ರಾಜ್ಯಪಾಲ ಬಂಡಾರು ದತ್ತಾತ್ರೇಯ ಮತ್ತು ಅವರ ಅಪಘಾತವಾದ ಕಾರು 
ದೇಶ

ಹೈದರಾಬಾದ್ ಬಳಿ ಕಾರು ಅಪಘಾತ: ಹಿಮಾಚಲ ಪ್ರದೇಶ ರಾಜ್ಯಪಾಲ ಅಪಾಯದಿಂದ ಪಾರು

ಹಿಮಾಚಲ ಪ್ರದೇಶದ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಪ್ರಯಾಣಿಸುತ್ತಿದ್ದ ಕಾರು ಸೋಮವಾರ ಹೈದರಾಬಾದ್ ಬಳಿ ಅಪಘಾತಕ್ಕೀಡಾಯಿತು. ಅದೃಷ್ಟವಶಾತ್ ಯಾರಿಗೆ ಯಾವ ಅಪಾಯವಾಗದೆ ಪಾರಾಗಿದ್ದಾರೆ.

ಹೈದರಾಬಾದ್: ಹಿಮಾಚಲ ಪ್ರದೇಶದ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಪ್ರಯಾಣಿಸುತ್ತಿದ್ದ ಕಾರು ಸೋಮವಾರ ಹೈದರಾಬಾದ್ ಬಳಿ ಅಪಘಾತಕ್ಕೀಡಾಯಿತು. ಅದೃಷ್ಟವಶಾತ್ ಯಾರಿಗೆ ಯಾವ ಅಪಾಯವಾಗದೆ ಪಾರಾಗಿದ್ದಾರೆ.

ಕಾರು ಚಾಲಕನು ವಾಹನದ ಮೇಲಿನ ನಿಯಂತ್ರಣವನ್ನು ಕಳೆದುಕೊಂಡ ಪರಿಣಾಮ ಕಾರು ರಸ್ತೆ ಬದಿಯಲ್ಲಿದ್ದ ಮರಕ್ಕೆ ಢಿಕ್ಕಿಯಾಗಿದೆ.

ಹೈದರಾಬಾದ್-ವಿಜಯವಾಡ ಹೆದ್ದಾರಿಯ ಚೌತುಪ್ಪಲ್ ಮಂಡಲದ ಕೈತಪುರಂ ಬಳಿ ಅಪಘಾತ ಸಂಭವಿಸಿದೆ. ಈ ವೇಳೆ ಹಿಮಾಚಲ ಪ್ರದೇಶ ರಾಜ್ಯಪಾಲರು ಹೈದರಾಬಾದ್ ನಿಂದ ನಲ್ಗೊಂಡಕ್ಕೆ ತೆರಳುತ್ತಿದ್ದರು.

ಅಪಘಾತದಿಂದ ಕಾರು ಜಖಂ ಆಗಿದ್ದು ಆ ಘಟನಾ ನಂತರ ರಾಜ್ಯಪಾಲರು ಮತ್ತೊಂದು ವಾಹನದಲ್ಲಿ ನಲ್ಗೊಂಡಕ್ಕೆ ತೆರಳಿದ್ದಾರೆ ಎಂದು ರಾಜ್ಯಪಾಲರ ಸಹಾಯಕ ಕೈಲಾಶ್ ನಾಗೇಶ್ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಒದಗಿಸಿದ ವಾಹನ ಸುಸ್ಥಿತಿಯಲ್ಲಿರಲಿಲ್ಲ ಎಂದು ನಾಗೇಶ್ ಹೇಳಿದರು. ಹೈದರಾಬಾದ್ ಮೂಲದವರಾದ ರಾಜ್ಯಪಾಲ ಬಂಡಾರು ದತ್ತಾತ್ರೇಯ ನಲ್ಗೊಂಡದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಅಲ್ಲಿಗೆ ತೆರಳುತ್ತಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್‌ನಲ್ಲಿ ಮತ್ತೆ ಸಂಪುಟ ಸರ್ಕಸ್: ದೆಹಲಿಯಲ್ಲಿ ವೇಣುಗೋಪಾಲ್ ಭೇಟಿಯಾದ ಸಿದ್ದರಾಮಯ್ಯ, ಖಾಲಿ ಇರೋ 2 ಸಚಿವ ಸ್ಥಾನ ಭರ್ತಿಗೆ ಪಟ್ಟು..!

ಡಿಕೆಶಿ ಕನಸಿನ ಅವಳಿ ಸುರಂಗ ಮಾರ್ಗಕ್ಕೆ ಹೊಸ ಕಂಟಕ: ಹೆಬ್ಬಾಳ ಕೆರೆಯ 3.45 ಎಕರೆ ಜೌಗು ಪ್ರದೇಶ ನಾಶಕ್ಕೆ ಯತ್ನ, ಎದುರಾಯ್ತು ಕಾನೂನು ಸಂಕಷ್ಟ..!

ಕರ್ನಾಟಕ ಮತದಾರರ ಪಟ್ಟಿ ಪರಿಷ್ಕರಣೆ: ಬುಡಕಟ್ಟು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರ ಹೆಸರೇ ಹೆಚ್ಚು ಡಿಲೀಟ್‌? SIR ವಿರುದ್ಧ ಸಿಡಿದೆದ್ದ ಒಕ್ಕೂಟ..!

Asian Games 2026: ಚಿನ್ನ-ಬೆಳ್ಳಿ ಗೆದ್ದು ಮಿಂಚಿದ ಕರುನಾಡ ಕುವರಿ ಪೂವಮ್ಮ; ಕರ್ನಾಟಕದ ಬಹುಮಾನ ನೀತಿಗೆ ಅಸಮಾಧಾನ, ರಾಜ್ಯ ಸರ್ಕಾರದ ಅಸಡ್ಡೆಗೆ ಬೇಸರ..!

ಶುಭಮನ್ ಗಿಲ್ 2ನೇ ಏಕದಿನ ದ್ವಿಶತಕ; ರೋಹಿತ್ ಶರ್ಮಾ ಬಳಿಕ ಐತಿಹಾಸಿಕ ದಾಖಲೆ!