ದೇಶ

ಕೋಮು ವಿಭಜನೆ ಮೂಲಕ ರೈತರ ಹೋರಾಟ ದಿಕ್ಕು ತಪ್ಪಿಸಲು ಯತ್ನ: ಸುಖ್ಬೀರ್ ಸಿಂಗ್ ಬಾದಲ್ ಗಂಭೀರ ಆರೋಪ

Srinivas Rao BV

ಚಂಡೀಗಢ: ಎನ್ ಡಿಎ ಸರ್ಕಾರದ ಭಾಗವಾಗಿದ್ದ ಶಿರೋಮಣಿ ಅಕಾಲಿದಳ ರೈತರ ಹೋರಾಟಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪ ಮಾಡಿದೆ. 

ಎನ್ ಡಿಎ ಹಾಗೂ ಬಿಜೆಪಿ ಸರ್ಕಾರವನ್ನು ಉಲ್ಲೇಖಿಸದೆಯೇ ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ತೀವ್ರ ವಾಗ್ದಾಳಿ ನಡೆಸಿದ್ದು, ಕೇಂದ್ರದ 3 ಕೃಷಿ ಕಾಯ್ದೆಯಗಳನ್ನು ವಿರೋಧಿಸಿ ನಡೆಯುತ್ತಿರುವ ರೈತರ ಹೋರಾಟದ ದಿಕ್ಕು ತಪ್ಪಿಸುವುದಕ್ಕಾಗಿ ಹಿಂದೂ ಹಾಗೂ ಸಿಖ್ಖ್ ಸಮುದಾಯಗಳ ನಡುವೆ ಕೋಮು ವಿಭಜನೆಗೆ ಯತ್ನ ನಡೆಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. 

"ರೈತರ ಈ ಹೋರಾಟವನ್ನು ಹಿಂದೂ-ಸಿಖ್ಖ್ ನಡುವಿನ ಸಂಘರ್ಷವನ್ನಾಗಿ ಮಾರ್ಪಾಡು ಮಾಡಲಾಗುತ್ತಿದೆ. ಇದರ ಹಿಂದಿರುವ ಶಕ್ತಿಗಳು ಮೊದಲು ಇದನ್ನು ದೆಹಲಿಯಲ್ಲಿ ಪ್ರಾರಂಭ ಮಾಡಿದ್ದವು. ಈಗ ಅದನ್ನು ಪಂಜಾಬ್ ಗೂ ವಿಸ್ತರಿಸುವ ಯತ್ನ ಮಾಡಲಾಗುತ್ತಿದೆ. ಅಕಾಲಿದಳ ಭ್ರಾತೃತ್ವ ಹಾಗೂ ಕೋಮುಶಾಂತಿಯನ್ನು ಕಾಪಾಡಲು ಬದ್ಧವಾಗಿದೆ" ಎಂದು ಸುಖ್ಬೀರ್ ಸಿಂಗ್ ಬಾದಲ್ ಅಮೃತ್ ಸರದಲ್ಲಿನ ಪ್ರತಿಭಟನೆಯಲ್ಲಿ ಭಾಗಿಯಾಗಿ ಹೇಳಿದ್ದಾರೆ.

ಎನ್ ಡಿಎ ಸರ್ಕಾರ ಒಕ್ಕೂಟ ವ್ಯವಸ್ಥೆಯನ್ನು ಕಸಿಯುವುದಷ್ಟೇ ಅಲ್ಲದೇ ಪ್ರತಿಭಟಿಸುವ ಹಕ್ಕನ್ನೂ ಕಸಿದುಕೊಂಡಿದೆ. ಎನ್ ಡಿಎ ಜೊತೆಗಿದ್ದುಕೊಂಡು ಅದು ಮಾಡುವ ಕೆಲಸಗಳನ್ನು ಒಪ್ಪುವವರು ಮಾತ್ರ ದೇಶಭಕ್ತರು ಅದರ ವಿರುದ್ಧ ಮಾತನಾಡುವವರು ದೇಶದ್ರೋಹಿಗಳು ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಾದಲ್ ಹೇಳಿದ್ದಾರೆ.

SCROLL FOR NEXT