ರಾಹುಲ್ ಗಾಂಧಿ 
ದೇಶ

ಸಂಸದೀಯ ಸಮಿತಿ ಸಭೆಯಲ್ಲಿ ಮಾತನಾಡಲು ಅವಕಾಶ ನಿರಾಕರಣೆ: ಸ್ಪೀಕರ್ ಗೆ ಪತ್ರ ಬರೆದ ರಾಹುಲ್ ಗಾಂಧಿ

 ರಕ್ಷಣಾ ಸಂಸದೀಯ ಸಮಿತಿಯ ಸಭೆಯಲ್ಲಿ ಮುಕ್ತವಾಗಿ ಮಾತನಾಡಲು ಅವಕಾಶ ನೀಡಿಲ್ಲ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗುರುವಾರ ಪತ್ರ ಬರೆದಿದ್ದು, ತಮ್ಮ ಮಧ್ಯಪ್ರವೇಶವನ್ನು ಬಯಸಿದ್ದಾರೆ ಎಂದು ಮೂಲಗಳು ಹೇಳಿವೆ.

ನವದೆಹಲಿ: ರಕ್ಷಣಾ ಸಂಸದೀಯ ಸಮಿತಿಯ ಸಭೆಯಲ್ಲಿ ಮುಕ್ತವಾಗಿ ಮಾತನಾಡಲು ಅವಕಾಶ ನೀಡಿಲ್ಲ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗುರುವಾರ ಪತ್ರ ಬರೆದಿದ್ದು, ತಮ್ಮ ಮಧ್ಯಪ್ರವೇಶವನ್ನು ಬಯಸಿದ್ದಾರೆ ಎಂದು ಮೂಲಗಳು ಹೇಳಿವೆ.

ಸಂಸದೀಯ ಸಮಿತಿ ಸಭೆಗಳಲ್ಲಿ ಚುನಾಯಿತ ಸಂಸದರು ಮುಕ್ತವಾಗಿ ಮಾತನಾಡುವ ಹಕ್ಕನ್ನು ಕಾಪಾಡುವಂತೆ ನೋಡಿಕೊಳ್ಳಬೇಕೆಂದು ಗಾಂಧಿ ತಮ್ಮ ಪತ್ರದಲ್ಲಿ ಸ್ಪೀಕರ್‌ಗೆ ಒತ್ತಾಯಿಸಿದ್ದಾರೆ. 

ಸಂಸತ್ತಿನ ಉಸ್ತುವಾರಿ ಆಗಿರುವ ಸ್ಪೀಕರ್, ರಕ್ಷಣಾ ಸಮಿತಿಯಲ್ಲಿನ ಚರ್ಚೆಗಳು ಮತ್ತು ಪ್ರಸ್ತುತಿಗಳು ಸಂಸತ್ತಿನ ಪಾತ್ರ ಮತ್ತು ಉದ್ದೇಶಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. 

ದೇಶದ ಭದ್ರತೆಗೆ ಸಂಬಂಧಪಟ್ಟ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸದೆ ಸೇನಾಪಡೆಯ ಸಿಬ್ಬಂದಿಯ ಸಮವಸ್ತ್ರದ ಬಗ್ಗೆ ಚರ್ಚಿಸಿ ಸಮಯ ಹಾಳು ಮಾಡಲಾಗುತ್ತಿದ್ದೀರಿ ಎಂದು ರಾಹುಲ್ ಗಾಂಧಿ ಮತ್ತು ಇತರ ನಾಯಕರು ರಕ್ಷಣಾ ಸಮಿತಿ ಸಭೆಯಿಂದ ಬುಧವಾರ ಹೊರ ನಡೆದಿದ್ದರು.

ಲಡಾಖ್ ಗಡಿ ಪ್ರದೇಶದಲ್ಲಿ ಸೈನಿಕರ ಸಜ್ಜು ಮತ್ತು ಚೀನಾದಿಂದ ಆಕ್ರಮಣ ವಿಚಾರ ಕುರಿತು ರಾಹುಲ್ ಗಾಂಧಿ ಬಯಸಿದ್ದಾಗ ಸಂಸದೀಯ ಸಮಿತಿ ಸಭೆ ಅಧ್ಯಕ್ಷ ಜುಯಲ್ ಓರಮ್ ಮಾತನಾಡಲು ಅವಕಾಶ ನಿರಾಕರಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಸ್ಥಾಯಿ ಸಮಿತಿಯ ಉದ್ದೇಶವನ್ನು ಎತ್ತಿ ತೋರಿಸುವುದು ಸದಸ್ಯರ ಹಕ್ಕು. ನಾನು ಹೇಳುವುದನ್ನು ಸಮಿತಿ ಒಪ್ಪುವುದಿಲ್ಲ, ಆದರೆ, ಸಮಿತಿ ಅಧ್ಯಕ್ಷರು ಸದಸ್ಯರಿಗೆ ಮಾತನಾಡಲು ಅವಕಾಶ ನೀಡುವುದಿಲ್ಲ ಎಂಬ ಅಂಶವು ಸರ್ಕಾರ ಮಿಲಿಟರಿ ವ್ಯವಹಾರಗಳನ್ನು ಹೇಗೆ ನಿರ್ವಹಿಸುತ್ತಿದೆ ಎಂಬುದರ ಬಗ್ಗೆ ವಿಷಾಧವನ್ನುಂಟು ಮಾಡಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದಕ್ಷಿಣ ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ: ವಲಸೆ ಕಾರ್ಮಿಕ ಸಾವು, ಮತ್ತೊಬ್ಬರಿಗೆ ಗಾಯ

ಇರಾನ್ ವಿದೇಶಾಂಗ ಸಚಿವ- ಎಸ್ ಜೈಶಂಕರ್ ಮಾತುಕತೆ: ಪ್ರಾದೇಶಿಕ ಸಮರದ ಬಗ್ಗೆ ಆತಂಕ, ಹಡಗುಗಳ ಮೇಲೆ ದಾಳಿ ನಡೆಸದಂತೆ ಒತ್ತಾಯ

ಆಗಸ್ಟ್ 1 ರಂದು ಪ್ರಧಾನ ಮಂತ್ರಿ ಮೋದಿ ಆಂಧ್ರಪ್ರದೇಶ ಮೈಸೂರಿಗೆ ಭೇಟಿ; ಅಭಿವೃದ್ಧಿ ಯೋಜನೆಗಳ ಉದ್ಘಾಟನೆ

ಕಾವೇರಿ ಕಿತ್ತಾಟದ ನಡುವೆ ರಾಜ್ಯಕ್ಕೆ ಹವಾಮಾನ ಇಲಾಖೆ ಸಿಹಿ ಸುದ್ದಿ; ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಭಾರೀ ಮಳೆ ಸಾಧ್ಯತೆ!

'ಕರ್ನಾಟಕಕ್ಕೆ ನೀರು ನೀಡಲು ನಮ್ಮ ವಿರೋಧವಿಲ್ಲ.. ಆದ್ರೆ ಮೇಕೆದಾಟು ಬೇಡ": ಕಾವೇರಿ ವಿವಾದ ಕುರಿತು AIADMK ಸಂಸದ ಎಂ. ತಂಬಿದುರೈ