ದೇಶ

ನಕಲಿ ಟಿಆರ್‌ಪಿ ಹಗರಣ: ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಖನ್ಚಂದಾನಿಗೆ ಜಾಮೀನು

Raghavendra Adiga

ಮುಂಬೈ: ನಕಲಿ ಟಿಆರ್‌ಪಿ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಖನ್ಚಂದಾನಿಗೆ ಮುಂಬೈನ ಕೋರ್ಟ್ ಜಾಮೀನು ನೀಡಿದೆ, 50,000 ಬಾಂಡ್ ಮೇಲೆ ಮುಂಬೈನ ಎಸ್ಪ್ಲನೇಡ್  ನಲ್ಲಿರುವ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಖಂಚಂದಾನಿಗೆ ಜಾಮೀನು ಮಂಜೂರು ಮಾಡಿದೆ.

ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಕಸ್ಟಡಿಗೆ ಕಳುಹಿಸಿದ ಒಂದು ದಿನದ ನಂತರ ಜಾಮೀನು ಮಂಜೂರಾಗಿದೆ. ಚಾನಲ್ ನ ಡಿಸ್ಟ್ರಿಬ್ಯೂಷನ್ ಮುಖ್ಯಸ್ಥ ಘನಶ್ಯಾಮ್ ಸಿಂಗ್ ಅವರನ್ನು ವಿಚಾರಣೆ ನಡೆಸಿದಾಗ ಹಗರಣದಲ್ಲಿ ಖನ್ಚಂದಾನಿ ಅವರ ಪಾತ್ರ ಬೆಳಕಿಗೆ ಬಂದಿದ್ದಾಗಿ ಹೆಸರು ಹೇಳಲು ಇಚ್ಚಿಸದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಖನ್ಚಂದಾನಿ ವಾಟ್ಸಾಪ್ ಗುಂಪಿನ ಭಾಗವಾಗಿದ್ದರು ಎಂದು ಆರೋಪಿಸಲಾಗಿದೆ, ಚಾನಲ್ ತನ್ನ ತಾರ್ಕಿಕ ಚಾನೆಲ್ ಸಂಖ್ಯೆ ಅಥವಾ ಎಲ್‌ಸಿಎನ್ ಅನ್ನು ಕುಶಲತೆಯಿಂದ ಮೇಲಕ್ಕೇರಲು ಬಳಸಿಕೊಂಡಿದ್ದಾರೆ

ಎಲ್‌ಸಿಎನ್ ಎನ್ನುವುದು ಟೆಲಿವಿಷನ್ ಚಾನೆಲ್‌ಗೆ ನಿಯೋಜಿಸಲಾದ ಗುರುತಿನ ಸಂಖ್ಯೆಯಾಗಿದ್ದು,  ರಿಪಬ್ಲಿಕ್ ಟಿವಿ ಡ್ಯುಯಲ್. ಎಲ್‌ಸಿಎನ್ ಅನ್ನು ಬಳಸಿದೆ ಎಂದು ಮುಂಬೈ ಪೊಲೀಸರು ಆರೋಪಿಸಿದ್ದಾರೆ, ಇದು "ನ್ಯೂಸ್ ಚಾನೆಲ್ ಗಳು " ವಿಭಾಗದ ಜೊತೆಗೆ "ಮಕ್ಕಳ ಚಾನೆಲ್" ವಿಭಾಗದಲ್ಲಿ ಸಹ ಟೆಲಿಕಾಸ್ಟ್ ಆಗುವಂತೆ ಅವಕಾಶ ಮಾಡಿಕೊಂಡಿದೆ ಎನ್ನಲಾಗಿದ್ದು ಈ ಎಲ್‌ಸಿಎನ್ ವಂಚನೆ ಬಗ್ಗೆ ಖನ್ಚಂದಾನಿಗೆ ತಿಳಿದಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ರಿಪಬ್ಲಿಕ್ ಟಿವಿಯು ಬಹು-ವ್ಯವಸ್ಥೆ ಮತ್ತು ಕೇಬಲ್ ಆಪರೇಟರ್‌ಗಳಿಗೆ ಅದರ ವೀಕ್ಷಕರ ರೇಟಿಂಗ್ ಹೆಚ್ಚಿಸಲು ಮಾಡಿದ ಪಾವತಿಗಳನ್ನು ಅರ್ಥಮಾಡಿಕೊಳ್ಳಲು ಖನ್ಚಂದಾನಿಯನ್ನು ವಿಚಾರಣೆ ನಡೆಸಲು ಅವರು ಬಯಸಿದ್ದರು.

ಟಿಆರ್‌ಪಿ ಹಗರಣ

ಅಕ್ಟೋಬರ್‌ನಲ್ಲಿ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ ಹನ್ಸಾ ರಿಸರ್ಚ್ ಗ್ರೂಪ್ ಮೂಲಕ ದೂರು ನೀಡಿದಾಗ ನಕಲಿ ಟಿಆರ್‌ಪಿ ದಂಧೆ ಬಯಲಾಗಿತ್ತು.ಪ್ಯಾನಲ್ ಹೌಸ್ ಗಳು ಅಥವಾ ಪೀಪಲ್ಸ್ ಮೀಟರ್ಗಳೊಂದಿಗೆ ಎಂಗೇಜ್ ಮೆಂಟ್ಬಗ್ಗೆ ಬಾರ್ಕ್‌ನ ಮಾರಾಟಗಾರರಲ್ಲಿ ಒಬ್ಬರು. ಕೆಲವು ಚಾನೆಲ್‌ಗಳು ತಮ್ಮ ಟಿಆರ್‌ಪಿಗಳನ್ನು ಹೆಚ್ಚಿಸಿಕೊಳ್ಲಲು ಕೆಲ ಹೌಸ್ ಗಳಿಗೆ ಗೆ ಲಂಚ ನೀಡುವ ಮೂಲಕ ಹಗರಣ ನಡೆಸಿದ್ದಾರೆಎಂದು ಆರೋಪಿಸಲಾಯಿತು.

ಈ ವಿಷಯದಲ್ಲಿ ಹಲವಾರು ರಿಪಬ್ಲಿಕ್ ಟಿವಿ ಅಧಿಕಾರಿಗಳನ್ನು ಪ್ರಶ್ನಿಸಲಾಗಿದೆ. ರಿಪಬ್ಲಿಕ್ ಟಿವಿಯ ಹೊರತಾಗಿ, ಬಾಕ್ಸ್ ಸಿನೆಮಾ ಮತ್ತು ಮರಾಠಿ ಚಾನೆಲ್ ಫಕ್ತ್ ಮರಾಠಿ ಪ್ರಾಥಮಿಕ ತನಿಖೆಯ ಸಮಯದಲ್ಲಿ ಹೆಸರಿಸಲ್ಪಟ್ಟವು.

SCROLL FOR NEXT