ದೇಶ

ವಿವೇಕ್ ದೋವಲ್ ಕ್ಷಮೆ ಕೋರಿದ ಜೈರಾಮ್ ರಮೇಶ್

Srinivas Rao BV

ನವದೆಹಲಿ: ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ವಿರುದ್ಧದ ಮಾನನಷ್ಟ ಮೊಕದ್ದಮೆಯನ್ನು ದೆಹಲಿ ಕೋರ್ಟ್ ಇತ್ಯರ್ಥಗೊಳಿಸಿದೆ. 

ದಿ ಕ್ಯಾರವಾನ್ ನಲ್ಲಿ ಪ್ರಕಟಗೊಂಡಿದ್ದ ಆರ್ಟಿಕಲ್ ದಿ ಡಿ ಕಂಪನೀಸ್ ( ವಿವೇಕ್ ದೋವಲ್& ಜೈರಾಮ್ ರಮೇಶ್ ಹಾಗೂ ಇತರರ ಬಗ್ಗೆ)  ಕುರಿತಾಗಿ ನಡೆಸಿದ ಸುದ್ದಿಗೋಷ್ಠಿಗೆ ಸಂಬಂಧಿಸಿದಂತೆ ವಿವೇಕ್ ದೋವಲ್ ಜೈರಾಮ್ ರಮೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. 

ನ್ಯಾಯಾಧೀಶರಾದ ಸಚಿನ್ ಗುಪ್ತ, ಹೆಚ್ಚುವರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎದುರು ಹಾಜರಾದ ಜೈ ರಾಮ್ ರಮೇಶ್, ಆ ಕ್ಷಣದಲ್ಲಿ ವಿವೇಕ್ ದೋವಲ್ ಅವರ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದೆ, ಆದರೆ ಅವುಗಳನ್ನು ಪರಿಶೀಲಿಸಬೇಕಿತ್ತು, ಕ್ಷಮೆ ಕೇಳುತ್ತಿದ್ದೇನೆ" ಎಂದು ಹೇಳಿದ್ದಾರೆ. ವಿವೇಕ್ ದೋವಲ್ ಕ್ಷಮೆಯನ್ನು ಅಂಗೀಕರಿಸಿದ್ದು, ಮಾನನಷ್ಟ ಮೊಕದ್ದಮೆಯನ್ನು ಕೋರ್ಟ್ ಇತ್ಯರ್ಥಗೊಳಿಸಿದೆ.

ಜೈರಾಮ್ ರಮೇಶ್ ವಿರುದ್ಧವಷ್ಟೇ ಅಲ್ಲದೇ, ದಿ ಕ್ಯಾರವಾನ್, ಪತ್ರಕರ್ತರಾದ ಕೌಶಲ್ ಶ್ರಾಫ್ ಅವರ ವಿರುದ್ಧವೂ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು. 2019 ರಲ್ಲಿ ರಮೇಶ್ ಅವರಿಗೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನನ್ನೂ ಮಂಜೂರು ಮಾಡಲಾಗಿತ್ತು.

SCROLL FOR NEXT