಅತ್ಯಾಚಾರ ನಡೆಸಿದ ಪ್ರಕರಣ ನಡೆದಿದೆ. 

ಆರೋಪಿಗಳ ವಿರುದ್ಧ ಕೇಸು ದಾಖಲಾಗಿದ್ದು, ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ. ಗ್ರಾಮದಲ್ಲಿ ಪೊಲೀಸರ ತಂಡ ನಿಯೋಜಿಸಲಾಗಿದೆ ಎಂದು ಎಸ್ ಎಸ್ ಪಿ ಅವದೇಶ್ ಸಿಂಗ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!