ದೇಶ

ವಸತಿ ಪ್ರದೇಶಗಳಲ್ಲಿ ಧರಣಿ ತಪ್ಪು ಸಂದೇಶ ನೀಡುತ್ತದೆ: ಕೇಜ್ರಿವಾಲ್ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಎಚ್ಚರಿಕೆ

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಹೊರಗೆ ನಡೆಯುತ್ತಿರುವ ಪ್ರತಿಭಟನೆಯ ಬಗ್ಗೆ ದೆಹಲಿ ಹೈಕೋರ್ಟ್ ಗುರುವಾರ ಕಳವಳ ವ್ಯಕ್ತಪಡಿಸಿದೆ, ವಸತಿ ಪ್ರದೇಶದಲ್ಲಿ ಇಂತಹ ಧರಣಿ, ಪ್ರತಿಭಟನೆಗಳಿಗೆ ಅನುಮತಿ ನೀಡುವುದು ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಹೊರಗೆ ನಡೆಯುತ್ತಿರುವ ಪ್ರತಿಭಟನೆಯ ಬಗ್ಗೆ ದೆಹಲಿ ಹೈಕೋರ್ಟ್ ಗುರುವಾರ ಕಳವಳ ವ್ಯಕ್ತಪಡಿಸಿದೆ, ವಸತಿ ಪ್ರದೇಶದಲ್ಲಿ ಇಂತಹ ಧರಣಿ, ಪ್ರತಿಭಟನೆಗಳಿಗೆ ಅನುಮತಿ ನೀಡುವುದು ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿ ಸಂಜೀವ್ ಸಚ್‌ದೇವ "ಇಂದು ಪ್ರತಿಭಟನೆಯು ಶಾಂತಿಯುತವಾಗಿರಬಹುದು, ಆದರೆ ಒಂದು ವಸತಿ ಸ್ಥಳದಲ್ಲಿ ಇಂತಹಾ ಪ್ರದರ್ಶನ ಮಾಡುವುದು ಸರಿಯಲ್ಲ. ರಾಮ್‌ಲೀಲಾ ಮೈದಾನ ಅಥವಾ ಜಂತರ್ ಮಂತರ್ ನಂತಹ ಪ್ರದೇಶಗಳಲ್ಲಿ ನಡೆಸುವಂತೆ ಇಲ್ಲಿ ಧರಣಿ, ಪ್ರತಿಭಟನೆ ನಡೆಸುವುದು ತಪ್ಪು ಸಂದೇಶ ರವಾನಿಸುತ್ತದೆ" ಎಂದರು.

"ನೀವು ಬಂದು ಪ್ರತಿಭಟಿಸಿ ನಂತರ ಹೊರಟು ಹೋದರೆ ಯಾವುದೇ ತೊಂದರೆ ಇಲ್ಲ. ಆದರೆ ಇದು 11 ದಿನಗಳ ಕಾಲ ನಿರಂತರವಾಗಿ ನಡೆಯುತ್ತಿದೆ. ಒಮ್ಮೆ ನೀವು ಬಂದು ನಿರ್ದೇಶಿಸಿದರೆ ಅವರೆಲ್ಲಾ ನಿಯೋಜಿತ ಸ್ಥಳಗಳಿಗೆ ತೆರಳಬಹುದಾಗಿದೆ. ಅದು ಹೊರತಾಗಿ ಎಲ್ಲಾ ಸಮಯದಲ್ಲೂ ಇದನ್ನು ಅನುಮತಿಸಿದರೆ, ರಾಮ್‌ಲೀಲಾ ಮೈದಾನ ಮತ್ತು ಜಂತರ್ ಮಂತರ್‌ನಂತಹ ಕೆಲವು ಪ್ರದೇಶಗಳ ಸ್ಥಿತಿ ಏನಿದೆ ಎನ್ನುವುದು ನಿಮಗೆ ಅರಿವಿದೆ. ಅಲ್ಲಿ ಹೋರಾಟ, ಪ್ರತಿಭಟನೆಗಳನ್ನು ಅನುಮತಿಸಲಾಗಿದೆ.ವಸತಿ ಪ್ರದೇಶದಲ್ಲಿ ನಮಗೆ ಅಂತಹ ಪರಿಸ್ಥಿತಿ ತಂಡಿಡಲು ಅಸಾಧ್ಯ."

