ಪಿಪಿಇ ಕಿಟ್ ಕಿಟ್ ಧರಿಸಿ ಮದುವೆಯಾದ ನವಜೋಡಿ 
ದೇಶ

ಮದುವೆ ದಿನವೇ ವಧುವಿಗೆ ಕೊರೋನಾ ದೃಢ: ಕೋವಿಡ್ ಕೇರ್ ಸೆಂಟರ್ ನಲ್ಲಿ ಪಿಪಿಇ ಕಿಟ್ ಧರಿಸಿ ಮದುವೆಯಾದ ನವಜೋಡಿ

ಮದುವೆಯ ದಿನದಂದೇ ವಧುವಿಗೆ ಕೋವಿಡ್ ಸೋಂಕು ಪತ್ತೆಯಾದ ಹಿನ್ನೆಲೆ ದಂಪತಿಗಳು ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ಕಿಟ್ ಧರಿಸಿ ಮದುವೆಯಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಮದುವೆಯ ದಿನದಂದೇ ವಧುವಿಗೆ ಕೋವಿಡ್ ಸೋಂಕು ಪತ್ತೆಯಾದ ಹಿನ್ನೆಲೆ ದಂಪತಿಗಳು ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ಕಿಟ್ ಧರಿಸಿ ಮದುವೆಯಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಭಾನುವಾರ ಶಹಬಾದ್‌ನ ಬಾರಾದಲ್ಲಿರುವ ಕೆಲ್ವಾರಾ ಕೋವಿಡ್ ಕೇಂದ್ರದಲ್ಲಿ ನಡೆದ ವಿವಾಹದಲ್ಲಿ ನವ ಜೋಡಿ ಪಿಪಿಇ ಕಿಟ್ ಧರಿಸಿ ಮದುವೆಯಾಗಿದ್ದಾರೆ.

ಸರ್ಕಾರದ ಕೋವಿಡ್ ನಿಯಮಾವಳಿ ಅನುಸರಿಸಿ ಮದುವೆ ಸಮಾರಂಭವನ್ನು ನಡೆಸಲಾಯಿತು.

ವೀಡಿಯೊದಲ್ಲಿ, ವಿವಾಹದ ಎಲ್ಲಾ ಆಚರಣೆಗಳನ್ನು ಅನುಸರಿಸುವಾಗಲೂ ನವಜೋಡಿ ಹಾಗೂ ಅವರಿಗೆ ಮಾರ್ಗದರ್ಶನ ಮಾಡುತ್ತಿರುವ ಪುರೋಹಿತರೂ ಸಹ ಪಿಪಿಇ ಕಿಟ್ ಧರಿಸಿರುವುದನ್ನು ಕಾಣಬಹುದು.

ವರನು ಕೈಗವಸುಗಳೊಂದಿಗೆ ಪಿಪಿಇ ಕಿಟ್ ನ ಮೇಲೆ ಸಾಂಪ್ರದಾಯಿಕ ಪೇಟ ಧರಿಸಿರುವುದು ಕಂಡುಬಂದಿದೆ ಮತ್ತು ವಧು ವಿಧಿವಿಧಾನಗಳನ್ನು ಮಾಡುವಾಗ ಮುಖದ ಮಾಸ್ಕ್ ಹಾಗೂ ಕೈಗವಸುಗಳನ್ನು ಧರಿಸಿದ್ದಾಳೆ.

ನವದಂಪತಿಗಳ ಈ ವಿಶೇಷ ಮದುವೆ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕರ್ನಾಟಕ ನಾಯಕತ್ವ ಬದಲಾವಣೆಯ ನಡುವೆ CM ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತೆ ದೆಹಲಿಗೆ

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಶನಿವಾರ; ತದನಂತರ ನೂತನ ಸಿಎಂ ಪದಗ್ರಹಣ ಸಾಧ್ಯತೆ!

ಕ್ರೇಜಿಸ್ಟಾರ್ ರವಿಚಂದ್ರನ್ ವಿರುದ್ಧವೇ ಅತ್ಯಾಚಾರ ಯತ್ನ ಆರೋಪ, ಮಾನನಷ್ಟ ಮೊಕದ್ದಮೆ: ಕಣ್ಣೀರಿಟ್ಟು ಕ್ಷಮೆ ಕೇಳಿದ 'ಹಳ್ಳಿಮೇಷ್ಟ್ರು' ನಟಿ Bindiya!

Karnataka CM News LIVE Updates | ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ದೆಹಲಿಗೆ ಪ್ರಯಾಣ; ಸಿಎಲ್‌ಪಿ ಸಭೆ ಶನಿವಾರ ಸಾಧ್ಯತೆ!

ವೀರೇಂದ್ರ ಪಾಟೀಲರಿಗೆ ಅಪ್ಪ, ಸಿದ್ದರಾಮಯ್ಯರಿಗೆ ಮಗ ಅಪಮಾನ: ರಾಹುಲ್ ವಿರುದ್ಧ ಪ್ರಲ್ಹಾದ ಜೋಶಿ ಕಿಡಿ!

SCROLL FOR NEXT