ಸಾಂದರ್ಭಿಕ ಚಿತ್ರ 
ದೇಶ

ಸ್ನೇಹಿತನ ರಷ್ಯಾ ಪತ್ನಿ ಮೇಲೆ ಅತ್ಯಾಚಾರ: ಕಾನ್ಪುರದಲ್ಲಿ ಆರ್ಮಿ ಕರ್ನಲ್ ಬಂಧನ

ಹಿತನ ರಷ್ಯಾ ಮೂಲದ ಪತ್ನಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಿಯೋಜನೆಗೊಂಡಿದ್ದ ಸೇನಾ ಕರ್ನಲ್ ಒಬ್ಬರನ್ನು ಮಂಗಳವಾರ ಬಂಧಿಸಲಾಗಿದೆ.

ಕಾನ್ಪುರ: ಸ್ನೇಹಿತನ ರಷ್ಯಾ ಮೂಲದ ಪತ್ನಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಿಯೋಜನೆಗೊಂಡಿದ್ದ ಸೇನಾ ಕರ್ನಲ್ ಒಬ್ಬರನ್ನು ಮಂಗಳವಾರ ಬಂಧಿಸಲಾಗಿದೆ.

ಸಂತ್ರಸ್ತೆಯ ಪತಿ, ಕಳೆದ ಭಾನುವಾರ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಸೇನಾಧಿಕಾರಿ ವಿರುದ್ಧ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಇಂದು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಆರೋಪಿ ಕರ್ನಲ್ ನೀರಜ್ ಗೆಹ್ಲೋಟ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ(ಪೂರ್ವ) ರಾಜ್ ಕುಮಾರ್ ಅಗರ್ವಾಲ್ ಅವರು ತಿಳಿಸಿದ್ದಾರೆ.

ದೂರುದಾರರ ಪ್ರಕಾರ, ಅವರ ಪತ್ನಿ ರಷ್ಯಾ ಮೂಲದವರಾಗಿದ್ದು, 10 ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದಾರೆ.

ಲೆಫ್ಟಿನೆಂಟ್ ಹುದ್ದೆಯಿಂದ ಕರ್ನಲ್ ಹುದ್ದೆಗೆ ಬಡ್ತಿ ಪಡೆದ ಸಂದರ್ಭದಲ್ಲಿ ಕರ್ನಲ್ ತನ್ನ ಹೆಂಡತಿ ಮತ್ತು ತಮ್ಮನ್ನು ಪಾರ್ಟಿಗೆ ಆಹ್ವಾನಿಸಿದ್ದರು. ನಾವು ಇಬ್ಬರೂ ಪಾರ್ಟಿಗೆ ತೆರಳಿದ ವೇಳೆ ಕರ್ನಲ್ ಸ್ನೇಹಿತ ತನ್ನ ಪತ್ನಿಯ ಪ್ರಜ್ಞೆ ತಪ್ಪಿಸಲು ಮಾದಕ ದ್ರವ್ಯವನ್ನು ನೀಡಿ, ಆಕೆ ಪ್ರಜ್ಞೆ ತಪ್ಪಿದ ಬಳಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯ ಪತಿ ಎಫ್‌ಐಆರ್‌ನಲ್ಲಿ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದುಬಾರಿ ದುನಿಯಾ: ಪ್ರೀಮಿಯಂ ಪೆಟ್ರೋಲ್ ದರ, ಜೆಟ್ ಇಂಧನದ ಬೆಲೆ ಏರಿಕೆ; ದೇಶೀಯ ಏರ್ ಲೈನ್ಸ್ ಗಳ ರಕ್ಷಣೆಗೆ ಕೇಂದ್ರ ಸರ್ಕಾರ ಕ್ರಮ

'ಇರಾನ್ ಮೇಲೆ ಯುದ್ಧ ಇನ್ನು 2-3 ವಾರಗಳಲ್ಲಿ ಕೊನೆಯಾಗಬಹುದು': ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಎಲ್ಲಿದ್ದಾರೆ? ಮಹತ್ವದ ಮಾಹಿತಿ ಬಹಿರಂಗಪಡಿಸಿದ ರಷ್ಯಾದ ರಾಯಭಾರಿ!

ಗಾಯದ ಮೇಲೆ ಬರೆ: ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಹೆಚ್ಚಳ: ಹೊಸ ದರ ಇಂದಿನಿಂದಲೇ ಜಾರಿ

ರಷ್ಯಾದ ಸೈನಿಕ ಸಾರಿಗೆ ವಿಮಾನ ಕ್ರೈಮಿಯಾದಲ್ಲಿ ಪತನ: 29 ಮಂದಿ ಸಾವು

SCROLL FOR NEXT