ರಸ್ತೆಯೊಂದನ್ನು ನಿರ್ಬಂಧಿಸುವ ಮೂಲಕ ಅಲ್ಲಿನ ನಿವಾಸಿಗಳಿಗೆ ಅನಾನುಕೂಲತೆಯನ್ನುಂಟುಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಅಲ್ಲಿನ ಸಿಎಂ ನಿವಾಸದ ಹೊರಗೆ 11 ದಿನಗಳ ಕಾಲ ನಡೆದ ಪ್ರತಿಭಟನೆಯ ವಿರುದ್ಧ ಸಿವಿಲ್ ಲೈನ್ಸ್ ನಿವಾಸಿಗಳ ಸಂಘವು ಸಲ್ಲಿಸಿದ್ದ ಮನವಿಯನ್ನು ಆಲಿಸಿದ ನ್ಯಾಯಾಲಯವು ಆತಂಕ ಹೊರಹಾಕಿದೆ. 

ವಸತಿ ಪ್ರದೇಶದಲ್ಲಿ ಪ್ರತಿಭಟನೆಗೆ ಅನುಮತಿ ನೀಡಲಾಗಿದೆ ಮತ್ತು ವಸತಿ ಪ್ರದೇಶಗಳಲ್ಲಿ ಧರಣಿಗಳನ್ನು ನಿರ್ಬಂಧಿಸಲು ಮತ್ತು ರಸ್ತೆಗಳನ್ನು ತೆರವು ಮಾಡಲುಹೈಕೋರ್ಟ್‌ನ 2017 ರ ನಿರ್ದೇಶನವನ್ನು ಉಲ್ಲಂಘಿಸಿ ಅಲ್ಲಿಗೆ ಹೋಗುವ ರಸ್ತೆಗಳನ್ನು ಬ್ಯಾರಿಕೇಡ್ ನಿಂದ ಮುಚ್ಚಲಾಗಿದೆ ಎಂದು ಸಂಘ ವಾದಿಸಿದೆ.

ಮೂರು ಮುನ್ಸಿಪಲ್ ಕಾರ್ಪೋರೇಷನ್‌ಗಳ ಮೇಯರ್‌ಗಳು ಹಣವನ್ನು ಬಿಡುಗಡೆ ಮಾಡಲು ಮತ್ತು ಎಂಸಿಡಿಗಳಿಗೆ ಪಾವತಿಸಬೇಕಾದ ಬಾಕಿ ಬಾಕಿ ಹಣವನ್ನು ತೆರವುಗೊಳಿಸುವಂತೆ ಕೇಜ್ರಿವಾಲ್ ಅವರ ನಿವಾಸದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ನ್ಯಾಯಾಲಯವು ವಿಚಾರಣೆಯ ಸಮಯದಲ್ಲಿ, ಈ ಪ್ರದೇಶದಲ್ಲಿ ಡೇರೆಗಳು ಬಂದಿರುವುದನ್ನು ಗಮನಿಸಿದ್ದಲ್ಲದೆ ಮೇಯರ್‌ಗಳು ತಮ್ಮ ಕಚೇರಿಗಳನ್ನು ಅಲ್ಲಿಂದ ನಡೆಸಲು ಹೊರಟಿದ್ದಾರೆ ಎನ್ನುವ ಸುದ್ದಿಯೂ ಸಹ ಕೇಳಿಬಂದಿತ್ತು. ಈ ಬಗ್ಗೆ ಪ್ರತಿಲ್ರಯಿಸಿರುವ ಕೋರ್ಟ್ ಅಲ್ಲಿಂದ ಕಚೇರಿಗಳನ್ನು ಹೇಗೆ ನಡೆಸಬಹುದು ಮತ್ತು ಪ್ರಕೃತಿಯ ಕರೆಗೆ ಉತ್ತರಿಸುವಂತಹ ಪ್ರತಿಭಟನಾಕಾರರು ತಮ್ಮ ದೈನಂದಿನ ದಿನಚರಿಗಳನ್ನು ಅನುಸರಿಸಲು ಯಾವ ವ್ಯವಸ್ಥೆಗಳಿವೆ ಎಂದು ದೆಹಲಿ ಪೊಲೀಸರನ್ನು ಕೇಳಿದೆ.

