ದೇಶ

ಪಶ್ಚಿಮ ಬಂಗಾಳದಲ್ಲಿ 'ಹಿಂದೂ ರಾಜ್ಯ' ಶೀಘ್ರ; ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ: ಪ್ರಜ್ಞಾ ಠಾಕೂರ್ 

Nagaraja AB

ಸೆಹೋರ್: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರ ಬೆಂಗಾವಲು ಪಡೆ ಮೇಲಿನ ದಾಳಿ ವಿರುದ್ಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದ್ದು, ಹಿಂದೂ ರಾಜ್ ಇರಲಿದೆ ಎಂದಿದ್ದಾರೆ.

ತನ್ನ ಅಧಿಕಾರವಧಿ ಅಂತ್ಯವಾಗಲಿದೆ ಎಂಬುದನ್ನು ಅರಿತು ಮಮತಾ ಬ್ಯಾನರ್ಜಿ ನಿರಾಶೆಗೊಂಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದು, ಹಿಂದೂ ರಾಜ್ ಇರಲಿದೆ ಎಂದು ಹೇಳಿದರು. ಜೆ. ಪಿ. ನಡ್ಡಾ ಅವರ ಬೆಂಗಾವಲು ಪಡೆ ಮೇಲೆ ದಾಳಿ ನಡೆದ ಕೆಲ ದಿನಗಳ ನಂತರ ಪ್ರಜ್ಞಾ ಠಾಕೂರ್ ಈ ರೀತಿಯ ಹೇಳಿಕೆ ನೀಡಿದ್ದಾರೆ.

ಈ ಮಧ್ಯೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಡಳಿತವು ಕಾನೂನು ಮತ್ತು ಸಂವಿಧಾನದಿಂದ ಹೆಚ್ಚು ದೂರವಾಗುತ್ತಿದೆ ಎಂದು ಪಶ್ಚಿಮ ಬಂಗಾಳ ಗವರ್ನರ್ ಜಗದೀಪ್ ಧಂಕರ್ ಶನಿವಾರ ಹೇಳುವ ಮೂಲಕ ಮಮತಾ ಬ್ಯಾನರ್ಜಿಗೆ ಎಚ್ಚರಿಕೆ ನೀಡಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮುಕ್ತ, ನ್ಯಾಯಸಮ್ಮತ  ಮತ್ತು ಹಿಂಸಾಚಾರ ರಹಿತ ಚುನಾವಣೆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದಾಗಿ ಧಂಕರ್ ಹೇಳಿದ್ದಾರೆ.

SCROLL FOR NEXT