ಪ್ರತಿಭಟನೆ ಅಥವಾ ಧರಣಿಗಳನ್ನು ನಡೆಸುವುದು ಮೂಲಭೂತ ಹಕ್ಕು ಎಂದು ಒಪ್ಪಿದರೂ ಜನರು "ವಸತಿ ಪ್ರದೇಶದಲ್ಲಿ ಕುಳಿತುಕೊಳ್ಳುವುದು" ಸಾಧ್ಯವಿಲ್ಲ. "ಅವರ (ಪ್ರತಿಭಟನಾಕಾರರು) ಪ್ರತಿಭಟನೆಯ ಹಕ್ಕನ್ನು ಅಡ್ಡಿಪಡಿಸುವ ಮಟ್ಟಿಗೆ ಹೋಗಬಾರದು" ಎಂದು ನ್ಯಾಯಾಲಯವು ಸರ್ಕಾರಕ್ಕೆ ತಿಳಿಸಿತು. ಅಲ್ಲದೆ ಪ್ರತಿಭಟನಾಕಾರರಿಗೆ ಕೆಲವು ವ್ಯವಸ್ಥೆ ಮಾಡಬಹುದೇ ಎಂದು ಅದು ಸರ್ಕಾರವನ್ನು ಕೇಳಿದೆ.

ಏತನ್ಮಧ್ಯೆ, ಸಿಎಂ ನಿವಾಸದ ಪಕ್ಕದಲ್ಲಿ ವಾಸಿಸುವ ಪ್ರದೇಶದ ನಿವಾಸಿ, ಪ್ರತಿಭಟನಾಕಾರರಿಂದ ಯಾವುದೇ ಹಸ್ತಕ್ಷೇಪ ಅಥವಾ ತೊಂದರೆ ಇಲ್ಲ ಮತ್ತು ಕೇಜ್ರಿವಾಲ್ ಅವರ ಮನೆಯ ಮುಂಭಾಗದ ರಸ್ತೆ ಮುಕ್ತವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಪ್ರಕೃತಿಯ ಕರೆಗೆ ಉತ್ತರಿಸಲು ಪ್ರತಿಭಟನಾಕಾರರು ಹತ್ತಿರದ ಅಂಬೇಡ್ಕರ್ ಸ್ಮಾರಕದಲ್ಲಿ ಶೌಚಾಲಯಗಳನ್ನು ಬಳಸುತ್ತಿದ್ದಾರೆ ಎಂದು ಅವರು ಹೇಳಿದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕ್ಸಿ ಜಿನ್‌ಪಿಂಗ್ ಜತೆ ಮಾತುಕತೆ: ಗಡಿಯಾಚೆಗಿನ ಭಯೋತ್ಪಾದನೆ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪ

ಜನರನ್ನು ಮೂರ್ಖರನ್ನಾಗಿಸುವವನೇ ಶ್ರೇಷ್ಠ ನಾಯಕ: ಕೇಂದ್ರ ಸಚಿವ ನಿತಿನ್ ಗಡ್ಕರಿ

ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುವ 'ಎಜುಕೇಟ್ ಗರ್ಲ್ಸ್' NGOಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ

Rain Alert: ರಾಜ್ಯಾದ್ಯಂತ ಮುಂದಿನ 5 ದಿನ ಭಾರಿ ಮಳೆ; ಬೆಂಗಳೂರು, ಕರಾವಳಿ ಕರ್ನಾಟಕಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ!

ಬೆಂಗಳೂರು: ಪಿಜಿಯಲ್ಲಿ ಮಲಗಿದ್ದ ಯುವತಿಗೆ ಲೈಂಗಿಕ ಕಿರುಕುಳ, ನಗದು ದೋಚಿ ಪರಾರಿ!

SCROLL FOR NEXT